ಸರಿಯಾದ ಸಮಯಕ್ಕೆ ಬಸ್ ಇಲ್ಲದೆ ವಿದ್ಯಾರ್ಥಿಗಳ ಪರದಾಟ

Share and Enjoy !

Shares
Listen to this article

 

ರಾಯಚೂರು ಜಿಲ್ಲೆ
ಮುದಗಲ್ಲ: ಪಟ್ಟಣಕ್ಕೆ ನಿಗದಿತ ಸಮಯಕ್ಕೆ ಬಸ್‌ಗಳು ಬಾರದೆ ವಿದ್ಯಾರ್ಥಿಗಳು ಹಿಡಿಶಾಪಹಾಕುವುದು ದಿನನಿತ್ಯ ಸಾಮಾನ್ಯವಾಗಿದೆ.
ಮುದಗಲ್ಲ ತಾಲ್ಲೂಕು ಕೇಂದ್ರದಲ್ಲಿ ತಾಲ್ಲೂಕಿನ ಕೆಲವು ಮಾರ್ಗಗಳಲ್ಲಿ ksrtc ಮಾತ್ರ ಕಡಿಮೆ ಬಸ್ ಸಂಚಾರವಿದ್ದರೆ,
ಮುದಗಲ್ಲ ನಿಂದ ಲಿಂಗಸ್ಗೂರು 20 ಕಿ ಮೀ ಸಾರಿಗೆ ಬಸ್‌ಗಳನ್ನು ವಿದ್ಯಾರ್ಥಿಗಳು ಹಾಗೂ ದಿನ ನಿತ್ಯದ ಪ್ರಯಾಣಿಕರು ಅವಲಂಬಿಸಿದ್ದಾರೆ.
ಕಡಿಮೆ ಸಂಚರಿಸುವ ಬಸ್‌ಗಳು ಒಂದೆಡೆಯಾದರೆ ಬರುವ ಮತ್ತು ಹೋಗುವ ಬಸ್‌ಗಳು ನಿಗದಿತ ಸಮಯಕ್ಕೆ ಬಾರದಿದ್ದರೆ ಸೂಕ್ತ ವೇಳೆಯಲ್ಲಿ ಶಾಲಾ ಕಾಲೇಜಿಗೆ ಹೋಗಿ ಬರಲು ಹೇಗೆ ಸಾಧ್ಯ ಎಂಬುದು ವಿದ್ಯಾರ್ಥಿಗಳ ಆತಂಕ.
ಕಳೆದ ಎರಡು ತಿಂಗಳ ಅಲವಾರು ಘಟಕದಿಂದ ನಾಲ್ಕು ರಿಂದ ಐದು ಬಸ್‌ಗಳನ್ನು ಬೆಳಿಗ್ಗೆ 8.30ರಿಂದ 9.30ರ ವೇಳೆಯಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುತ್ತೀಲ್ಲ.
ಸಾರಿಗೆ ಸೇವೆಯ ಸಂಚಾರವನ್ನು ಹೆಚ್ಚಿನ ಬಸ್ ಗಳ, ಇಲ್ಲದಿರುವುದು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ವಿವಿಧ ಇಲಾಖೆಗಳಿಗೆ ತೆರಳುವ ನೌಕರರಿಗೆ ಸಂಕಷ್ಟವಾಗಿದೆ ಎಂಬುದು ಪ್ರಯಾಣಿಕರ ದೂರು.

ಡಿಪ್ಲೋಮಾ, ಬಿ.ಎ ಪದವಿ ಮತ್ತು ಶಾಲೆಗಳಿವೆ .ಲಿಂಗಸ್ಗೂರು ಐದಾರು ಕಾಲೇಜು ಮತ್ತು ತಾಲ್ಲೂಕು ಕೇಂದ್ರದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಿವೆ.
ಪಟ್ಟಣದಿಂದ ಲಿಂಗಸ್ಗೂರು ತಾಲ್ಲೂಕು ಕೇಂದ್ರಕ್ಕೆ ಪ್ರತಿದಿನ ಕನಿಷ್ಠ 250 ರಿಂದ 300 ಶಾಲಾ ಕಾಲೇಜು ವಿದ್ಯಾರ್ಥಿಗಳು 7.30 ರಿಂದ 9 ಗಂಟೆ ಒಳಗೆ ತಲುಪಬೇಕು, ಆದರೆ, ಬಸ್‌ಗಳು ನಿಗದಿತ ಸಮಯಕ್ಕೆ ಬಾರದಿರುವುದು ಮತ್ತು ಕಡಿಮೆ ಬಸ್‌ ಗಳು ಸಂಚರಿಸುತ್ತಿರುವುದರಿಂದ ತರಗತಿ ವೇಳೆ ತಲುಪಲು ಸಾಧ್ಯವಾಗುತ್ತಿಲ್ಲ ಎನ್ನುವುದು ವಿದ್ಯಾರ್ಥಿಗಳ ಗೋಳು.
ಪ್ರತಿದಿನ ಒಂದರಿಂದ ಎರಡುಗಂಟೆ ತಡವಾಗಿ ತಲುಪುವುದರಿಂದ ಮೊದಲ ಅವಧಿಯ ಮುಖ್ಯ ಬೋಧನಾ ವಿಷಯದಿಂದ ವಂಚಿತರಾಗುತ್ತಿದ್ದೇವೆ,
ಅಲ್ಲದೆ ತಡವಾಗಿ ತರಗತಿ ಪ್ರವೇಶ ಮಾಡಿದರೆ ಮನಸ್ಸಿಗೆ ಹಿಂಸೆಯಾಗು­ತ್ತದೆ. ಉಪನ್ಯಾಸಕರು ಮತ್ತು ಶಿಕ್ಷಕರು ಸಹ ನಮ್ಮ ಸಂಕಷ್ಠ ಅರ್ಥ ಮಾಡಿ­ ಕೊಳ್ಳುವುದಿಲ್ಲ, ಅಪರಾಧಿ ತರಹ ನಮ್ಮನ್ನು ಕಾಣುತ್ತಾರೆ’ ಎಂದು ಲಿಂಗಸ್ಗೂರು ಕಾಲೇಜಿಗೆ ತೆರಳಲು ಬಂದಿದ್ದ ಪ್ರಥಮ ವಿದ್ಯಾರ್ಥಿನಿಗಳ ಅಳಲು.
ಲಿಂಗಸ್ಗೂರು ತಾಲ್ಲೂಕು ಕೇಂದ್ರಕ್ಕೆ ಕನಿಷ್ಠ ಆರು ಬಸ್‌ಗಳ ಅವಶ್ಯಕವಾಗಿದ್ದು,
ಬೆಳಿಗ್ಗೆ 6 ರಿಂದ 9 ಮತ್ತು ಮಧ್ಯಾಹ್ನ 3.30 ರಿಂದ 6ಕ್ಕೆ ಸಂಚರಿಸಿದರೆ ವಿದ್ಯಾರ್ಥಿಗಳು ಸೇರಿ­ದಂತೆ ನೌಕರರು ಮತ್ತು ಕಾರ್ಮಿಕರಿಗೆ ಹೆಚ್ಚಿನ ಅನುಕೂಲ.
ಸರ್ಕಾರಿ ಬಸ್‌ ಪಾಸ್‌ ಇದ್ದರೂ ಅನಿವಾರ್ಯವಾಗಿ ನೂಕು ನುಗ್ಗಲು ನಡುವೆ ಖಾಸಗಿ ಬಸ್‌­ಗಳನ್ನು ಅವಲಂಬಿಸಬೇಕು.
ವಿದ್ಯಾರ್ಥಿ­ಗಳು ಹೇಗೋ ಹೋಗುತ್ತಾರೆ ಆದರೆ ವಿದ್ಯಾರ್ಥಿನಿಯರು ಹೇಗೆ ಹೋಗಲು ಸಾಧ್ಯ ಎನ್ನುತ್ತಾರೆ ಪ್ರಥಮ ವರ್ಷದ ವಿದ್ಯಾರ್ಥಿ
ವಿರೇಶ .
ಮುದಗಲ್ಲ ಮಾರ್ಗದಲ್ಲಿಯೂ ಸಮಸ್ಯೆ : 60 ಮಾರ್ಗ ಮಧ್ಯ ಬರುವ ಅನೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿಯೂ ಬಸ್‌ ಸಂಚಾರ ವ್ಯವಸ್ಥೆ ಸಮರ್ಪಕ­ವಾಗಿಲ್ಲ ಎಂಬುದು ಗ್ರಾಮದ ವಿದ್ಯಾರ್ಥಿಗಳ ದೂರು.ಮುದಗಲ್ಲ ಇಂದ ಲಿಂಗಸ್ಗೂರು ಗೇ ಕಡೆಗೆ ಬೆಳಿಗ್ಗೆ 6 ಗಂಟೆಯಿಂದ 9ಕ್ಕೆ ಕೇವಲ 4 ಬಸ್‌ಗಳು ಮಾತ್ರ ಸಂಚರಿ­ಸುತ್ತಿವೆ ಅನೇಕ ಕಡೆಯಿಂದ ಬರುವ ಶಾಲಾ ಕಾಲೇಜು ವಿದ್ಯಾರ್ಥಿ­ಗಳಿಗೆ ತೊಂದರೆಯಾಗಿದೆ.
ಈ ಮಾರ್ಗ­ದಲ್ಲಿ ನಿಗದಿತ ಸಮಯಕ್ಕಬಸ್‌ ಸಂಚಾರ ವ್ಯವಸ್ಥೆ ಕಲ್ಪಿಸಬೇಕೆಂದು ಸ್ಥಳಿಯ ವಿದ್ಯಾರ್ಥಿಗಳು ಸಾವ೯ಜನಿಕರು ಆಗ್ರಹಿಸಿದ್ದಾರೆ.

Share and Enjoy !

Shares