ಕಾಟಾಚಾರಕ್ಕೆ ನಡೆದ ಚುಕ್ಕನಟ್ಟಿ ಗ್ರಾಮ ಸಭೆ. ಸಭೆಗೆ ಬಾರದೇ ನಿರ್ಲಕ್ಷ್ಯ ತೋರಿದ ಅಭಿವೃದ್ದಿ ಅಧಿಕಾರಿ , ತರಾತುರಿಯಲ್ಲಿ ಸಭೆ ನಡೆಸಿದ ಸಿಬ್ಬಂದಿ.

 

ವಿಜಯನಗರವಾಣಿ ಸುದ್ದಿ

ರಾಯಚೂರು ಜಿಲ್ಲೆ

ಲಿಂಗಸೂಗೂರು .ತಾಲ್ಲೂಕಿನ ಹಟ್ಟಿ :ಪಟ್ಟಣ ಸಮೀಪದ ಆನ್ವರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಿರೇ ನಗನೂರ ಹಾಗೂ ಚುಕ್ಕನಟ್ಟಿ ಗ್ರಾಮಗಳಲ್ಲಿ ಗುರುವಾರ ಗ್ರಾಮ ಸಭೆ ನಡೆಯಿತು, ಗ್ರಾಮ ಸಭೆಯಲ್ಲಿ ಸಮಸ್ಯೆಗಳ ಕಂತೆ ಕಂತೆ ಕೇಳಲು ಬಾರದ ಅಭಿವೃದ್ದಿ ಅಧಿಕಾರಿ, ಇಂತವರಿಂದ ಗ್ರಾಮ ಪಂಚಾಯತಿ ಅಭಿವೃದ್ಧಿ ನಿರೀಕ್ಷಿಸ ಬಹುದೇ? ಎಂಬುದು ಜನ ಸಾಮಾನ್ಯರ ಯೋಚನೆ ಕಾರಣ ಚುನಾಯಿತ ಸದಸ್ಯರ ಒಳಗೊಂಡು ಗ್ರಾಮ ಪಂಚಾಯತಿಯ ಪ್ರಥಮ ಗ್ರಾಮ ಸಭೆಗೆ ಗೈರಾದ ಅಭಿವೃದ್ದಿ ಅಧಿಕಾರಿ, ಗ್ರಾಮಗಳ ಅನೇಕ ಜ್ವಲಂತ ಸಮಸ್ಯೆಗಳನ್ನು ಯಾರ ಬಳಿ ಹೇಳಬೇಕು ಬಂದಿರುವ ಅಧಿಕಾರಿಗಳು ಗಮನ ಹರಿಸಿ ಸಮಸ್ಯೆಗಳ ಸರಣಿಯೇ ಜೋಡಿಸಿಕೊಂಡು ಹೋಗಿರುವರು ಆದರ ಅವುಗಳ ಪರಿಹಾರ ಅದ್ಯಾವ ರೀತಿ ಆಗುವುದೋ ಕಾದು ನೋಡಬೇಕು.ಅಸಮರ್ಪಕ ಕುಡಿಯುವ ನೀರಿನ ಪೂರೈಕೆ.ಗ್ರಾಮಸ್ಥರಿಗೆ ಹಿಗ್ಗಾ ಮುಗ್ಗಾ ಕ್ಲಾಸ್.ಹಿರೇ ನಗನುರು ಚುಕ್ಕನಟ್ಟಿ ಸೇರಿ ಇರುವುದೇ ಎರಡು ವಾರ್ಡಗಳು ಆದರೆ ಇಲ್ಲಿ ಕೂಡುವ ಬೀರುವ ಬರುವುದು ವಾರಕ್ಕೆ ಒಂದು ಬಾರಿ ಮಾತ್ರ, ಇನ್ನೂ ಕೆಲವು ಬೀದಿಗಳಿಗೆ ೧೫ ದಿನಕ್ಕೊಮ್ಮೆ ನೀರು ಬರುತ್ತವೆ ಈಗಾದರೆ ನಾವು ಹೇಗೆ ಜೀವನ ಮಾಡುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು,ಮೊದಲೇ ಬಾವಿ ನೀರು ಎರಡು ದಿನ ಸಂಗ್ರಹಿಸಿ ಇಟ್ಟರೆ ಸಾಕು ಅವುಗಳಲ್ಲಿ ಹುಳುಗಳಾಗುತ್ತವೆ ಅಂತಹದ್ದರಲ್ಲಿ ಒಂದು ವಾರ ಹದಿನೈದು ದಿನಗಳ ಕಾಲ ಇಟ್ಟು ಕುಡಿದರೆ ರೋಗಗಳು ಉಲ್ಬಣ ಗೊಳ್ಳುವುದರಲ್ಲಿ ಅನುಮಾನವೇ ಇಲ್ಲ ಇಷ್ಟಿದ್ದೂ ಯಾಕೆ ನಿರ್ಲಕ್ಷ ತೋರುತ್ತಿದ್ದಿರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ವಾಟರ್ ಮೆನ್ ಸಮಕ್ಷಮದಲ್ಲಿ ಪ್ರತಿ ಮೂರು ದಿನಗಳಿಗೊಮ್ಮೆ ನೀರು ಬಿಡುವಂತೆ ಅಧಿಕಾರಿಗಳು ತಾಕೀತು ಮಾಡಿದರು.

Share and Enjoy !

Shares