ಹೊಸಪೇಟೆ: ಸರಕಾರಗಳಿಂದ ಬರುವ ವಿವಿಧ ಸಾಲ ಸೌಲಭ್ಯ ಮತ್ತು ಸ್ವಯಂ ಉದ್ಯೋಗಕ್ಕೆ ನಿರುದ್ಯೋಗ ಯುವಕ ಯುವತಿಯರಿಗೆ ನಿಜವಾದ ಫಲನುಭವಿಗಳಿಗೆ ತಲುಪಿಸುವ ಕೆಲಸ ಮಾಡಬೇಕಿದೆ ಎಂದು ಹಿರಿಯ ಖ್ಯಾತ ವೈದ್ಯ ಡಾ.ವಿಜಯ ವೆಂಕಟೇಶ ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಮರಿಯಮ್ಮನಹಳ್ಳಿಯ ಪಟ್ಟಣದಲ್ಲಿ ಗುರುವಾರ ಬ್ಯಾಂಕ್ ಆಫ್ ಇಂಡಿಯಾದ 50ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಇಲ್ಲದೇ ಸಾಕಷ್ಟು ಯುವಕ ಯುವತಿಯು ಅಲೆದಾಡುತ್ತಿರುತ್ತಾರೆ ಅಂತವರಿಗೆ ಸರಕಾರದಿಂದ ಸ್ವಯಂ ಉದ್ಯೋಗ ಕಂಡು ಕೊಳ್ಳುವುದಕ್ಕೆ ಸಾಲವನ್ನು ನೀಡುತ್ತದೆ ರಾಜಕೀಯ ಒತ್ತಡಗಳಿಗೆ ಮಣಿಯದೇ ನಿಜವಾದ ಫಲಾನುಭವಿಗೆ ಕೊಟ್ಟರೇ ಅವನು ಉದ್ಯೋಗವನ್ನು ಕಂಡುಕೊAಡು ತನ್ನ ಕುಟುಂಬವನ್ನು ಸಾಕುತ್ತಾನೆ. ಸೌಲಭ್ಯ
ಇಲ್ಲಿಗೆ ಬರುವ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಹಳ್ಳಿಗಳಿಂದ ಬರುವವರಿದ್ದಾರೆ ಅವರಿಗೆ ನಿಮ್ಮ ಬ್ಯಾಂಕಿನ ಸೌಲಭ್ಯಗಳ ತಿಳಿ ಹೇಳಿದಾಗ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬರುತ್ತಾರೆ ಎಂದರು.
ಈ ಸಂದರ್ಭದಲ್ಲಿ ಇನ್ನೋರ್ವ ಮುಖ್ಯ ಅಥಿತಿ ಡಿ.ರಾಘವೇಂದ್ರ ಶೆಟ್ಟಿ ಮಾತನಾಡಿ, ಸರ್ಕಾರಗಳಿಂದ ಬರುವ ವಿವಿಧ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ತಿಳಿಸಿ ಆಗ ಸೌಲಭ್ಯಗಳ ಪಡೆದುಕೊಂಡು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರಿಂದ ಬ್ಯಾಂಕ್ ಅಭಿವೃದ್ಧಿಯಾಗುತ್ತದೆ ಎಂದರು.
ಇನ್ನೋರ್ವ ವರ್ತಕ ಬದ್ರಿನಾಥ ಶೆಟ್ಟಿ ಮತ್ತು ಇನ್ನಿತರ ವರ್ತಕರು ಮಾತನಾಡಿದರು. ಈ ಸಂದರ್ಭದಲ್ಲಿ ಬ್ಯಾಂಕ್ ವ್ಯವಸ್ಥಾಪಕ ಎಸ್ ವಿಟಿ ಎಂಗಲ್ಸ್, ಆಡಳಿತ ಅಧಿಕಾರಿ, ರಾಮ್ ಸಿಂಗ್ ಮಹಾತೊ, ಫೀಲ್ಡ್ ಆಫೀಸರ್ ಪ್ರಸಾದ್ ಕುರುಗೊಡು, ಕೃಷಿ ಅಧಿಕಾರಿ ವೀಣಾ, ಶಿವರಾಜ್, ಅಖಿಲ್ ಯು, ಕಲ್ಯಾಣಿ, ಸಿದ್ದಪ್ಪ, ರಮೇಶ್, ಲೆಕ್ಕಾಧಿಕಾರಿ ರಾಜೇಶ್ ಮಡಕ, ಸಹ ಸಿಬ್ಬಂದಿ ವರ್ಗ, ಯಲ್ಲಪ್ಪ, ರಾಘವೇಂದ್ರ, ಶ್ರೀನಿವಾಸ, ಬಿಡಿಸಿಸಿ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕೆ ರೂಪ ಎಮ್ ಪೂಜಾರ್, ನಾಗವೇಣಿ, ಜಯಪ್ರಕಾಶ, ಪ್ರಿಯದರ್ಶಿನಿ ಕಾಲೇಜಿನ ಪ್ರಾಚಾರ್ಯ ಆಶೋಕ ಇನ್ನಿತರರಿದ್ದರು.