ರಾಜ್ಯದಲ್ಲಿ ಶೇ.25 ರಷ್ಟು ಶಿಕ್ಷಕರ ಕೊರತೆ. ಪ್ರಾಥಮಿಕ ಶಾಲಾ ಶಿಕ್ಷಕರನ್ನು ಬೇರೆ ನೌಕರರಂತೆ ಸಮಾನಾಗಿ ಪರಿಗಣಿಸಿ.

Share and Enjoy !

Shares

ವಿಜಯನಗರವಾಣಿ

ಬಳ್ಳಾರಿ ಜಿಲ್ಲೆ

ಕೊಟ್ಟೂರು :ಸರ್ಕಾರವು ರಾಜ್ಯದ 1 ಲಕ್ಷ 63 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಉಳಿದ ಸರ್ಕಾರಿ ನೌಕರರಂತೆ ಸಮಾನ ರೀತಿಯಲ್ಲಿ ಪರಿಗಣಿಸಬೇಕು ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಸರ್ಕಾರವನ್ನು ಎಚ್ಚರಿಸಿದರು.ಪಟ್ಟಣದ ತುಂಗಭದ್ರ ವಿದ್ಯಾಸಂಸ್ಥೆಯ ಆವರಣದಲ್ಲಿ ಆಯೋಜಿಸಿದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕ ಕೊಟ್ಟೂರು, ತಾಲೂಕು ಮಟ್ಟದ ಶೈಕ್ಷಣಿಕ ಕಾರ್ಯಗಾರ ಮತ್ತು ಕೊಟ್ಟೂರು ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಾಗೂ ಅಭಿನಂದನಾ ಸಮಾರಂಭವನ್ನು ಜೋತಿ ಬೇಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.ರಾಜ್ಯದಲ್ಲಿ ಶೇ.25 ರಷ್ಟು ಪ್ರಾ.ಶಾ.ಶಿಕ್ಷಕರ ಕೊರತೆಯ ನಿಮಿತ್ತ, ಇದನ್ನು ಸರಿಪಡಿಸಲಾಗದೆ ರಾಜ್ಯದ ಚುಕ್ಕಾಣಿ ಹಿಡಿದವರು ವರ್ಗಾವಣೆಗೆ ಹಿಂದೇಟು ಹಾಕುತ್ತಿರುವಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸರ್ಕಾರದಲ್ಲಿ ಅವೈಜ್ಞಾನಿಕ ಪದ್ಧತಿ ಇದ್ದು ಬೇರೆ ನೌಕರರಿಗೆ ಬಡ್ತಿಗಳಿವೆ, ಈ ಸೌಲಭ್ಯಗಳು ಪ್ರಾ.ಶಾ.ಶಿಕ್ಷಕರಿಗೆ ದೊರೆಯುತ್ತಿಲ್ಲ, ಸರ್ಕಾರವು ನಮ್ಮನ್ನು ಹೊರ ರಾಜ್ಯದವರಂತೆ ಪರಿಗಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿ,ಪ್ರಾ.ಶಾ.ಶಿಕ್ಷಕರ ಬೇಡಿಕೆಗಳಾದವರ್ಗಾವಣೆ,ಸಿಯಂಡಾರ,ಉಳಿದ ಶಿಕ್ಷಕರಂತ ದೈಹಿಕ ಶಿಕ್ಷಕರನ್ನು ಪರಿಗಣಿಸುವುದು,ಗ್ರಾಮೀಣ ಕೃಪಾಂಕ ಸೇರಿದಂತೆ ಹಲವು ಬೇಡಿಕೆಗಳನ್ನು ಶಿಕ್ಷಕರು ಎದ್ದು ನಿಲ್ಲುವುದರೊಳಗೆ ಸರ್ಕಾರವು ಶೀಘ್ರ ಹೀಡೆರಿಸಬೇಕೆಂದು ಆಗ್ರಹಿಸಿದರು.ತಾ.ಪಂ ಅಧ್ಯಕ್ಷ ಎಸ್.ಗುರುಮೂರ್ತಿ ಮಾತನಾಡಿ ಎಪ್ರಿಲ್ ಒಂದಕ್ಕೆ ಶಿಕ್ಷಣ ಕಚೇರಿ ಮತ್ತು ಇತರ ಕಚೇರಿಗಳನ್ನು ಪ್ರಾರಂಭಿಸಲಾಗುವುದು ಎಂದು 15ನೇ ಹಣಕಾಸು ಯೋಜನೆಯಲ್ಲಿ 10 ಲಕ್ಷ ಗುರುಭವನ ನಿರ್ಮಾಣ ಮಾಡಲು ಮೀಸಲಿಡುವುದಾಗಿ ಹೇಳಿದರು.ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಲಿ ಮಾತನಾಡಿ ರಾಜ್ಯದ ಶಿಕ್ಷಕರು ಪ್ರಮಾಣಿಕರು,ಗುಣಾತ್ಮಕ ಶಿಕ್ಷಣ ನೀಡುವಂತರಾಗಿದ್ದು ಶಾಲಾ ಮಕ್ಕಳನ್ನು ಸ್ವಂತ ಮಕ್ಕಳಂತೆ ಪರಿಗಣಿಸುತ್ತಿರುವರು ,ಮಕ್ಕಳಿಗೆ ಉತ್ತಮ ಭೋದನೆ ಮಾಡಲು ಅವಕಾಶ ಮಾಡಬೇಕೆಂದರು.ಪ್ರಾಥಮಿಕ ಶಾಲೆ, ಬಿಸಿ ಊಟವನ್ನು ಪ್ರಾರಂಭಿಸಬೇಕೆಂದರು ಮತ್ತು ಶಿಕ್ಷಕರು ಕ್ಷೇತ್ರದ ಶಿಕ್ಷಣ ಕಚೇರಿಗೆ ಬಂದಾಗ ಅಧಿಕಾರಿಗಳು, ಶಿಕ್ಷಕರನ್ನು ಶಿಕ್ಷಕರಂತೆ ಕಾಣುವಂತೆ ತಿಳಿಸಿದರು.ಜಿಲ್ಲಾ ಅಧ್ಯಕ್ಷ ನಿಂಗಪ್ಪ ಜಿಲ್ಲಾ ಶಿಕ್ಷಕರ ಸಮಸ್ಯೆಗಳನ್ನು ಸಭೆಯಲ್ಲಿ ತಿಳಿಸಿದರು.ಜಿಲ್ಲಾ ಕಾರ್ಯದರ್ಶಿ ಬಿ.ಬಿ. ಶಿವಾನಂದ ಮಾತನಾಡಿ ನಲಿಕಲಿ,ಜನಗಣತೆ ಸೇರಿದಂತೆ ಇತರೆ ಕೆಲಸಗಳಿಂದ ಪ್ರಾ.ಶಾ.ಶಿಕ್ಷಕರನ್ನು ಮುಕ್ತಗೊಳಿಸಿ ಗುಣಾತ್ಮಕ ಶಿಕ್ಷಣ ನೀಡಲು ಸರ್ಕಾರ ಅವಕಾಶ ಕಲ್ಪಿಸುವಂತೆ ತಿಳಿಸಿದರು.ತಾ.ಪಂ ಇಒ ಎಂ.ಬಾಬು,ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಜಮೀರ ಆಹಾಮದ್ದ .ರಾಜ್ಯ ಉಪಾಧ್ಯಕ್ಷೆ ಪದ್ಮಲತಾ , ಬಸವರಾಜ್ ಸಂಗಪ್ಪ ಮಾತನಾಡಿದರು.ಪ್ರಸ್ತಾವಿಕ ತಾಲೂಕು ಅಧ್ಯಕ್ಷ ಅಣಜಿ ಸಿದ್ಧಲಿಂಗಪ್ಪ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.ಸ್ವಾಗತ ತಾಲೂಕು ಗೌರವಾಧ್ಯಕ್ಷ ಈಶ್ವರ ತುರುಕಾಣಿ, ಪ್ರಾರ್ಥನೆ ಗೀತಾ ಶಿಕ್ಷಕಿ, ನಿರೂಪಣೆ ಹನುಮಂತಪ್ಪ,ಮುತ್ತೇಶ್, ಮರುಳನಗೌಡ ವಂದನಾರ್ಪಣೆ ಮಾಡಿದರುವೇದಿಕೆಯಲ್ಲಿ ಪ್ರಾ.ಶಾ. ಶಿಕ್ಷಕರ ಸಂಘದ ವಿವಿಧ ಭಾಗದ ಅಧ್ಯಕ್ಷರು,ಉಪಾಧ್ಯಕ್ಷ ಮತ್ತು ಪದಾಧಿಕಾರಗಳಾದ ಕೆ.ಯುವರಾಜ್, ಅಂಬಳಿ ನಾಗೇಶಪ್ಪ ,ಕೆ.ಟಿ.ಸಿದ್ದರಾಮೇಶ್ವರ್,ರೇವಣ ಸಿದ್ದಪ್ಪ, ಪಿ.ಎಚ್.ಎಂ.ಶೇಖರಯ್ಯ,ಲೋಕಪ್ಪ,ಸುನೀಲ್, ಗೀತಾ,ಚೌಡಪ್ಪ ಮುಂತಾದವರು ಇದ್ದರು.

Share and Enjoy !

Shares