ಪುಲ್ವಾಮಾ ದಾಳಿಗೆ ಎರಡು ವರ್ಷ: ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

Share and Enjoy !

Shares
Listen to this article

ವಿಜಯನಗರವಾಣಿ

ರಾಯಚೂರು ಜಿಲ್ಲೆ

ಲಿಂಗಸೂಗೂರು :ಜಮ್ಮು ಕಾಶ್ವೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ನ ಯೋಧರ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಯೋಧರು ಹುತಾತ್ಮರಾಗಿ ಇಂದಿಗೆ 2 ವರ್ಷಗಳಾದವು ಅಂದಿನ ಕರಾಳ ದಿನ ಭಾರತ ತನ್ನ 44 ವೀರ ಯೋಧರನ್ನು ಕಳೆದುಕೊಂಡಿತ್ತು.ಇಡೀ ದೇಶವೇ ಅಂದು ಕಂಬನಿ ಮಿಡಿದಿತ್ತು. ಆ ಕರಾಳ ನೆನಪು ಇಂದಿಗೂ ಜನರ ಮನದಲ್ಲಿ ಜೀವಂತವಾಗಿದೆ. ಈ ಭಯೋತ್ಪಾದಕ ದಾಳಿ ನಡೆದು ಎರಡು ವರ್ಷವಾಗುತ್ತಿರುವ ಸಂದರ್ಭದಲ್ಲಿ ಸಂಘಟನೆ ಮುಖಂಡರು ಜೈ ಜವಾನ ಕಿಸಾನ್ ರೈತರ ಮತ್ತು ಸೈನಿಕರ ಅಭಿಮಾನಿಗಳ ಸಂಘಂ ರಾಯಚೂರು ಮತ್ತು ತಾಲ್ಲೂಕು ಘಟಕ ಲಿಂಗಸೂಗೂರು ಯೂನಿಯನ್ ಜಿಮ್ ನಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು

ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ . ನಡೆದ ಕಾರ್ಯಕ್ರಮದಲ್ಲಿ ಹುತಾತ್ಮರಾದ ಯೋಧರ ಬಲಿದಾನವನ್ನು ನೆನಪಿಸಿಕೊಂಡು ಒಂದು ನಿಮಿಷ ಮೌನಾಚರಣೆ ನಡೆಸಲಾಯಿತು.
2019 ರಲ್ಲಿ ಈ ದಿನದಂದು ನಡೆದ ಭೀಕರ ಪುಲ್ವಾಮಾ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಧೈರ್ಯಶಾಲಿ ಹುತಾತ್ಮರಿಗೆ ನಮಿಸಿ, ಅವರ ಅಸಾಧಾರಣ ಧೈರ್ಯ ಮತ್ತು ಪರಮ ತ್ಯಾಗವನ್ನು ಭಾರತ ಎಂದಿಗೂ ಮರೆಯುವದಿಲ್ಲ. ಪ್ರತಿ ಮನೆ-ಮನೆಗಳಲ್ಲಿ ಸೈನಿಕರ ಕತೆಗಳನ್ನು ಹೇಳುವ ಮೂಲಕ ಮಕ್ಕಳಲ್ಲಿ ಶೌರ್ಯ ಮನೋಭಾವವನ್ನು ಭಿತ್ತಬೇಕು.p s i ಪ್ರಕಾಶ್ ಡಂಬಳ. ಮಾತನಾಡಿ, ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ತ್ಯಾಗ ಮಾಡಿದ ಧೈರ್ಯಶಾಲಿಗಳಾದ ಸಿ ಆರ್‌ ಪಿ ಎಪ್ ಸಿಬ್ಬಂದಿಗೆ ನಾನು ಗೌರವಿಸುತ್ತೇನೆ. ರಾಷ್ಟಕ್ಕೆ ಅವರು ಮಾಡಿದ ಸೇವೆ ಮತ್ತು ಅವರ ತ್ಯಾಗವನ್ನು ಭಾರತ ಎಂದಿಗೂ ಮರೆಯುವದಿಲ್ಲ
ಈ ದಾಳಿಯಲ್ಲಿ ನೊಂದಿರುವ ಅವರ ಕುಟುಂಬಗಳಿಗೆ ಇಡೀ ದೇಶದ ಜನ ಬೆನ್ನೆಲುಬಾಗಿ ನಿಲ್ಲುತ್ತೇವೆ ಎಂದರು.

Share and Enjoy !

Shares