ನಮ್ಮ ರಾಜ್ಯದ ಮುಖ್ಯ ಮಂತ್ರಿಯವರ ಸುಪುತ್ರ ವಿಜೇಯೇಂದ್ರ ಅವರ ಹೇಳಿಕೆ ಕುರಿತು ಖಂಡನೆ!

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ಲಿಂಗಸೂಗೂರು: ಮುಖ್ಯ ಮಂತ್ರಿಯವರ ಪುತ್ರ ವಿಜೇಯೇಂದ್ರ ಅವರು ಪಂಚಮಸಾಲಿ ರಾಜ್ಯದ್ಯಕ್ಷರ ವಿಜಯಾನಂದ ಕಾಶಪ್ಪನವರ ಕುರಿತು ಹಗುರವಾಗಿ ಮಾತಾನಾಡಿದ್ದು, ಲಿಂಗಸಗೂರ ಪಂಚಮಸಾಲಿ ತಾಲೂಕ ಯುವ ಘಟಕ ತಾ ಅಧ್ಯಕ್ಷ , ಕೂಮಾರ ಹೊಸಗೌಡ್ರ ವಿಜೇಯೇಂದ್ರ ಅವರ ಹೇಳಿಕೆ ಖಂಡಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ಲಿಂಗಾಯತ ಪಂಚಮಸಾಲಿ ಸಮುದಾಯದ 2 A ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟ ನಮ್ಮ ಪಂಚಮಸಾಲಿ ಕೂಡಲಸಂಗಮದ ಗುರುಗಳಾದ ಶ್ರೀ ಬಸವ ಮೃತ್ಯುಂಜಯ ಮಹಾ ಸ್ವಾಮಿಗಳು ಹಾಗೂ ಶ್ರೀ ವಚನಾನಂದ ಮಹಾಸ್ವಾಮಿಗಳು ಹಾಗೂ ಪಂಚಮಸಾಲಿ ರಾಜ್ಯ ಅಧ್ಯಕ್ಷರಾದ ವಿಜಯಾನಂದ ಕಾಶೆಪ್ಪನವರ ನೇತೃತ್ವದಲ್ಲಿ
ಸಮುದಾಯದ ಎಲ್ಲಾ ಮುಖಂಡರ ಸೇರಿದಂತೆ ಸಮುದಾಯದ ಜನರು
ಸೇರಿ ಈಗಾಗಲೇ ಪಾದಯಾತ್ರೆ ಯಲ್ಲಿ ಪಾಲ್ಗೊಂಡು ಪಾದಯಾತ್ರೆ ಯಶಶ್ವಿಗೊಳಿಸುತ್ತಿದ್ದಾರೆ.

ನಮ್ಮ ಸಮೂದಾಯದ ರಾಜ್ಯ ಅಧ್ಯಕ್ಷರಾದ
ಡಾ. ವಿಜಯಾನಂದ ಕಾಶಪ್ಪನವರ ವಿರುದ್ಧ ಈ ರಾಜ್ಯದ ಮುಖ್ಯಮಂತ್ರಿ ಯವರ ಸುಪುತ್ರರಾದ ವಿಜೇಯೇಂದ್ರ ಅವರು ಇಲ್ಲ ಸಲ್ಲದ ಆಪಾಧನೆ ಹೇಳಿಕೆ ನೀಡಿರುವುದು ಅಸಮಂಜಸವಾದದ್ದು. ಯಾಕೆಂದ್ರೆ ಮಾನ್ಯ ಯಡಿಯೂರಪ್ಪ ರವರು ನಮ್ಮ ಸಮಾಜದ ಬಗ್ಗೆ ಅಪಾರವಾದ ಗೌರವವುಳ್ಳವರು.
ಅದಕ್ಕೆ ಅಗೌರವ ತರುವಂತಹ ಹೇಳಿಕೆಗಳನ್ನು ತಾವು ಮುಂದಿನ ದಿನಗಳಲ್ಲಿ ನಿಲ್ಲಿಸಬೇಕು. ಮುಂದೆ ಇದೆ ತರಹ ಹೇಳಿಕೆ ನೀಡಿದ್ದಲ್ಲಿ ಇಡೀ ನಮ್ಮ ಸಮುದಾಯ ತಮ್ಮ ವಿರುದ್ಧ ಉಗ್ರ ಹೋರಾಟ ಮಾಡಲಿಕ್ಕೆ ಹಿಂಜರಿಯುವುದಿಲ್ಲ.
ಏಕೆಂದ್ರೆ ಮುಂದಿನ ದಿನಗಳಲ್ಲಿ ತಾವು ಇನ್ನು ರಾಜ್ಯದ ಉತ್ತಮ ನಾಯಕ ರಾಗಿ ರಾಜ್ಯದ ಚುಕ್ಕಾಣಿ ಹಿಡಿಯುವಲ್ಲಿ ನಮ್ಮ ಸಮುದ ಪಾತ್ರ ಮಹತ್ವವಾದದ್ದು,
ಇವತ್ತು ನಾವು ಯಾರದೇ ಆಸ್ತಿಯಲ್ಲಿ ಪಾಲು ಕೇಳತಾ ಇಲ್ಲ, ಸರ್ಕಾರ ನಮಗೆ ಕೊಟ್ಟಿರುವ ಹಕ್ಕುಗಳ ಕುರಿತು ಹಾಗೂ ನಮ್ಮ ಮುಂದಿನ ಯುವ ಪೀಳಿಗೆಗಳ ಶ್ರೇಯೋಭಿವೃದ್ಧಿಗಾಗಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಗಾಗಿ ಈ 2 A ಮೀಸಲಾತಿ ಕೇಳೋದ್ರಲ್ಲಿ ತಪ್ಪೇನಿದೆ ಸ್ವಾಮಿ?
ತಮಗೆ ಮುಂದಿನ ದಿನಗಳಲ್ಲಿ ನಮ್ಮ ಸಮುದಾಯದ ಬೆಂಬಲ ಬೇಕಾದರೆ ತಾವು ನೀಡಿದ ಹೇಳಿಕೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.

 

Share and Enjoy !

Shares