ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ.
ಸಿಂಧನೂರು: ಚುನಾವಣೆ ಅಧಿಕಾರಿ ಮಾಡಿದ ಎಡವಟ್ಟು ನಿಂದ ಜೆಡಿ ಎಸ್ ಹಾಗೂ ಬಿಜೆಪಿ ಪಕ್ಷದ ಬೆಂಬಲಿಗರು ಸಂಭ್ರಮ ಆಚರಣೆ,ಕಾಂಗ್ರೆಸ್ ಪ್ರತಿಭಟನೆ ತಾಲೂಕು ಆಡಳಿತಕ್ಕೆ ಹಾಗೂ ಪೋಲಿಸ್ ಇಲಾಖೆಗೆ ದೊಡ್ಡ ತಲೆನೋವು …
ತಾಲೂಕು ಸಿಂಧನೂರು ಗ್ರಾಮೀಣ ಆರ್.ಹೆಚ್ 1 ಗ್ರಾಮ ಪಂಚಾಯತಿ ಗೆ ಶುಕ್ರವಾರ ರಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ನಡೆಯಿತು. ಜೆಡಿ ಎಸ್ ಹಾಗೂ ಬಿಜೆಪಿ ಪಕ್ಷವು ಮೈತ್ರಿ ಮಾಡಿಕೊಂಡ ಅಭ್ಯರ್ಥಿ ಗಳು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಜಯಭೇರಿ ಬಾರಿಸಿದರು. ಒಟ್ಟು 38 ನೂತನವಾಗಿ ಸದಸ್ಯರು ಗ್ರಾಮ ಪಂಚಾಯತಿ ಚುನಾವಣೆ ಗೆಲುವು ಸಾಧಿಸಿದರು .ನಿಗದಿತ ಸಮಯಕ್ಕೆ ಸರಿಯಾಗಿ ನಾಮ ಪತ್ರ ಸಲ್ಲಿಕೆ ಆರಂಭ ಗೊಂಡಿತು.ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಹಾಗೂ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಮೈತ್ರಿ ಕೂಟ ಬೆಂಬಲಿತ ಸದಸ್ಯರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಮ ಪತ್ರ ಸಲ್ಲಿಸಿದರು.
ಚುನಾವಣೆ ಅಧಿಕಾರಿ ಎರಡೂ ಮತಗಳನ್ನು ಪೂರ್ವದಲ್ಲಿ ಅಸಿಂಧು ಗೊಳಿಸಿ ನಂತರ ಅದನ್ನು ಪರಿಗಣನೆಗೆ ತೆಗೆದುಕೊಂಡು ಮಾಡಿದ ಎಡವಟ್ಟು ನಿಂದ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಮೈತ್ರಿ ಅಭ್ಯರ್ಥಿ ಅಧ್ಯಕ್ಷರಾಗಿ ಆಯ್ಕೆಯಾದರು. ಇದನ್ನು ವಿರೋಧಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯರು ಹೊರಗಡೆ ಬಂದರು. ಪುನಃ ಮತ್ತೆ ಚುನಾವಣೆ ಅಧಿಕಾರಿ ಕಾಂಗ್ರೆಸ್ ಪಕ್ಷದ ಸದಸ್ಯರು ಹೊರಗಡೆ ಹೊದರು ಸಹ ಉಪಾಧ್ಯಕ್ಷ ರಾಗಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಮೈತ್ರಿ ಅಭ್ಯರ್ಥಿ ಮಾಡಿ ಘೋಷಣೆ ಮಾಡಿದರು.
ಇದನ್ನು ಖಂಡಿಸಿ ಜಿಲ್ಲಾ ಪಂಚಾಯತ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಬಾಬುಗೌಡ ಬಾದರ್ಲಿ ನೇತೃತ್ವದಲ್ಲಿ ನೂತನ ಆಯ್ಕೆ ಗೊಂಡ ಸದಸ್ಯರು ಪಂಚಾಯತ ಸಭಾಂಗಣ ಮುಂದೆ ಪ್ರತಿಭಟನೆ ಮಾಡಿದರು. ಸ್ಥಳಕ್ಕೆ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಆಗಮಿಸಿ ಚುನಾವಣೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಮತದಾನ ಪೂರ್ವ ದಿಂದಲೂ ಮಾಡಿದ ವೀಡಿಯೋ ದಾಖಲೆ ಗಳನ್ನು ಜೊತೆಗೆ ಇತರೆ ದಾಖಲೆ ಗಳ ಪ್ರತಿ ಗಳನ್ನು ಪಡೆದುಕೊಂಡು ನ್ಯಾಯಾಂಗದ ಮೊರೆ ಹೋಗುವುದಾಗಿ ತಿಳಿಸಿದರು..
ತಾಲೂಕು ಎಲ್ಲಾ ಕಡೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆಯು ಪೂರ್ಣ ಗೊಂಡರು. ಸಿಂಧನೂರು ಗ್ರಾಮೀಣ ಆರ್ ಹೆಚ್ 1 ಪಂಚಾಯತಿ ಯಲ್ಲಿ ರಾತ್ರಿ ಸುಮಾರು 9 ಗಂಟೆಗೆ ಚುನಾವಣೆ ಪ್ರಕ್ರಿಯೆ ನಡೆಯಿತು.
ಮುಂಜಾಗ್ರತಾ ಕ್ರಮವಾಗಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸಿಂಧನೂರು ಉಪ ವಿಭಾಗದ ಡಿವೈಎಸ್ಪಿ ವಿಶ್ವನಾಥ್ ರಾವ್ ಕುಲಕರ್ಣಿ ಹಾಗೂ ಸಿಪಿಐ ಚಂದ್ರಶೇಖರ್ ಒಳಗೊಂಡಂತೆ 5 ಪಿಎಸ್ ಐಗಳು ಸೇರಿದಂತೆ ಐವತ್ತು ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳು ಪಂಚಾಯಿತಿ ಮುಂಜೆ ನಿಯೋಜನೆಗೊಂಡಿದ್ದಾರೆ.
ಒಟ್ಟಾರೆ ಚುನಾವಣೆ ಅಧಿಕಾರಿ ಎಡವಟ್ಟು ನಿಂದ
ತಾಲೂಕು ಆಡಳಿತಕ್ಕೆ ಹಾಗೂ ಪೋಲಿಸ್ ಇಲಾಖೆಗೆ ದೊಡ್ಡ ತಲೆನೋವು ಆಗಿತ್ತು.