ಬನ್ನಿಗೋಳದಲ್ಲಿ ಫೆ.13 ರಂದು ‘ನಮ್ಮೂರ ಹೆಮ್ಮೆ’ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

Share and Enjoy !

Shares
Listen to this article

 

 

ವಿಜಯನಗರವಾಣಿ ಸುದ್ದಿ

ಹಗರಿಬೊಮ್ಮನಹಳ್ಳಿ :

ತಾಲೂಕಿನ ಬನ್ನಿಗೋಳದಲ್ಲಿ ಫೆ.13 ರಂದು ಧಾರವಾಡದ ಚಾಣಕ್ಯ ಕರಿಯರ್ ಅಕಾಡೆಮಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ‘ನಮ್ಮೂರ ಹೆಮ್ಮೆ’ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ನಿರ್ದೇಶಕ ಪ್ರದೀಪ್ ಗುಡ್ಡದ ತಿಳಿಸಿದರು. ಪಟ್ಟಣದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು, ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯವನ್ನು ನಂದಿಪುರ ಕ್ಷೇತ್ರದ ಡಾ.ಮಹೇಶ್ವರ ಸ್ವಾಮೀಜಿ, ಹೂವಿನಹಡಗಲಿ ಗವಿಶಾಖಾ ಮಠದ ಹಿರಿಶಾಂತವೀರ ಸ್ವಾಮೀಜಿ, ಹಂಪಸಾಗರದ ನವಲಿ ಹಿರೇಮಠದ ಅಭಿನವ ಶಿವಲಿಂಗರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ. ಬಳ್ಳಾರಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ, ಕೊಪ್ಪಳ ಉಪವಿಭಾಗಾಧಿಕಾರಿ ನಾರಾಯಣ ಕನರೆಡ್ಡಿ, ಹಬೊಹಳ್ಳಿ ತಹಸೀಲ್ದಾರ ಕೆ.ಶರಣಮ್ಮ, ಮುಂಡರಗಿ ತಹಸೀಲ್ದಾರ ಆಶಪ್ಪ ಪೂಜಾರ್, ಕೊಟ್ಟೂರು ತಹಸೀಲ್ದಾರ ಅನಿಲ್ ಕುಮಾರ್, ಹೊಸಪೇಟೆ ಅಬಕಾರಿ ಉಪಅಧಿಕ್ಷಕ ಬಸವರಾಜ್ ಹಡಪದ, ಕೆಎಎಸ್ ಅಧಿಕಾರಿ ಭೀಮನಗೌಡ, ಬಿಇಓ ಶೇಖರಪ್ಪ ಹೊರಪೇಟೆ, ಡಿ.ಬೋರಯ್ಯ, ಶ್ರೀನಿವಾಸ ಗಡಾದ್, ಬೆಳಗಾವಿ ಗೋಪಾಲ್ ಲಮಾಣಿ, ಹಾವೇರಿಯ ಗುಡ್ಡಪ್ಪ ಜಿಗಳಕೊಪ್ಪ, ಹುಣಸಗಿಯ ಸಿದ್ದೇಶ್ ಯಳವಾರ, ಧಾರವಾಡದ ಪಿ.ಮಂಜುನಾಥ್, ಪಿಎಸ್‍ಐ ಮಾರುತಿ, ಶಿರಹಟ್ಟಿಯ ಯಲ್ಲಪ್ಪ ಡಂಬಳ, ಕಮಲಾಪುರದ ಅರುಣ ರಾಥೋಡ್, ಮಂಗಳೂರು ಅಬಕಾರಿ ಅಧಿಕಾರಿ ವಿಶ್ವನಾಥ, ಮಾನವ ಕಂಪ್ಯೂಟರ್ ಎಂದೇ ಖ್ಯಾತರಾದ ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಬಸವರಾಜ ಉಮ್ರಾಣಿ ಭಾಗವಹಿಸಲಿದ್ದಾರೆ. ಇದೇ ವೇಳೆ ಸನ್ಮಾನ ಕಾರ್ಯಕ್ರಮದ ಬಳಿಕ ಗ್ರಂಥಾಲಯಕ್ಕೆ ಪುಸ್ತಕ ದೇಣಿಗೆ, ಹಾಸ್ಯರಸ, ಸುಗಮ ಸಂಗೀತ, ಏಕಲವ್ಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.

Share and Enjoy !

Shares