ರಾಯಚೂರು.ಫೆ.4.ಸ್ಟಾರ್ಕ್ವೀ ಕೆಮಿಕಲ್ ಕಂಪನಿ ಕಾರ್ಮಿಕರನ್ನು ಮರು ನೇಮಕ ಮಾಡಿಕೊಳ್ಳ ಬೇಕು ಎಂದು ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಟಿಪ್ಪುಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿ ತಾಲೂಕಿನ ಚಿಕ್ಕಸೂಗೂರು ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಸ್ಟಾರ್ಕ್ಟಿ ಫೈನ್ ಕೆಮಿಕಲ್ಸ್ ಲಿ.ಕಂಪನಿಯಲ್ಲಿ ಕೆಲಸ ಮಾಡುವ 70ಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕಂಪನಿ ಆಡಳಿತವರ್ಗ ಇತ್ತೀಚೆಗೆ ಕಾನೂನು ಬಾಹಿರವಾಗಿ ವಜಾಗೊಳಿಸಿರುವುದನ್ನು ಖಂಡಿಸಿದರು.
ದೇಶದ ಸಂವಿಧಾನದ ಮೂಲಭೂತ ಆಶಯ ವಾದ ಸಂಘ ಕಟ್ಟಿಕೊಳ್ಳುವ ಹಕ್ಕು, ಶೋಷಣೆ ವಿರುದ್ಧದ ಹಕ್ಕು, ಜೀವಿಸುವ ಹಕ್ಕುಗಳನ್ನು ಕಿತ್ತುಕೊಂಡಿದ್ದಾರೆ. ಬಡ ಕಾರ್ಮಿಕರನ್ನು ಬೀದಿಗೆ ತಳ್ಳಿದೆ. ಕಾರ್ಮಿಕರ ಬದುಕಿಗೆ ಉದ್ಯೋಗ ಆಶ್ರಯಿಸಿದ್ದು, ಇದೀಗ ಕುಟುಂಬಗಳಿಗೆ ತೀವ್ರ ಸಂಕಷ್ಟಕ್ಕೀಡಾಗಿವೆ ಎಂದರು.
ಜ. 27 ರಿಂದ 7-8 ದಿನಗಳಿಂದ ಕಂಪನಿಯ ಕಾರ್ಖಾನೆಯ ಮುಂದೆ ಅನಿರ್ಧಿಷ್ಟ ಪ್ರತಿಭಟನಾ ಧರಣಿಯನ್ನು ನಡೆಸುತ್ತಿರುವ ಕಾರ್ಮಿಕರ ಹೋಟಕ್ಕೆ ರೈತ, ಕಾರ್ಮಿಕ, ದಲಿತ ಕನ್ನಡಪರ ಪ್ರಗತಿಪರ ಸಂಘಟನೆಗಳು ಬೆಂಬಲಿಸಿದೆ.
ಕಾರ್ಮಿಕರ ಬದುಕಿಗೆ ಧಕ್ಕೆಯಾಗದಂತೆ ಕೂಡಲೇ
ಆಡಳಿತವರ್ಗ ಮಾತುಕತೆ ಮೂಲಕ ಸಮಸ್ಯೆಯನ್ನು ಪರಿಹರಿಸಬೇಕೆಂದು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರಾದ ಖಾಜಾ ಅಸ್ಲಂ ಅಹಮದ್,
ಜಾನ್‌ವೆಸ್ಲಿ, ಡಿ.ಎಸ್‌ಶರಣಬಸವ,ಸುರೇಶಬಾಬು
ಬಸವರಾಜ ಗಾರಲದಿನ್ನಿ, ನಿಸಾರ ಅಹಮದ್,
ಮಹೇಶ್ ಸಿ, ಚನ್ನಬಸವ ಜಾನೇಕಲ್, ರಾಘವೇಂದ್ರ, ಆನ್ವರ್ ಹುಸೇನ್ ಎಂ.ಆರ್.ಬೇರಿ ಸೇರಿದಂತೆ ಅನೇಕರು ಇದ್ದರು.