ರಾಯಚೂರು:ಐಟಿಐ ತರಬೇತಿದಾರರ ಪರೀಕ್ಷೆ ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸಲು ಎಐಡಿವೈಓ ಜಿಲ್ಲಾ ಘಟಕ ವತಿಯಿಂದ ಜಿಲ್ಲಾಧಿಕಾರಿಗಳ ಸ್ಥಾನಿಕ ಕಚೇರಿ ಅಧಿಕಾರಿ ಮುಖಾಂತರ ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಕೌಶಲ್ಯ ಭವನದ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಕೋವಿಡ್ 19 ಕಾರಣದಿಂದಾಗಿ ಐಟಿಐ ವಿದ್ಯಾರ್ಥಿಗಳು ಸುಮಾರು ಹತ್ತು ತಿಂಗಳ ತರಬೇತನ್ನು ಕಳೆದುಕೊಂಡಿರುತ್ತಾರೆ ಕಾರಣ ಐಟಿಐ ಒಂದನೇ ವರ್ಷದ ತರಬೇತುದಾರರ ವಿದ್ಯಾರ್ಥಿಗಳಿಗೆ ಪರೀಕ್ಷೆಯಿಂದ ವಿನಾಯಿತಿಯನ್ನು ನೀಡಿ ಡಿಜಿಟಿ ನವದೆಹಲಿ ಇವರು ಆದೇಶ ನೀಡಿರುತ್ತಾರೆ.
ಮೊದಲನೇ ವರ್ಷದ ಐಟಿಐ ತರಬೇತಿದಾರರು ಮಾರ್ಚ್ ತಿಂಗಳಿನಲ್ಲಿ ಪರೀಕ್ಷೆಗೆ ಹಾಜರಾಗಲು ಇಂದು ಕೊನೆಯ ದಿನವಾಗಿದೆ.
ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿಯ ಕನಿಷ್ಠ ಕಾಲಾವಕಾಶವನ್ನು ನೀಡದೆ ಇರುವುದು ಅಸಮಂಜಸ ನಡೆಯಾಗಿದೆ ಆದ್ದರಿಂದ ಕೂಡಲೇ ಪರೀಕ್ಷಾ ಶುಲ್ಕ ದಿನಾಂಕವನ್ನು ಮುಂದೂಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಚನ್ನಬಸವ ಜನೇಕಾಲ್,ಮಲ್ಲನಗೌಡ,ಮಹಿಬೂಬ್, ವಿಕಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.