ತೈಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಬೃಹತ್ ಪ್ರತಿಭಟನೆ.

Share and Enjoy !

Shares
Listen to this article

ವಿಜಯನಗರವಾಣಿ
ವಿಜಯನಗರ: ನಿರಂತರ ತೈಲಬೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ತಾಶಿಲ್ದಾರ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ಮಂಗಳವಾರ ನಗರದ ಗಾಂಧಿ ಚೌಕ್ ವೃತ್ತದಿಂದ ಪ್ರತಿಭಟನ ಮೆರವಣಿಗೆ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಹಂಪಿ ರಸ್ತೆ ರಾಣಿ ಪೇಟೆ ರಸ್ತೆ, ಬಸ್ ನಿಲ್ದಾಣ, ರೋಟರಿ ವೃತ್ತ, ಹೀಗೆ ನಗರದ ಮುಖ್ಯ ಬೀದಿಗಳಲ್ಲಿ ಸಂಚರಿಸಿತು.
ಹೊಸಪೇಟೆಯ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹೆಚ್‌ಎನ್‌ಎಫ್ ಇಮಾಮ್ ನಿಯಾಜಿ ಮಾತನಾಡಿ, ಈಗಾಗಲೇ ಕೇಂದ್ರದ ಮೋದಿ ಸರ್ಕಾರ ಬಡುವರ ಬದುಕು ಬೀದಿ ಪಾಲು ಮಾಡಿದ್ದಾರೆ. ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದು ಅದಾನಿ ಮತ್ತು ಅಂಬಾನಿಯವರ ಆದಾಯವನ್ನು ದ್ವಿಗಣ ಮಾಡಿದ್ದಾರೆ, ರೈತರನ್ನು ಉದ್ಧಾರ ಮಾಡುತ್ತೇವೆ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದವರು ಇವತ್ತು ರೈತರ ಜೀವನವನ್ನೇ ಸರ್ವನಾಶ ಮಾಡುವುದಕ್ಕೆ ಹೋರಟಿರುವುದು ಮೂರ್ಖತನದ ಪರಮಾವಧಿ, ರೈತರು ಈ ದೇಶದ ಬೆನ್ನಲುಬು ರೈತರು ಸಮೃದ್ಧವಾಗಿದ್ದರೇ ಇಡಿ ದೇಶ ಸಮೃದ್ಧವಾಗಿರುತ್ತದೆ ಎಂದರು.
ನಂತರ ತಾಶೀಲ್ದಾರರ ಮುಖಾಂತರ ರಾಷ್ಟçಪತಿ ಮತ್ತು ರಾಜ್ಯಪಾಲರಿಗೆ ಮನವಿ ಪತ್ರ ನೀಡಲಾಯಿತು.
ರೈತ ವಿರೋಧಿ ಕಾಯ್ದೆಗಳು:
ಎಪಿಎಂಸಿ, ಭೂ ತಿದ್ದುಪಡಿ, ವಿದ್ಯುತ್ ಖಾಸಗಿಕರಣ ತಿದ್ದುಪಡಿ ಕಾಯ್ದೆಗಳನ್ನು ಜಾರಿ ಮಾಡುವುದಕ್ಕೆ ಹೊರಟಿವೆ, ಈ ಕಾಯ್ದೆಗಳಿಂದ ಯಾವೊಬ್ಬ ರೈತನಿಗೆ ಅನುಕೂಲವಾಗುವುದಿಲ್ಲ ಈ ಕಾಯ್ದೆಗಳ ವಿರುದ್ಧ ಕಳೆದ 75 ದಿನಗಳಿಂದ ಗಾಳಿ ಮಳೆ ಲೆಕ್ಕಿಸದೇ ಮೈಕೊರೆಯುವ ಚಳಿಯಲ್ಲಿ ದಹಲಿಯ ಗಡಿ ಭಾಗದಲ್ಲಿ ಲಕ್ಷಾಂತರ ರೈತರು ಕಾಯ್ದೆಗಳನ್ನು ಹಿಂಪಡೆಯಬೇಕೆAದು ಪ್ರತಿಭಟನೆ ಮಾಡುತ್ತಿದ್ದಾರೆ, ಈ ಹೋರಾಟದಲ್ಲಿ 155 ಜನ ರೈತರು ಸಾವನ್ನಪ್ಪಿದರು ಇದಕ್ಕೆಲ್ಲ ಕೇಂದ್ರದ ಮೋದಿ ಸರ್ಕಾರವೇ ಕಾರಣ, ಆದ್ರೇ ಜನರಿದಲೇ ಆಯ್ಕೆಯಾಗಿ ಹೋದ ಪ್ರಧಾನಿ ಸೌಜನ್ಯಕ್ಕಾದ್ರು ಹೋರಾಟಗಾರರ ಬಳಿ ಹೋಗಲಿಲ್ಲ, ಸುಗ್ರೀವ್ ಆಜ್ಞೇ ಮೂಲಕ ಜಾರಿಗೆ ತರುವ ಅಗತ್ಯತೆ ಇದೆಯಾ ಎಂದು ಪ್ರಶ್ನೇ ಮಾಡಿದರು. ಕಾಯ್ದೆಗಳನ್ನು ಜನಪರವಾಗಿ ರೂಪಿಸದೇ ಕಾರ್ಪೋರೆಟ್ ಪರವಾದ ಕಾಯ್ದೆಗಳನ್ನು ರೂಪಿಸಿ ರೈತರನ್ನು ಬೀದಿ ಪಾಲು ಮಾಡುತ್ತಿವೆ.
ಅಗತ್ಯ ವಸ್ತುಗಳ ಬೆಲೆ ಏರಿಕೆ:
ಇಡಿ ದೇಶ ಕೊರೋನಾದ ಸಂಕಷ್ಟದಿAದ ತತ್ತರಿಸಿ ಹೋಗಿದೆ ರೈತರು ಮತ್ತು ಜನಸಾಮಾನ್ಯರು ದಿತ್ಯದ ಬದುಕಿಗಾಗಿ ಪರದಾಡುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಬೆಂಬಲವಾಗಿ ನಿಲ್ಲದೇ ಅಗತ್ಯ ವಸ್ತುಗಳಾದ ಪೆಟ್ರೋಲ್, ಡಿಸೆಲ್ ಅಡುಗೆ ಅನಿಲ, ಎಣ್ಣೆ, ಬಟಾಣಿ ಸೋಯಾಬಿನ್ ಇವುಗಳ ಬೆಲೆ ಹೆಚ್ಚಳ ಮಾಡುತ್ತಿರುವುದು ನೋಡಿದರೇ ಬಿಜೆಪಿ ಸರ್ಕಾರ ಹಗಲು ದರೋಡೆ ಮಾಡುತ್ತಿದೆ.
ಅಂತರಾಷ್ಟಿçÃಯ ಮಾರುಕಟ್ಟೆಯಲ್ಲಿ ಕಚ್ಚ ತೈಲ ಪ್ರತಿ ಬ್ಯಾರಲ್ ಅಂದರೇ, 159 ಲೀ. ಒಂದು ಲೀಟರ್ ಉತ್ಪಾದನಾ ವೆಚ್ಚ ಟ್ಯಾಕ್ಸ್ ಅಂತ ಎಲ್ಲಾ ಸೇರಿ ಪ್ರತಿ ಲೀಟರ್‌ಗೆ 28 ರೂ ಮಾತ್ರ, ಇಡಿ ದೇಶದ್ಯಾಂತ 100 ಗಡಿ ಇದೆ. ಅಡುಗೆ ಅನಿಲ 800 ರೂ. ಅಡುಗೆ ಎಣ್ಣೆ 190 ರೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದರೇ ಜನಸಾಮಾನ್ಯರು ಹೇಗೆ ಬದುಕಬೇಕು, ತೈಲಬೆಲಗಳು ಕಳೆದ 73 ವರ್ಷಗಳಲ್ಲಿ ಕಂಡು ಕೇಳರಿಯದಷ್ಟು ಹೆಚ್ಚಾಗಿವೆ ಎಂದು ಖಾರವಾಗಿ ಪ್ರಶ್ನೆ ಮಾಡಿದರು.
ನಮ್ಮ ಕಾಂಗ್ರೆಸ್ ಪಕ್ಷವು ರೈತನ್ನು ಗೌರವಿಸುತ್ತಾ ದೇಶದ ಬೆನ್ನಲುಬು ಎಂದು ಪರಿಗಣಿಸಿ ಅವರು ಹಿತಾಸಕ್ತಿಗಳನ್ನು ಉಳಿಸುತ್ತಾ ಬಂದಿದ್ದೇವೆ ಎಂದರು.
ರಸ್ತೆಯ ಕಟ್ಟಿಗೆ ಸೌದೆಯಿಂದ ಅಡುಗೆ:
ಅಡುಗೆ ಅನಿಲ ಬೆಲೆ ಏರಿಕೆಯ ವಿರುದ್ಧ ನಗರದಲ್ಲಿ ಕಾಂಗ್ರೆಸ್ ಕಾರ್ಯೆಕರ್ತೆಯರು ರೊಟರಿ ವೃತ್ತದ ರಸ್ತೆಯಲ್ಲಿ ಕಟ್ಟಿಗೆ ಹೊಲೆ ಹೂಡಿ ಸೌದೆಯಿಂದ ಬೆಂಕಿ ಹಚ್ಚಿ ರೊಟ್ಟಿ ಸುಟ್ಟು ಪ್ರತಿಭಟನೆ ನಡೆಸಿದರು.
ಎತ್ತಿನ ಗಾಡಿ ಮೆರವಣಿಗೆ:
ಪೆಟ್ರೋಲ್ ಮತ್ತು ಡಿಸೆಲ್ ಬೆಲೆ ಏರಿಕಯ ವಿರುದ್ಧ ನಗರದ ಮುಖ್ಯ ಬೀದಿಗಳಲ್ಲಿ ಎತ್ತಿನ ಗಾಡಿಗಳ ಮೂಲಕ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸ ಸದಸ್ಯ ವೆಂಕಟಾವ್ ಘೋರ್ಪಡೆ, ಕಾಂಗ್ರೆಸ್ ಜಿಲ್ಲಾ ಮಹಿಳಾ ಅಧ್ಯಕ್ಷೆ ಆಶಲತಾ, ದೀಪಕ್ ಕುಮಾರ್ ಸಿಂಗ್, ಗುಜ್ಜಲ್ ನಾಘರಾಜ್, ರಾಮಚಂದ್ರ ಗೌಡ, ನಿಂಬಗಲ್ ರಾಮಕೃಷ್ಣ, ತಾರಿಹಳ್ಳಿ ವೆಂಕಟೇಶ, ಟಿ ಚಿದಾನಂದ, ಮುನ್ನಿ ಖಾಸಿಂ, ರಜೀಯಾ ಬೇಗಂ ಇನ್ನಿತರರಿದ್ದರು.

Share and Enjoy !

Shares