ವಿಜಯನಗರವಾಣಿ
ರಾಯಚೂರು ಜಿಲ್ಲೆ
ಲಿಂಗಸೂಗೂರು :ಈಚನಾಳ ಗ್ರಾಮ ದಲ್ಲಿ ಕಾಶ್ಮೀರ ದ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೇ ದೀಪ ಬೆಳಗಿಸುವ ಮೂಲಕ ಗೌರವ ಸಮರ್ಪಣೆಯ ಶ್ರದ್ಧಾಂಜಲಿ ಕಾರ್ಯಕ್ರಮ ದಲ್ಲಿ ಮಾತನಾಡಿದ ಶಿಕ್ಷಕ ಶರಣಬಸವ ಮೇಟಿ ಯುವಕರು ಇತ್ತೀಚೆಗೆ ವಿದೇಶಿ ಆಚರಣೆಗಳಿಗೆ ಜಾಸ್ತಿ ಒತ್ತು ನೀಡುತ್ತೀರುವುದು ಸರಿಯಲ್ಲ, ಪ್ರೆಬುವರಿ 14 ನಮ್ಮ ದೇಶದ ರಕ್ಷಣೆಗೆ ನಿಂತ ವೀರ ಯೋಧರನ್ನು ಕಳೆದು ಕೊಂಡ ಕರಾಳ ದಿನ, ಇಂತಹ ದಿನ ದಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವುದು ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಿದೆ., ಜಾತ್ಯಾತೀತ ಪರಂಪರೆ ಯ , ಉತ್ತಮ ಸಂಸ್ಕಾರ ನೀಡುವಲ್ಲಿ ನಮ್ಮ ದೇಶ ನಮಗೇ ಮಾದರಿಯಾಗಿದೆ . ದೇಶದ ರಕ್ಷಣೆ ಮಾಡುವ ಭಾಗ್ಯ ಸಿಗುವುದು ಅಪರೂಪ ಆದರೆ ಎಲ್ಲರಿಗೂ ಆ ಭಾಗ್ಯ ಸಿಗುವುದಿಲ್ಲ, ಹಾಗಾಗಿ ದೇಶದ ಹಿತಕ್ಕಾಗಿ ಶ್ರಮಿಸುವ ರೈತ ಹಾಗೂ ಸೈನಿಕ ನಮ್ಮ ದೇಶದ ಎರಡು ಕಣ್ಣುಗಳು ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆದಪ್ಪ ಎನ್ ಮೇಟಿ, ಸಂಗಯ್ಯ ಸ್ವಾಮಿ,ಅಮರಯ್ಯ ಸ್ವಾಮಿ, ಅಮರೇಶ ಗಾಳಪೂಜಿ,ಚೇತನ್ ಕಡಿ, ದೇವಣ್ಣ ಬಡಿಗೇರ,ಸಹದೇವಪ್ಪ ಕರಡಿ,ಬಸವಲಿಂಗಪ್ಪ ಕಿರಾಣಿ,ಹನುಮೇಶ ಮಸೂತಿ, ಶಾಂತಕುಮಾರ್ ಅಂಗಡಿ, ಸುರೇಶ್ ಪೂಜಾರಿ, ಮಹಾಂತೇಶ ದೊಡ್ಡಿಹಾಳ್, ರುದ್ರಗೌಡ ಹೊಸಮನಿ, ಇನ್ನಿತರರಿದ್ದರು