ರಾಯಚೂರು.ಫೆ.6.ದೇಶಾದ್ಯಾಂತ ತೈಲ ,ಅನಿಲ ಹಾಗೂ ದವಸ – ಧಾನ್ಯಗಳ ಬೆಲೆಗಳನ್ನು ಇಳಿಕೆ ಮಾಡಲು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ವತಿಯಿಂದ ಪ್ರತಿಭಟನೆ ನಡಿಸಿದರು.
ಅವರಿಂದು ಜಿಲ್ಲಾಧಿಕಾರಿಗಳ ಸ್ಥಾನಿಕ ಕಚೇರಿ ಅಧಿಕಾರಿಗಳ ಮುಖಾಂತರ ಪ್ರದಾನ ಮಂತ್ರಿಗಳಿಗೆ ಮನವಿ ಸಲ್ಲುಸಿದ ಅವರು ದೇಶಾದ್ಯಾಂತ ತೈಲ, ಅನಿಲ ಹಾಗೂ ದಿನಬಳಕೆ ಮಾಡುವ ದವಸಧಾನ್ಯಗಳ ಬೆಲೆಗಳನ್ನು ದಿನ ನಿತ್ಯಾ ಏರಿಕೆಯಾಗುತ್ತಿದೆ , ಇದರಿಂದ ಸಾರ್ವಜನಿಕರಿಗೆ , ರೈತ , ಮಧ್ಯಮ ವರ್ಗದವರಿಗೆ ಹಾಗೂ ಕಡು ಬಡವರಿಗೆ ತುಂಬಾ ತೊಂದರೆ ಉಂಟು ಮಾಡಿದೆ . ಈಗಾಗಲೇ ಲಾಕ್ ಡೌನ್ ಮೂಲವಾದ ತೊಂದರೆಯಿಂದ ರೈತರಿಗೆ ಮತ್ತು ಸಾಮಾನ್ಯ ವಾಪಾಡಿಗಳಿಗೆ ಹಾಗೂ ಜನರಿಗೆ ಕುಂಬಾ ನಷ್ಟ ಉಂಟುಮಾಡಿದೆ . ಇದರಿಂದ ಕತ್ತರಿಸಿದ ಜನರಿಗೆ ತೈಲ ಹಾಗೂ ಅನಿಲ ( ಗ್ಯಾಸ ) ಬೆಲೆ ಏರಿಕೆಯಾಗಿದೆ ಬಡ ಜನರಿಗೆ ಜೀವನ ನಡೆಸಲು ಆಗುತಿಲ್ಲ ಅದ ಕಾರಣ ಕೂಡಲೇ ಬೆಳೆಗಳನ್ನು ಕಡಿಮೆ ಮಾಡಲು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಎಸ್.ಶರಣಪ್ಪ,ಕೆ.ಶಿವಯ್ಯ,ಮುಸ್ತಪಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.