ರಾಯಚೂರು.ಫೆ.4.ವಿವಿದೋದ್ದೇಶ ಪುನರ್ವಸತಿ,ಗ್ರಾಮೀಣ,ನಗರ ಪುನರ್ವಸತಿ ಕಾರ್ಯಕರ್ತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ವಿಕಲಚೆತನರ ಹಾಗೂ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡಿಸಿದರು.
ಅವರಿಂದು ನಗರದ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸುತ್ತಾ ರಾಜ್ಯ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ವೃದ್ಧ ಮತ್ತು ನೇಮಕಾತಿ ಆಗಿರುವ ತಿದ್ದುಪಡಿಯ ಅನುಗುಣವಾಗಿ ಕಳೆದ 13 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ನಮ್ಮ ಕಾರ್ಯಕರ್ತರನ್ನು ಖಾಯಂ ಗೊಳಿಸಬೇಕು. ಆಕಸ್ಮಿಕವಾಗಿ ದುರ್ಘಟನೆಗೆ ಗುರಿಯಾಗಿ ಮರಣ ಹೊಂದಿದವರಿಗೆ ನೌಕರಿ ಮರಣ ಪರಿಹಾರಧನವನ್ನು 30 ಲಕ್ಷವನ್ನು ವಿತರಿಸಬೇಕು, ರಾಜ್ಯ ಅಂಗವಿಕಲರ ಅದಿನಿಯಮದ ರಾಜ್ಯ ಆಯುಕ್ತರ ಹುದ್ದೆಯು ವಿಕಲಚೇತನರಿಗಾಗಿ ಮೀಸಲಿರಿಸಿ ಹುದ್ದೆಗೆ ಅರ್ಹ ವಿಕಲಚೇತನರ ನೇಮಿಸಬೇಕು,ವಿಕಲಚೇತನರ ಮಾಶಾಸನವನ್ನು 5 ಸಾವಿರ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಹಮದ್ ಅಲಿ ಮಟಮಾರಿ, ಬಸವರಾಜ, ವಿ.ಎಸ್. ರಾಘವೇಂದ್ರ, ಅಮರೇಶ ಯಾದವ್, ನಾಗರಾಜ ಗೌಡ,ಲೋಕಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.