ಪಂಚಮಸಾಲಿ ಸಮಾಜದ ನಗರ ಮಹಿಳಾ ಘಟಕದ ಅಧ್ಯಕ್ಷೆಯಾಗಿದೇವರಮನಿ ಉಮಾದೇವಿ ಆಯ್ಕೆ

ವಿಜಯನಗರವಾಣಿ ಸುದ್ದಿ
ಬಳ್ಳಾರಿ ಜಿಲ್ಲೆ
ಕೊಟ್ಟೂರು: ಪಂಚಮಸಾಲಿ ಸಮಾಜದ ಸಂಘಟನೆಗಾಗಿ ಪಂಚಮಸಾಲಿ ಬ್ಯಾಂಕಿನಲ್ಲಿ ಭಾನುವಾರ ವಿವಿಧ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಕೈಗೊಂಡ ಸಂದರ್ಭದಲ್ಲಿ ಪಂಚಮಸಾಲಿ ಕೊಟ್ಟೂರು ಪಟ್ಟಣದ ಮಹಿಳಾ ಘಟಕದ ಅಧ್ಯಕ್ಷರಾಗಿ ದೇವರಮನಿ ಉಮಾದೇವಿ ಆಯ್ಕೆಯಾಗಿದ್ದಾರೆ.
ಆಯ್ಕೆ ಸಂದರ್ಭದಲ್ಲಿ ಪಂಚಮಸಾಲಿ ಬ್ಯಾಂಕಿನ ಅಧ್ಯಕ್ಷ ಎಂ.ಶಿವಣ್ಣ, ಜಿಲ್ಲಾ ಕಾರ್ಯದರ್ಶಿ ಎನ್.ಬಸವರಾಜ್(ಗೋಪಿ) ,ಹುಲ್ಲುಮನಿ ಮಲ್ಲೇಶ್, ಸಿ.ಶಿವಪ್ರಕಾಶ್, ಮುಕೇಶ್, ಪಂಚಮಸಾಲಿ ಸಮಾಜದ ಪ.ಪಂ ಸದಸ್ಯೆ ವೀಣಾವಿವೇಕಾನಂದಗೌಡ,ಅರಮನೆ ಪವಿತ್ರ, ಪ್ರೇಮಕ್ಕ ಬಾಗಾಳಿ,ಸವತಾ,ಸೌಂದರ್ಯ ಮುಂತಾದವರು ಇದ್ದರು.

Share and Enjoy !

Shares