ಯರಜಂತಿ ಗ್ರಾಮಕ್ಕೆ ಬಸ್ಸ್ ಸೌಲಭ್ಯ ಒದಗಿಸಲು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಆಗ್ರಹ

 

ವಿಜಯನಗರವಾಣಿ

ರಾಯಚೂರು ಜಿಲ್ಲೆ

ಲಿಂಗಸಗೂರು :ತಾಲೂಕಿನ ಪೈದೊಡ್ಡಿ ಯರಜಂತಿ ಗ್ರಾಮಗಳಿಗೆ ಈ ಕರೋನಾ ಕೋವಿಡ್ -19 ಬರುವದಕ್ಕಿಂತಲೂ ಮುಂಚೆ ಬಸ್ಸು ಇತ್ತು ಇದನ್ನು ಕರೋನಾ ಬಂದಾಗಿನಿಂದ ನಿಲುಗಡೆ ಮಾಡಿದ್ದು ಪುನಃ ಅದನ್ನು ಇಂದಿನವರೆಗೂ ಚಾಲುವು ಮಾಡಿರುವುದಿಲ್ಲ . ಇದರಿಂದ ನಮ್ಮ ಗ್ರಾಮಸ್ಥರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಾಲಾ ಕಾಲೇಜಿಗೆ ಹೋಗಲು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಗ್ರಾಮಗಳಾದ ಪೈದೊಡ್ಡಿ , ಮತ್ತು ಯರಜಂತಿ ಗ್ರಾಮಗಳಿಗೆ ಈ ಮೊದಲು ಇದ್ದ ಬಸ್ಸುಗಳ ವಿವರ : 1 ) ಬೆಂಗಳೂರು -ಯರಜಂತಿ 2 ) ಐದಬಾವಿ -ಯರಜಂತಿ -ಹಟ್ಟಿ 3 ) ಹಟ್ಟಿ -ಯಲಗಟ್ಟ -ಬಂಡೇಬಾವಿ -ಯರಜಂತಿ ಪೈದೊಡ್ಡಿ – ಗುರುಗುಂಟಾ ಈ ಮೇಲಿನ ಮೂರು ರೂಟಿನ ವಾಹನಗಳ ಪೈಕಿ 1 ಬಸ್ಸು ಕೂಡಾ ನಮ್ಮ ಗ್ರಾಮಗಳಿಗೆ ಬರುತ್ತಿಲ್ಲ ಪ್ರಯುಕ್ತ ಮಾನ್ಯರು ಈ ನಮ್ಮ ಸಾರ್ವಜನಿಕ ಮನವಿಯನ್ನು ಪರಿಗಣಿಸಿ ಕ್ರಮ ಸಂಖ್ಯೆ : 3 ರ ಹಟ್ಟಿ – ಯಲಗಟ್ಟಾ ಬಂಡೇಬಾವಿ ಯರಜಂತಿ ಪೈದೊಡ್ಡಿ ಗೊಲ್ಲಪಲ್ಲಿ ಗುರುಗುಂಟಾ , ಈ ಬಸ್ಸ ಸಮಯ 8.೧೦ ಗಂಟೆಗೆ ಬೆಳಿಗ್ಗೆ ಹಟ್ಟಿಯಿಂದ ಬಿಡಬೇಕು . 2.30 ಗಂಟೆಗೆ ಮದ್ಯಾಹ್ನ 430 ಗಂಟೆಗೆ ಮದ್ಯಾಹ್ನ ² ಇದು ದಿನ ಒಂದಕ್ಕೆ 3 ಟ್ರೀಫ ಓಡಿಸುತ್ತಿದ್ದರು . ಅದರಂತೆ ಮುಂದುವರಿಸಲಿ ಘಟಕ ವ್ಯವಸ್ಥಾಪಕರು , ಈ.ಕ.ರ.ಸಾ.ಸಂಸ್ಥೆ , ಲಿಂಗಸಗೂರು ಘಟಕ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಮನವಿ ಸಲ್ಲಿಸಿದರುಒಂದು ವೇಳೆ ಈ ನಮ್ಮ ಮನವಿ ತಲುಪಿದ ಮೇಲೆ 3 ದಿವಸ ಅವಧಿಯ ಒಳಗಾಗಿ ಬಸ್ಸ ಬಂದುದರಿಸದೇ ಹೋದಲ್ಲಿ ಈ ಮಾರ್ಗದ ಸಾರ್ವಜನಿಕರು ತಿಳಿಸಿದರು. ಘಟಕದ ಮುಂದೆ ಹೋರಾಟವನ್ನುಹಮ್ಮಿಕೊಳ್ಳಲಾಗುವದೆಂದು ಹೇಳಿದರುಈ ಸಂದರ್ಭದಲ್ಲಿ ಪ್ರಭು ಗೌಡ ಕರವೇ ಅಧ್ಯಕ್ಷ ಪೈದೊಡ್ಡಿ ,ರಂಗಪ್ಪ ಯರಜಂತಿ ,ತಿಮ್ಮಯ್ಯ ದಳಪತಿ,ಗುಂಡಪ್ಪ,ಯಂಕಪ್ಪ ಪೂಜಾರಿ,ಭೀಮಣ್ಣ,ಈರಯ್ಯ,ರಾಮಣ್ಣ,ಗುಂಡಪ್ಪ ಸುರಪೂರು,ಯಂಕಪ್ಪ ,ಅಂಬಯ್ಯ,ಇತರರು ಇದ್ದರು

Share and Enjoy !

Shares