ರಾಯಚೂರು:ನಗರದ ವಾರ್ಡ್ ನಂ.31 ರಲ್ಲಿ ಅತಿಯಾದ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿ ಅಪಾರ ನಷ್ಟವಾಗಿದೆ. ನಿವಾಸಿಗಳ ಬ್ಯಾಂಕ್ ಖಾತೆಗೆ ಪರಿಹಾರಧನ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದಿಂದ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಳೆದ ಏಳೆಂಟು ತಿಂಗಳ ಹಿಂದೆ ನಗರದಲ್ಲಿ ಮಳೆಗಾಲದಲ್ಲಿ ಸುರಿದ ಭಾರೀ ಮಳೆಯಿಂದ ಹರಿಜನವಾಡ, ನವಾಬಗಪ್ಪಾ ದೇವಿನಗರ, ಜಲಾಲ್‌ನಗರ, ಸಿಯಾತಲಾಬ್‌ನ ಬಡಾವಣೆಯ ಮನೆಗಳಲ್ಲಿ ನೀರು ನುಗ್ಗಿ ಅಪಾರ ನಷ್ಟವುಂಟಾ ಗಿದೆ. ಜಿಲ್ಲಾಡಳಿತ ಕೆಲವೇ ಕೆಲವು ಖಾತೆಗಳಿಗೆ ಪರಿಹಾರ ನೀಡಿದೆ. ವಾರ್ಡ್ ನಂ.31 ರಲ್ಲಿ ಕೇವಲ ಬೆರಳೆಣಿಕೆಯಷ್ಟು ನಿವಾಸಸಿಗಳಿಗೆ ಮಾತ್ರ, ಖಾತೆಗಳಿಗೆ ಹಣ ಜಮಾ ಮಾಡದೆ ಎಂದರು.
ಇನ್ನುಳಿದ ನೆರೆ ಸಂತ್ರಸ್ಥರಿಗೆ ಇದುವರೆಗೂ ಪರಿಹಾರ ಹಣವನ್ನು ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿಲ್ಲ ಎಂದರು.
ವಾರ್ಡ್ ನಂ . 30 ಮತ್ತು 31 ರ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಮನೆಗಳ ವಿವರಗಳ ವರದಿಯನ್ನು ತಹಶೀಲ್ದಾರರಿಗೆ ಪಟ್ಟಿ ಕಳುಹಿಸಿದೆ ಎಂದು ಪೌರಾಯುಕ್ತರು ಹೇಳಿದ್ದಾರೆ.
ಆದರೆ ಕೇವಲ 484 ಜನರಿಗೆ ಮಾತ್ರ ರೂ . 10000 ಜಮಾ ಮಾಡಿದ್ದು, 484 ರಲ್ಲಿ ಸುಮಾರು 11 ಜನರಿಗೆ ಆಧಾಕಾರ್ಡ್ ನಂಬರ್, ಐಎಫ್‌ಎಸ್‌ಸಿ ಕೋಡ್ ಅಕೌಂಟ್ ನಂಬರ್ ನೀಡಿದೆ. ಹಣ ಜಮಾ ಆಗಿಲ್ಲ, ಆಧಾರ್ ಕಾರ್ಡ್ ಬ್ಯಾಂಕ್ ವಿವರ ಪಡೆದುಕೊಂಡು ಹೋಗಿದ್ದು , ಇಲ್ಲಿಯವರೆಗೂ ಸಹ ಇದುವರೆಗೆ ಪರಿಹಾರ ಹಣವನ್ನು ಜಮಾ ಮಾಡಿಲ್ಲ, ಅರ್ಹ ಫಲಾನುಭವಿಗಳಿಗೆ ಹಣ ಜಮಾ ಮಾಡದೇ ಅನ್ಯ ಖಾತೆಗಳಿಗೆ ಜಮಾ ಮಾಡಿದೆ ಎಂದು ದೂರಿದರು.
757 ಸಂತ್ರಸ್ಥರ ಖಾತೆಗಳ ಪಟ್ಟಿ ನೀಡಿದೆ.
ಈ ಬಗ್ಗೆ ಪರಿಶೀಲಿಸಿ, ಇನ್ನುಳಿದ ಸಂತ್ರಸ್ತರಿಗೆ ಕೂಡಲೇ ಪರಿಹಾರದ ಹಣವನ್ನು ಖಾತೆಗಳಿಗೆ ಜಮಾ ಮಾಡುವಂತೆ ಆದೇಶ ನೀಡಬೇಕೆಂದು
ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಖಲೀಲ್ ಪಾಷಾ, ರಾಚಯ್ಯಸ್ವಾಮಿ, ಬಂದೇನವಾಜ, ಫಾರುಕ್, ಪಾಂಡುರಂಗ, ರಾಮು,ಸುದರ್ಶನ, ಸಾಧಿಕ್, ಜಾಕಿರ್, ಈರಣ್ಣ, ಈರೇಶ, ರವಿ, ರಫಿ, ಮೌಲಾಸಾಬ್, ರಾಮಚಂದ್ರ, ಚಾಂದ್ ಪಾಷಾ, ಮಹೆಬೂಬ್, ಸೇರಿದಂತೆ ಅನೇಕರು ಇದ್ದರು.