ಗುಡದನಾಳ:ಗ್ರಾ,ಪಂ ಚುನಾವಣೆ, ರಾಜಕೀಯ ದ್ವೇಷಕ್ಕಾಗಿ ವ್ಯಕ್ತಿಯ ಕೊಲೆ

 

ವಿಜಯನಗರವಾಣಿ
ರಾಯಚೂರು ಜಿಲ್ಲೆ

ಲಿಂಗಸಗೂರು: ತಾಲೂಕಿನ ಗುಡದನಾಳ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಗ್ರಾ,ಪಂ ಚುನಾವಣೆಯಲ್ಲಿ ಸೋಲುಂಡ ವ್ಯಕ್ತಿಯ ತಂಡದಿಂದ ಗೆದ್ದ ಅಭ್ಯರ್ಥಿಯ ಪುತ್ರನನ್ನು ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ
ತಾಲೂಕಿನ ಹೊನ್ನಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಗುಡದನಾಳ ಗ್ರಾಮದಲ್ಲಿ ಎಲ್ಲೆಡೆಯಂತೆ ಇತ್ತೀಚೆಗೆ ಜರುಗಿದ ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಗುಡದನಾಳ ಗ್ರಾಮದಲ್ಲಿ ಹನಮಂತೆಮ್ಮ ಕಾಂಗ್ರೆಸ್ ಬೆಂಬಲಿತವಾಗಿ ಹಾಗೂ ಯಮನೂರನ ಹೆಂಡತಿ ಬಿಜೆಪಿ ಬೆಂಬಲಿತವಾಗಿ ಸ್ಪರ್ಧಿಸಿದ್ದರು ಎನ್ನಲಾಗುತ್ತಿದ್ದು ಸದರಿ ಚುನಾವಣೆಯಲ್ಲಿ ಹನುಮಂತೆಮ್ಮ ಗೆದ್ದಿದ್ದಳು ಇದನ್ನೆ ಮನಸಿನಲ್ಲಿಟ್ಟುಕೊಂಡ ಎದುರಾಳಿ ತಂಡ ಫೆ೧೫ರಂದು ಸೋಮವಾರ ಸಂಜೆ ಹನಮಂತೆಮ್ಮನ ಮನೆಯ ಮುಂದೆ ಜಗದೀಶ ಎನ್ನುವವರು ಗಲಾಟೆ ನಡೆದು ಜಗಳದಲ್ಲಿ ಶರಣಬಸವನಿಗೆ ಹಿಗ್ಗಾಮುಗ್ಗಾ ಥಳಿಸಿದ್ದರಿಂದ ಗಾಯಗಳಾಗಿ ಸದರಿ ವ್ಯಕ್ತಿಯನ್ನು ಬಾಗಲಕೋಟೆ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಲು ಕರೆದುಕೊಂಡು ಹೋಗಲಾಗಿದ್ದು ಅಲ್ಲಿ ಚಿಕಿತ್ಸೆ ಫಲಿಸದೆ ಮೃತನಾಗಿದ್ದಾನೆ
ಮೃತನ ತಾಯಿ ಹನಮಂತಪ್ಪ ಲಿಂಗಸಗೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಜಗದೀಶ ಶರಣಪ್ಪ, ಯಮನೂರ ಅಮರಪ್ಪ, ಮಹಾಂಕಾಳೆಪ್ಪ ಅಮರಪ್ಪ ಸೇರಿದಂತೆ ಪ್ರಕರಣ ದಾಖಲಾಗಿದೆ ಎನ್ನಲಾಗುತ್ತಿದೆ
ಗ್ರಾಮಸ್ಥರು ಹೇಳುವ ಪ್ರಕಾರ ಇಬ್ಬರ ಮನೆಗಳು ಅಕ್ಕಪಕ್ಕದಲಿದ್ದು ಇದುವರೆಗೂ ಯಾವುದೆ ಕಾರಣಕ್ಕೂ ಜಗಳವಾಡಿದ್ದನ್ನು ನಾವು ಕಂಡಿರುವುದಿಲ್ಲ ಹೊರಗಿನ ಕುಮ್ಮಕ್ಕಿನಿಂದಲೇ ಇದು ಸಾಧ್ಯವಾಗಿರಬಹುದು ಎನ್ನಲಾಗುತ್ತಿದ್ದು ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಯ ಬಿರುಗಾಳಿಗೆ ಕೊಲೆಯ ಹಂತ ತಲುಪಿರುವುದು ದುರಂತವೆನ್ನವ ಮಾತುಗಳು ಕೇಳಿ ಬರುತ್ತಿವೆ

Share and Enjoy !

Shares