ರೈತರಿಂದ ವ್ಯಾಪಕ ರಸ್ತೆ ತಡೆ.

 

ವಿಜಯನಗರವಾಣಿ

ರಾಯಚೂರು ಜಿಲ್ಲೆ

ರಾಜ್ಯ ಹೆದ್ದಾರಿ ಹಾಗೂ ಹೆದ್ದಾರಿಗೆ ಹೊಂದಿಕೊಂಡಿರುವ ಸುತ್ತಲ ರಸ್ತೆಗಳೆಲ್ಲಾ ಬಂದ್

ರೈತರ ರಸ್ತೆ ತಡೆಗೆ ಎಲ್ಲಾ ಸಂಘಟನೆಗಳ ಬೆಂಬಲ. ಭೂ ಸುಧಾರಣೆ ಕಾಯ್ದೆ ವಿರೋಧಿಸಿ ಆಕ್ರೋಶ

ಲಿಂಗಸೂಗೂರೂ : ರಾಜ್ಯದಾದ್ಯಂತ ಹಮ್ಮಿಕೊಂಡಿರುವ ಕೇಂದ್ರದ ರೈತ ವಿರೋಧಿ ನೀತಿಯನ್ನು ಖಂಡಿಸಿ ನಡೆಸಲಾಗುತ್ತಿರುವ ರಸ್ತೆ ತಡೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಬಸ್ ನಿಲ್ದಾಣದ ರಸ್ತೆಯ ಬಳಿ ರಾಜ್ಯ ಹೆದ್ದಾರಿ ರಸ್ತೆ ತಡೆ ರೈತ ಮುಖಂಡರು ಹಾಗೂ ಇತರೆ ಸಂಘಟನೆಗಳು ರಸ್ತೆಗಳನ್ನು ಬಂದ್ ಮಾಡುವ ಮೂಲಕ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿವೆ.ಕೇಂದ್ರ ಸರ್ಕಾರ ನಮ್ಮನ್ನು 7 ವರ್ಷಗಳಿಂದ ಹತ್ತಿಕುತ್ತಲಿದ್ದು ರೈತರನ್ನು ಕಡೆಗಣಿಸುವ ಮೂಲಕಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನ ಹೇರಲು ಹೊರಟಿದೆ. ರೈತ ವಿರೋಧಿ ಕಾಯ್ದೆಗಳನ್ನ ವಾಪಸ್ ಪಡೆಯುವಂತೆ ರೈತ ಮುಖಂಡರು ಪ್ರತಿಭಟನೆ ನಡೆಸುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆˌ

Share and Enjoy !

Shares