ವಿಜಯನಗರವಾಣಿ ಸುದ್ದಿ
ಕೊಟ್ಟೂರು : ಕೊಟ್ಟೂರು ನೂತನ ತಾಲೂಕು ಗೋಷಣಿಯಾಗಿ ನಾಲ್ಕು ವರ್ಷ ಕಳೆದರೂ ತಾಲೂಕಿನಲ್ಲಿ ಕಾರ್ಮಿಕ ನಿರೀಕ್ಷೆಕರ ಕಚೇರಿ ಕಾರ್ಯ ರೂಪಕ್ಕೆ ಬಂದಿಲ್ಲವೆಂದು ಸೋಮವಾರ ತಾಲೂಕಿನ ಕಾರ್ಮಿಕರು ಕೆಲಸಕ್ಕೆ ತೆರಳದೆ ಬೀದಿಗಿಳಿದು ಪ್ರತಿಭಟನೆ ನಡಿಸಿದರು. ಪಟ್ಟಣದ ತುಂಗಭದ್ರಾ ಕಾಲೇಜು ಆವರಣದಿಂದ ಪ್ರತಿಭಟನೆಕಾರರು ಉಜ್ಜಯಿನಿ ಸರ್ಕಲ್ , ಗಾಂಧಿ ಸರ್ಕಲ್ ,ಸರ್ಕಾರಿ ಬಸ್ಸ್ ನಿಲ್ದಾಣದ ಮುಂದೆ ಮಾನವ ಸರಪಳಿ ನಿರ್ಮಿಸಿ ಘೋಷಣೆ ಕೂಗಿದರು. ಅಸಂಘಟಿತ ಕಾರ್ಮಿಕರು ಕೊಟ್ಟೂರು ತಾಲ್ಲೂಕಿನಲ್ಲಿ 3ರಿಂದ4ಸಾವಿರಕ್ಕೂ ಹೆಚ್ಚು ಇದ್ದಾರೆ. ಕಾರ್ಮಿಕರ ಗುರುತಿಸಿ ಚೀಟಿ ಮತ್ತು ನವೀಕರಣ ಮತ್ತು ಇತರೆ
ಸೌಲಭ್ಯ ಪಡೆಯಲು ಕೂಡ್ಲಿಗಿ ಕಚೇರಿಗೆ ಹೋಗಿ
ಪಡಿಯಬೇಕು. ಕಾರ್ಮಿಕರಿಗೆ ತುಂಬಾ ಸಮಸ್ಯೆ ತೂಂದರೆಯಾಗುತ್ತದೆ. ಕಾರ್ಮಿಕರು ತಮ್ಮ ಕೆಲಸಗಳನ್ನು ಮಾಡಿಸಿಕೂಳ್ಳಲು ಕೂಡ್ಲಿಗಿ ಕಾರ್ಮಿಕರ ನಿರೀಕ್ಷಕರ ಕಚೇರಿಗೆ ಎರಡು ಮೂರು ದಿನ ಅಲೆದಾಡುವ ಸಂದರ್ಭ ಇದೆ ಹಾಗಾಗಿ ಅತಿ ಶಿಗ್ರದಲ್ಲೆ ಕಚೇರಿ ತೆರಯಬೇಕೆಂದು ಒತ್ತಾಯಿಸಿದ ಪ್ರತಿಭಟನಕಾರರು.
ವಿಳಂಬವಾದರೆ ಮತ್ತೆ ಕಚೇರಿ ಮುಂದೆ ಮುಷ್ಕರ ನಡೆಸುವದಾಗಿ ಆಗ್ರಹಿಸಿ. ಪಟ್ಟಣ
ಪಂಚಾಯತಿ ಮುಖ್ಯಾಧಿಕಾರಿ ಟಿ ಎಸ್ ಗೀರಿಶ್ ಅವರಿಗೆ ಮತ್ತು ತಹಶೀಲ್ದಾರ್ ಜಿ ಅನೀಲ್ ಕುಮಾರ್ ಅವರಿಗೆ ಮನವಿಯನ್ನು ಸಲ್ಲಿಸಿ ವತ್ತಾಯಿಸಿದರು.
ಮನವಿಯನ್ನು ಸ್ವೀಕರಿಸಿ ತಹಶಿಲ್ದಾರರು ಸರ್ಕಾರದ ಗಮನಕ್ಕೆ ಮತ್ತು ಕಾರ್ಮಿಕ ಆಧೀಕಾರಿಗಳು ಉಪ ವಿಭಾಗ 2ಬಳ್ಳಾರಿ ಇವರ ಗಮನಕ್ಕೆ ತಂದು ಕೊಟ್ಟೂರಿನಲ್ಲಿ ಒಂದು ಸರ್ಕಾರ ಸ್ಥಳವನ್ನು ಗುರುತಿಸಿ ಕಚೇರಿ ಪ್ರಾರಂಭ ಮಾಡವ ಭರವಸೆಯನ್ನು ನೀಡಿದರು.
ಇದೆ ಸಂದರ್ಭದಲ್ಲಿ ಎಚ್ ಪರಶುರಾಮ , ಬಿ ಅಜ್ಜಪ್ಪ , ಎಂ ಹನುಮಂತಪ್ಪ, ಅಣ್ಣೀಗಿರಿ ರಾಮಣ್ಣ , ಎ ವೀರಭದ್ರಪ್ಪ , ಚಾಂದ್ , ರಾಜಹುಲಿ , ಕೆ.ಅಜ್ಜಯ್ರ, ಎ ಕೊಟ್ರೀಶ , ಸಿ ಮರಿಯಪ್ಪ , ಎಂ ನಾಗರಾಜ್,
ಎಚ್ ಮಹಮ್ಮದ್ , ಎಂ ಅಜಿನಪ್ಪ, ಸಣದುರುಗಪ್ಪ , ಜಾಲಿ ಮಹಾಂತೇಶ್, ಕೆ ಬಸವರಾಜ, ಎನ್ ಮೂಗಪ್ಪ , ಎನ ಮಾರಪ್ಪ ಸೇರಿದಂತೆ ಇತರರು ಇದ್ದರು.