ರಾಯಚೂರು.ಫೆ.4.ವಟಗಲ್ ಬಸವೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಕೆಬಿಜೆಎನ್ಎಲ್ ನಿಂದ ಸರ್ವೆ ಟೆಂಡರ್ ಪ್ರಕ್ರಿಯೆಯನ್ನು ಮುಂದುವರಿದಿ ತ್ವರಿತಗತಿಯಲ್ಲಿ ರೈತರ ಜಮೀನುಗಳಿಗೆ ನೀರು ಹರಿಸಬೇಕು ಎಂದು ವಟಗಲ್ ಬಸವೇಶ್ವರ ಏತ ನೀರಾವರಿ ಹೋರಾಟ ಸಮಿತಿಯ ಮುಂಖಡರು ಪ್ರತಿಭಟನೆ ನಡಿಸಿದರು.ಅವರಿಂದು ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸುತ್ತ ಮಸ್ಕಿ ವಿಧಾನಸಭೆ ವ್ಯಾಪ್ತಿಯ ಪಾಮನಕಲ್ಲೂರು, ಅಮಿನಗಡ, ವಟಗಲ್, ಮತ್ತು ಅಂಕುಶದೊಡ್ಡಿ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು ೨೪ ಗ್ರಾಮಗಳ ರೈತರು ವಟಗಲ್ ಏತ ನೀರಾವರಿ ಯೋಜನೆ ಟೆಂಡರ್ ಪ್ರಕ್ರಿಯೆಯನ್ನು ಮುಂದುವರೆಸಬೇಕು ಎಂದು ಘೋಷಣೆ ಕೋಗಿದರು.
ಜಿಲ್ಲೆಯ ಎರಡು ಭಾಗದಲ್ಲಿ ಕೃಷ್ಣ ಮತ್ತು ತುಂಗಭದ್ರಾ ನದಿಗಳು ಹರಿಯುತ್ತಿದ್ದರೂ ನೀರಾವರಿ ಸೌಲಭ್ಯ ದಿಂದ ವಂಚಿತರಾಗಿದ್ದೇವೆ.
ನೀರಾವರಿ ಸೌಲಭ್ಯಕ್ಕಾಗಿ ನಂದವಾಡಗಿ ಮತ್ತು ೫ಎ ವಿತರಣಾ ಕಾಲುವೆ ನಿರ್ಮಾಣಕ್ಕೆ
ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಿದೆ ಎಂದರು.ನೀರಿನ ಲಭ್ಯತೆ ಮತ್ತು ತಾಂತ್ರಿಕ ಕಾರಣಗಳಿಂದ ೫ಎ ನಾಲೆ ಯೋಜನೆ ಜಾರಿಗೆ ಕಷ್ಟ ಮತ್ತು ನದಿ ಜೋಡಣೆಯಿಂದ ಲಭ್ಯವಾಗುವ ನೀರಿನ ಯೋಜನೆ ಪ್ರಸ್ತಾಪಿಸಬಹುದೆಂದು ನಿರಾವರಿ ಇಲಾಖೆ ಸ್ಪಷ್ಟ ನಿಲುವು ತಾಳಿದೆ.ನದಿ ಜೋಡಣೆ ಕಾಲಮಿತಿಯಲ್ಲಿ ನಿಗದಿಯಾಗಿಲ್ಲ, ಕೂಡಲೇ ರೈತರ ನಿಲುವಿನಂತೆ ಹನಿ ನೀರಾವರಿ ಸೌಲಭ್ಯ ಪಡೆಯಲು ಸಾಧ್ಯ ವಾಗುವ ಯೋಜನೆ ಜಾರಿಗೊಳಿಸಲು ಸರ್ಕಾರಕ್ಕೆ ಆಗ್ರಹಿಸಿದರು.
ನಂದವಾಡಗಿ ೨ನೇ ಹಂತದಲ್ಲಿ ೨.೨೫ ಟಿಎಂಸಿ ನೀರನ್ನು ಬಳಸಿಕೊಂಡು ಹನಿ ನೀರಾವರಿಯನ್ನು ಹರಿ ನೀರಾವರಿ ಯನ್ನು ಜಾರಿಗೊಳಿಸಿದರೆ ಅನುಕೂಲಗುತ್ತದೆ ಎಂದು ಒತ್ತಾಯಿಸಿದ್ದು,
ಜಲ ಸಂಪನ್ಮೂಲ ಸಚಿವರು ಸ್ಪಂದಿಸಿ ವಟಗಲ್ ಬಸವೇಶ್ವರ ಏತ ನೀರಾವರಿ ಯೋಜನೆ ಸರ್ವೆ ಕಾರ್ಯಕ್ಕೆ ಟೆಂಡರ್ ಕರೆದಿದೆ.ಅತೀ ಶೀಗ್ರದಲ್ಲೆ ಕಾಮಗಾರಿ ನಡೆಸಿ ನೀರು ಹರಿಸುವ ಮೂಲಕ ರೈತರನ್ನು ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಟಗಲ್, ಅಮಿನಗಡ, ಅಂಕುಶದೊಡ್ಡಿ ಗ್ರಾಪಂ ವ್ಯಾಪ್ತಿಯ ರೈತರು ಭಾಗವಹಿಸಿದ್ದರು.