ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಮನೆ ಸಾಮಗ್ರಿಗಳು

Share and Enjoy !

Shares

 

ವಿಜಯನಗರವಾಣಿ

ರಾಯಚೂರು ಜಿಲ್ಲೆ

ಲಿಂಗಸೂಗೂರು .ತಾಲ್ಲೂಕಿನ ಮುದಗಲ್ಲ ಪಟ್ಟಣದ ಹಳೇಪೇಟೆಯ ಜನತಾ ಕಾಲೋನಿಯ ಮನೆಯೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆದ ಪರಿಣಾಮ ಮನೆಯಲ್ಲಿರುವ ಸಾಮಾನುಗಳು ಹತ್ತಿ ಉರಿದಿವೇ ಹಳೇಪೇಟೆಯ ನಿವಾಸಿ ಬುಡಾಸಾಬ ತಂದೆ ರಾಜೆಸಾಬ ರವರ ಮನೆಯಲ್ಲಿ ಬಾಡಿಗೆಗೆ ಇದ್ದ ಹಮಿದಾಬೇಗಂ ಗಂಡ ಮೌಲಾಅಲಿ ಕೊಲಮೀ ಎಂಬುವವರ ಮನೆಯ ಸಾಮಾನುಗಳು ಬೆಂಕಿಯಿಂದ ಭಾರಿ ಹಾನಿಯಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅದದ್ದರಿಂದ ಸದ್ಯ ದೊಡ್ಡ ಅನಾಹುತವೊಂದು ತಪ್ಪಿದೆ. ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ಈ ಸಂಬಂಧ ಘಟನಾ ಸ್ಥಳಕ್ಕೆ ಪುರಸಭೆ ಸದಸ್ಯರಾದ ಅಮೀರ ಬೇಗ್ ಉಸ್ತದ, ತಸಲಿಂ ಮುಲ್ಲಾ , ಗ್ರಾಮ ಲೆಕ್ಕಧಿಕಾರಿ ಕಾಮಣ್ಣ , ಪೊಲೀಸ್ ಸಿಬ್ಬಂದಿಗಳಾದ
ಬಿಮದಾಸ್ , ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

Share and Enjoy !

Shares