ವಿಜಯನಗರವಾಣಿ
ಬಳ್ಳಾರಿ ಜಿಲ್ಲೆ
ಕೊಟ್ಟೂರು :ಫೆ.20ಕ್ಕೆ ಪಂಚಮಸಾಲಿ ಸಮಾಜವನ್ನು ರಾಜ್ಯದಲ್ಲಿ 2ಎ ಮತ್ತು ಕೇಂದ್ರದಲ್ಲಿ ಒಬಿಸಿ ಪ್ರವರ್ಗಕ್ಕೆ ಸೇರ್ಪಡೆ ಮಾಡುವಂತೆ ಸರ್ಕಾರಕ್ಕೆ ಆಗ್ರಹಿಸಿ ಹರಿಹಾರ ಮತ್ತು ಕೂಡಲ ಸಂಗಮದ ಉಭಯ ಶ್ರೀಗಳು ಪಾದಯಾತ್ರೆಯೊಂದೆಗೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು ,ಶ್ರೀಗಳ ಜೊತೆಗೆ ಕೈ ಜೋಡಿಸಿ ಪಂಚಮಸಾಲಿ ಶಕ್ತಿ ಪ್ರದರ್ಶಿಸಿ ನಮ್ಮ ಹಕ್ಕನ್ನು ಪಡೆಯಲು ಸಿದ್ದರಾಗೊಣ ಎಂದು ಪಂಚಮಸಾಲಿ ಬ್ಯಾಂಕಿನ ಅದ್ಯಕ್ಷ ಎಂ.ಶಿವಣ್ಣ ಕರೆನೀಡಿದರು.
ಪಟ್ಟಣದ ಪಂಚಮಸಾಲಿ ಬ್ಯಾಂಕಿನಲ್ಲಿ ಭಾನುವಾರ ಹಮ್ಮಿಕೊಂಡ, ಪಂಚಮಸಾಲಿ ಸಮಾಜದ ಕೊಟ್ಟೂರು ನಗರ ಯುವ ಘಟಕ ಅಧ್ಯಕ್ಷ – ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಪೂರೈಸಿ ಮಾತನಾಡಿದರು.
ತಾಲೂಕಿನಿಂದ ಬೆಂಗಳೂರಿಗೆ ತೆರಳಲು 15 ಬಸ್ ಗಳನ್ನು ಬುಕ್ ಮಾಡಿದ್ದೇವೆ ಹಾಗಾಗಿ ತಾಲೂಕಿನ ಹಳ್ಳಿ ಹಳ್ಳಿಗಳಿಗೆ ತೆರಳಿ ಪಂಚಮಸಾಲಿ ಬಂದುಗಳನ್ನು ಸಂಘಟಿಸಿ ಹೋರಾಟದ ಉದ್ದೇಶ ಮತ್ತು ಮಹತ್ವ ತಿಳಿಸಿ ಹೋರಾಟಕ್ಕೆ ಭಾಗವಹಿಸುವಂತೆ ತಿಳಿಸಿದರು.
ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ಹುಲ್ಲುಮನಿ ಮಲ್ಲೇಶಪ್ಪ ಮಾತನಾಡಿ ನಮ್ಮ ಸಮಾಜದ ಶ್ರೀ ಗಳಾದ ಹರಿಹರದ ವಂಚನನಂದ ಶ್ರೀ ಹಾಗೂ ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮಿಗಳು ಪಂಚಮಸಾಲಿ ಬಂದುಗಳ ಭವಿಷ್ಯತ್ತಿಗಾಗಿ ಶ್ರಮಿಸುತ್ತಿದ್ದು ನಾವುನೀವೆಲ್ಲರು ಕಾರ್ಯ ಪ್ರವೃತ್ತರಾಗೋಣ ಇದು ನಮ್ಮ ಸಮಾಜದ ಬಲ ಪ್ರದರ್ಶನಕ್ಕೆ ಉತ್ತಮ ಅವಕಾಶ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಗೌರವಾಧ್ಯಕ್ಷ ಎನ್.ಬಸವರಾಜ್ (ಗೋಪಿ) ಮಾತನಾಡಿ ಸಮಾಜದ ಯುವ ಘಟಕದ ಪದಾಧಿಕಾರಿಗಳು ಅಧಿಕಾರದ ಆಸ್ತಾನಕ್ಕೆ ಅಂಟಿಕೊಳ್ಳದೆ ಸಮಾಜದ ಸಂಘಟನೆಗೆ ಶ್ರಮಿಸುವಂತ್ತೆ ಎಚ್ಚರಿಸಿದರು. ಹರಿಶ್ ಗೌಡ,
ನಂಜನಗೌಡ ಮುಂತಾದವರು ಮಾತನಾಡಿದರು.
ಪಂ.ತಾ.ಯುವ ಘಟಕ ಅಧ್ಯಕ್ಷ ಕಪ್ಲಿ ಸಿದ್ಧಲಿಂಗೇಶ್ ಸ್ವಾಗತಿಸಿದರು.ಅರವಿಂದ ಬಸಾಪುರ,
ಕಾರ್ಯಕ್ರಮದ ಪ್ರಾರಂಭದಲ್ಲಿ ಪಂಚಮಸಾಲಿ ಸಮಾಜದ ಕೊಟ್ಟೂರು ನಗರ ಯುವ ಘಟಕದ ಅಧ್ಯಕ್ಷ ಕೆ.ಶಿವಕುಮಾರ ಗೌಡ ಮತ್ತು ಉಪಾಧ್ಯಕ್ಷರಾಗಿ ಹೆಚ್.ಮೇಘರಾಜ್ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಸೋಮಶೇಖರಗೌಡ,ಸಂಘಟನಾ ಕಾರ್ಯದರ್ಶಿಯಾಗಿ ಬಿ.ವಿಕಾಸ, ಮಣ್ಣಜ್ಜಿ ಕೊಟ್ರೇಶ್ ಹಾಗೂ ಕಾರ್ಯದರ್ಶಿಗಳಾಗಿ ಅಮ್ಮನಕೇರಿ ಉಮೇಶ್, ಶಂಕರ್, ಬಸವರಾಜ್ (ಬಾಸ್ ಟೈಲಾರ್) ರನ್ನ ಆಯ್ಕೆಮಾಡಿದರು.
ಈ ಸಂದರ್ಭದಲ್ಲಿ ಪಂ.ತಾ.ಯುವ ಘಟಕ ಉಪಾಧ್ಯಕ್ಷ ಚಂದ್ರು ಕೊಗಳಿ
ಭರಮನಗೌಡ್ರು,ಆವಂತಿ ಬಸಣ್ಣ ನಿವೃತ್ತ ಪೋಲೀಸರು,ಸಿ.ಶಿವಪ್ರಕಾಶ್, ಮುಖೇಶ್,ವೀಣಾವಿವೇಕಾನಂದಗೌಡ್ರ,ಆನಂದ ಉಪಸ್ಥಿತರಿದ್ದರು.