ಉತ್ಸವಮೂರ್ತಿ ಕಳುವು ತನಿಖೆಗೆ ಒತ್ತಾಯ

Share and Enjoy !

Shares
Listen to this article

ರಾಯಚೂರು:ಕಲ್ಲೂರು ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದ ಉತ್ಸವಮೂರ್ತಿ ಕಳವಾಗಿದ್ದು ಕೂಡಲೇ ಕಾನೂನು ತನಿಖೆ ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಹೋಬಳಿ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಸ್ಥಾನಿಕ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.
ಇತ್ತೀಚಿಗೆ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಫೆ.13 ರಂದು ಶ್ರೀಮಾರುತೇಶ್ವರ ದೇವಸ್ಥಾನದ ಉತ್ಸವ ಮೂರ್ತಿ ಕಳುವಾಗಿದ್ದು ಈ ಉತ್ಸವ ಮೂರ್ತಿ ಬಹಳಷ್ಟು ಮಹತ್ವಲಾಗಿರುತ್ತದೆ.
ಸಂಕ್ರಾಂತಿಯ ಜಾತ್ರೆಯಲ್ಲಿ ಪಲ್ಲಕ್ಕಿಯಲ್ಲಿ ಕೂಡಿಕೊಂಡು ಕಲ್ಲೂರು ಗ್ರಾಮದಲ್ಲಿ ಮೆರವಣಿಗೆ ಮಾಡುವುದು ಮತ್ತು ತೇರು ಎಳೆಯುವಾಗ ತೇರಿನಲ್ಲಿ ಕೂತು ಏಳೆಯಲಾಗುತ್ತಿತ್ತು. ಈ ವಿಗ್ರಹ ಕಳುವಾದ ಕಾರಣ ಗ್ರಾಮದ ನಿವಾಸಿಗಳ ಭಾವನೆಗೆ ದಕ್ಕೆಯಗಿದೆ ಹಾಗೂ ಭಯದ ವಾತಾವರಣ ಸೃಷ್ಟಿಯಾಗಿದೆ.
ಅದ ಕಾರಣ ಕೂಡಲೇ ದೇವಸ್ಥಾನಕ್ಕೆ ವಿಗ್ರಹ ಮೂರ್ತಿ ದೊರಕುವಂತೆ ಕಾನೂನು ರೂಪದಲ್ಲಿ ತನಿಖೆ ಕೈಗೊಳ್ಳಬೇಕೆಂದು ಎಂದು ಒತ್ತಾಯಿಸಿದರು.
ಅಧ್ಯಕ್ಷರಾದ ಎಂ.ಶಾಂತ ಕುಮಾರ, ವಿನೋದ್ ಕುಮಾರ್ ,ಹರೀಶ್,ಅರ್ಜುನ್ ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು.

Share and Enjoy !

Shares