ವಿಜಯನಗರವಾಣಿ
ರಾಯಚೂರು ಜಿಲ್ಲೆ
ಲಿಂಗಸುಗೂರ: ತಾಲ್ಲೂಕಿನ ಕೆ. ಅಡವಿಭಾವಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು ಮತ್ತು ವಾಲ್ಮೀಕಿ ಸ್ವಾಭಿಮಾನಿ ಸಂಘದ ಸಹಯೋಗದಲ್ಲಿ ನಡೆದ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮ ಶ್ರೀ ಅಂಬಾದೇವಿ ಕಲ್ಯಾಣ ಮಂಟಪದಲ್ಲಿ ಜರುಗಿತು.
ಪರಿಶಿಷ್ಟ ವರ್ಗಗಳ ಕಲ್ಯಾಣ ಅಭಿವೃದ್ಧಿಗಾಗಿ ಜನಪರ ಕಲ್ಯಾಣ ಕಾರ್ಯಕ್ರಮಗಳು. ಕರ್ನಾಟಕ ಮಹರ್ಷಿ ವಾಲ್ಮೀಕಿ ಪಂಗಡ ಅಭಿವೃದ್ಧಿ ನಿಗಮದ ಕಾರ್ಯಕ್ರಮಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿರುವ ಕಾರ್ಯಕ್ರಮಗಳ ಸಮಗ್ರವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ. ವೃತ್ತಿ ಶಿಕ್ಷಣ. ಉನ್ನತ ಶಿಕ್ಷಣ. ಸ್ವಯಂ ಉದ್ಯೋಗ. ವಿದೇಶದಲ್ಲಿ ಶಿಕ್ಷಣ. ಉದ್ಯಮ ಶೀಲ ಯೋಜನೆಗಳು. ಮೂಲನಿವಾಸಿ ಜನಾಂಗದ ವರಿಗೆ ಅಭಿವೃದ್ಧಿ ಮತ್ತು ಪೌಷ್ಟಿಕ ಆಹಾರ ವಸತಿ ಸೌಕರ್ಯ ಯೋಜನೆಗಳು ಮೂಲಭೂತ ಸೌಲಭ್ಯ ಸಹಾಯಧನ ಪ್ರೋತ್ಸಾಹಗಳ ಸಾಮಾಜಿಕ ಸುಧಾರಣೆಗಳ ಸಮಗ್ರ ಮಾಹಿತಿಗಾಗಿ ಜನರಿಗೆ ಜನ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಉಸ್ಕಿಹಾಳ ವಾಲ್ಮೀಕಿ ಗುರುಪೀಠದ ಗುರುಗಳಾದ ಶ್ರೀ ಆತ್ಮಾನಂದ ಸ್ವಾಮೀಜಿಗಳು ಮಾತನಾಡಿ ವಾಲ್ಮೀಕಿ ಸಮಾಜದ ಆರ್ಥಿಕವಾಗಿ. ಶೈಕ್ಷಣಿಕವಾಗಿ. ಸಾಮಾಜಿಕವಾಗಿ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಹಿಂದೂಳಿದಿದ್ದು ಇವರು ಮುಖ್ಯ ವಾಹಿನಿಗೆ ಬರಬೇಕು ಎಲ್ಲಾ ರಂಗಗಳಲ್ಲೂ ಅಭಿವೃದ್ಧಿ ಹೊಂದಬೇಕು ಎಂದು ಸಲಹೆ ನೀಡಿದರು ನಂತರ ಮಾತನಾಡಿದ ವಾಲ್ಮೀಕಿ ಸ್ವಾಭಿಮಾನ ಸಂಘದ ರಾಜ್ಯ ಅಧ್ಯಕ್ಷರಾದ ಶ್ರೀ ಚಳುವಳಿ ರಾಜಣ್ಣ ಮಾತನಾಡಿ ವಾಲ್ಮೀಕಿ ಸಮಾಜದ ಜನರು ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಬೇಕು ಸುಮಾರು ಸರ್ಕಾರದ 33 ಇಲಾಖೆ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಸಮಾಜದ ಪ್ರತಿಯೊಬ್ಬರು ಈ ಇಲಾಖೆಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಜನರಿಗೆ ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಸ್ವಾಭಿಮಾನ ಸಂಘದ ಉಪಾಧ್ಯಕ್ಷರಾದ ಶಿವಕುಮಾರ ನಾಯಕ. ಕಲ್ಯಾಣ ಕರ್ನಾಟಕ ಅಧ್ಯಕ್ಷರಾದ ಹನುಮೇಶ ನಾಯಕ.ಶೇಖರಗೌಡ ಕಾಟಗಲ್ಲ. ಶೇಖರಗೌಡ ಬಳಗಾನೂರು. ಮಸ್ಕಿ ವಾಲ್ಮೀಕಿ ಸ್ವಾಭಿಮಾನ ಅಧ್ಯಕ್ಷರಾದ ಬಸವರಾಜ ನಾಯಕ. ಬುಡ್ಡಪ್ಪ ನಾಯಕ. ಹನುಮಂತ ನಾಯಕ. ಮಹಿಳಾ ಅಧ್ಯಕ್ಷರಾದ ಶ್ರೀ ಮತಿ ಭೀಮಾಬಾಯಿ ಪಾಟೀಲ್. ಸುನೀಲ್ ಕುಮಾರ್ ನಾಯಕ. ದುರಗನಗೌಡ. ಮೌನೇಶ ಮುಂತಾದವರು ಉಪಸ್ಥಿತರಿದ್ದರು.