ಗ್ರಾಮೀಣ ಅಭಿವೃದ್ಧಿಗೆ ಪಂಚಮಸಾಲಿ ಜನಪ್ರತಿನಿಧಿಗಳು ಆದ್ಯತೆ ನೀಡಲಿವೀರಶೈವ ಲಿಂಗಾಯತ ಪಂಚಮಸಾಲಿ ರಾಜ್ಯಾಧ್ಯಕ್ಷ ಬಿ.ನಾಗನಗೌಡ ಹೇಳಿಕೆ.

ವಿಜಯನಗರವಾಣಿ ಸುದ್ದಿ,

ಹಗರಿಬೊಮ್ಮನಹಳ್ಳಿ.

ತಾಲೂಕಿನ ಹನಸಿ ಗ್ರಾಪಂಗೆ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ವಿಜಯಲಕ್ಷ್ಮಿ ಸಿದ್ದೇಶ್ ಹನಸಿರಿಗೆ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಪದಾಧಿಕಾರಿಗಳು ಬುಧವಾರ ಸನ್ಮಾನಿಸಿ ಗೌರವಿಸಿದರು.ನಂತರ ವೀರಶೈವ ಲಿಂಗಾಯತ ಪಂಚಮಸಾಲಿ ರಾಜ್ಯಾಧ್ಯಕ್ಷ ಬಿ.ನಾಗನಗೌಡ್ರು ಮಾತನಾಡಿ, ಈಗಾಗಲೇ ರಾಜ್ಯಾದ್ಯಂತ ಗ್ರಾಪಂ ಚುನಾವಣೆಗಳು ನಡೆದಿದ್ದು, ಬಹುಸಂಖ್ಯಾತ ಪಂಚಮಸಾಲಿಗರೇ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅದರಲ್ಲೂ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹನಸಿ ಸಿದ್ದೇಶ್ ಅವರ ಜಾತ್ಯಾತೀತ ಗುಣದಿಂದ ಅವರ ಪತ್ನಿ ಗ್ರಾಪಂ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಇದೇ ರೀತಿ ರಾಜ್ಯದಲ್ಲಿ ಪಂಚಮಸಾಲಿ ಸಮುದಾಯದವರು ಎಲ್ಲಾ ಜಾತಿ ಜನಾಂಗದೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಂಡು ಬುದಕು ಕಟ್ಟಿಕೊಳ್ಳಬೇಕಿದೆ. ಅಲ್ಲದೇ ಪಂಚಮಸಾಲಿ ಜನರ ಮೂಲ ಉದ್ದೇಶವೇ ಸಮ ಸಮಾಜವನ್ನು ನಿರ್ಮಿಸುವುದಾಗಿದ್ದು, 90 ರಷ್ಟು ಪಂಚಮಸಾಲಿ ಸಮುದಾಯವು ಕೃಷಿಯಲ್ಲಿ ಬದುಕು ರೂಪಿಸಿಕೊಂಡಿದೆ. ಹೀಗಾಗಿ ಮುಂದೆ ಬರುವಂತ ತಾಪಂ, ಜಿಪಂ ಚುನಾವಣೆಗಳಲ್ಲಿ ಯುವಕರು ಸ್ಪರ್ಧಿಸುವ ಮೂಲಕ ಸಮಾಜವನ್ನು ಸಧೃಡವಾಗಿ ಕಟ್ಟಬೇಕು. ಅಲ್ಲದೇ ಗ್ರಾಪಂ ಅಧ್ಯಕ್ಷೆಯಾಗಿ ಆಯ್ಕೆಯಾದ ಪಂಚಮಸಾಲಿ ಸಮುದಾಯದ ಹನಸಿ ವಿಜಯಲಕ್ಷ್ಮಿ ಅವರು ಜಾತ್ಯಾತೀತವಾಗಿ ಗ್ರಾಮೀಣ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.ರಾಜ್ಯದ ಗೌರವ ಅಧ್ಯಕ್ಷ ಬಾವಿ ಬೆಟ್ಟಪ್ಪ, ರಾಜ್ಯ ಕಾರ್ಯಾಧ್ಯಕ್ಷ ಜಿ.ಪಿ.ಪಾಟೀಲ ಹುನಗುಂದ, ಕೋಶಾಧ್ಯಕ್ಷ ಮಲ್ಲಣ್ಣ ಬೊಮ್ಮಸಾಗರ, ಬಳ್ಳಾರಿ ಜಿಲ್ಲಾಧ್ಯಕ್ಷ ಬೊಪ್ಪಕಾನ್ ಕುಮಾರ್ ಸ್ವಾಮಿ, ಹಬೊಹಳ್ಳಿ ತಾಲೂಕು ಅಧ್ಯಕ್ಷ ಅಕ್ಕಿ ಶಿವಣ್ಣ, ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಿಚಿಡಿ ಕೊಟ್ರೇಶ್ ಇತರರಿದ್ದರು.

Share and Enjoy !

Shares