ಅಕ್ರಮ ಮದ್ಯ ನಿಷೇಧಕ್ಕೆ ನಾಳೆ ಅನಿರ್ಧಿಷ್ಟಾವಧಿ ಧರಣಿ-ಸುವರ್ಣ

Share and Enjoy !

Shares
Listen to this article

ರಾಯಚೂರು,ಫೆ.10- ಉಚ್ಚ ನ್ಯಾಯಲಯ ರಾಜ್ಯದಲ್ಲಿ ಅಕ್ರಮ‌ ಮದ್ಯ‌ ಮಾರಾಟ ನಿಲ್ಲಿಸುವಂತೆ ಈಗಾಗಲೇ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಆದರೆ ಸರ್ಕಾರ ಅಕ್ರಮ‌ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಯಾವುದೇ ಕ್ರಮವನ್ನು ಕೈಗೊಳ್ಳದಿರುವುದರಿಂದ ಫೆ. 11 ರಂದು ಅನಿರ್ದಿಷ್ಟಾವದಿ ಹೋರಾಟವನ್ನು ನಗರದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮದ್ಯ ನಿಷೇಧ ಆಂದೋಲನದ ಮುಖಂರಾದ ಸುವರ್ಣಾ ಅವರು ಹೇಳಿದರು.ಅವರಿಂದು ಸುದ್ದಿಗರೊಂದಿಗೆ ಮಾತನಾಡುತ್ತ ರಾಜ್ಯದಲ್ಲಿ ಅಕ್ರಮ ಮದ್ಯ ನಿಷೇಧ ಮಾಡಲು ನಮ್ಮ ಸಂಘಟನೆ ವತಿಯಿಂದ ಮದ್ಯ ನಿಷೇದಕ್ಕಾಗಿ ಸಾಕಷ್ಟು ಹೋರಾಟಗಳು, ಪಾದಯಾತ್ರೆ, ಜಲ ಸತ್ಯಾಗ್ರಹ ಸೇರಿದಂತೆ ಅನೇಕ ಪ್ರತಿಭಟನೆಗಳು ನಡೆಸಿ 15 ದಿನಗಳ ಕಾಲವಕಾಶವನ್ನು ನೀಡಿತ್ತು. ಆದರೆ ಇದಕ್ಕೂ ಮಣಿಯದ ಸರ್ಕಾರ 15 ದಿನಗಳಾದರೂ ಮದ್ಯ ನಿಷೇಧಿಸುವಲ್ಲಿ ಯಾವ ಕ್ರಮವನ್ನು ಕೈಗೊಂಡಿಲ್ಲ, ಮಹಿಳಾ ಸಂಘಟನೆಗಳು ನೀಡಿದ ದೂರಿನ ಮೇರೆಗೆ ಉಚ್ಚ ನ್ಯಾಯಲಯದವು ರಾಜ್ಯದಲ್ಲಿ ಅಕ್ರಮ ಮದ್ಯ ನಿಷೇಧ ಮಾಡಲು ಸರ್ಕಾರಕ್ಕೆ ಆದೇಶ ನೀಡಿತು ಆದರೆ ಆದೇಶವನ್ನೂ ಗಾಳಿಗೆ ತೂರಿದ್ದಾರೆ. ಆದ್ದರಿಂದ ಫೆ.11 ರಂದು ಆಂದೋಲನದ ವತಿಯಿಂದ ಅನಿರ್ದಿಷ್ಟಾವಧಿ ಧರಣಿಯನ್ನು ನಗರದಲ್ಲಿ ಹಮ್ಮಿಕ್ಕೊಳ್ಳಲಾಗಿದೆ ಎಂದರು.ರಾಜ್ಯ ಸರ್ಕಾರ ಈ ಕೂಡಲೇ ನ್ಯಾಯಲಯದ ಆದೇಶದಂತೆ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟಬೇಕು ಹಾಗೂ ಪ್ರತಿ ಹಳ್ಳಿಗೂ 5 ರಿಂದ 7 ಜನ ಮಹಿಳೆಯರ ಕಾವಲು ಸಮಿತಿ ರಚಿಸಬೇಕು, ಹಾಗೂ ಕಾವಲು ಸಮಿತಿಗೆ ಅರೆ ನ್ಯಾಯಲಯದಬಾಧಿಕಾರ ನೀಡಬೇಕು, ರಾಜ್ಯದ ಪ್ರತಿ ಹಳ್ಳಿಯ ಶೇ. 10% ರಷ್ಟು ಸದಸ್ಯರು ಪರವಾನಿಗೆಗೆ ನಿರಾಕರಿಸಿದರೆ ಅಂತಹ ಹಳ್ಳಿಗಳಲ್ಲಿ ಮದ್ಯ ಮಾರಾಟಕ್ಕೆ ಪರವಾನಿಗೆ ನೀಡಬಾರದು. ಹಾಗೂ ಆನ್ ಲೈನ್ ಮದ್ಯ ಮಾರಾಟ ಚಿಂತನೆಯನ್ನು ತಕ್ಷಣವೇ ಕೈಬಿಡಬೇಕು, ಈ ಕುರಿತು ಮಹಿಳಾ ನಿಯೋಗದೊಂದಿಗೆ ಚರ್ಚಿಸಿ ಮಾತುಕತೆ ನಡೆಸಬೇಕು, ಈ ಬೇಡಿಕೆಗಳ ಈಡೇರಿಕೆ ಆಗುವವರೆಗೂ ಆಂದಲೋನದ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಸಿದರು.ಈ ಸಂದರ್ಭ ವಿದ್ಯಾ ಪಾಟೀಲ್, ಮೋಕ್ಷಮ್ಮ, ಹೆಚ್.ಪದ್ಮಾ, ಹುಲಿಗಮ್ಮ, ಅನೇಕರು ಉಪಸ್ಥಿತರಿದ್ದರು.

Share and Enjoy !

Shares