ಪದವಿ ಕಾಲೇಜು ಪ್ರಾರಂಭಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳಿಂದ ಪಾದಯಾತ್ರೆ

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ,

ಹಗರಿಬೊಮ್ಮನಹಳ್ಳಿ : ತಾಲೂಕಿನ ತಂಬ್ರಹಳ್ಳಿಯಲ್ಲಿ ಪ್ರಥಮ ಧರ್ಜೆ ಕಾಲೇಜು ಆರಂಭಿಸುವಂತೆ ಒತ್ತಾಯಿಸಿ ತಂಬ್ರಹಳ್ಳಿ ಗ್ರಾಮದ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ತಂಬ್ರಹಳ್ಳಿಯಿಂದ ಹಬೊಹಳ್ಳಿಯವರೆಗೆ 17ಕಿ.ಮೀ ಪಾದಯಾತ್ರೆಯ ಮೂಲಕ ಪ್ರತಿಭಟನೆ ನಡೆಸಿದರು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಕ್ಕಿ ತೋಟೇಶ ಮಾತನಾಡಿ, ಗ್ರಾಮದ ಹಾಗೂ ಸುತ್ತಲಿನ ಹಳ್ಳಿಗಳ ಬಡ ವಿದ್ಯಾರ್ಥಿಗಳಿಗೆ ಪಿಯುಸಿ ನಂತರ ಪದವಿ ಶಿಕ್ಷಣ ದೊರೆಯದೇ ವಂಚಿತರಾಗುತ್ತಿದ್ದಾರೆ. ಮಹಿಳಾ ವಿದ್ಯಾರ್ಥಿನಿಯರು ಪಿಯುಸಿಗೆ ವಿದ್ಯಾಭ್ಯಾಸ ಮೊಟಕುಗೊಳಿಸುತ್ತಿರುವುದು ಶಿಕ್ಷಣದ ಕುಂಠಿತಕ್ಕೆ ಕಾರಣವಾಗಿದೆ. ಹಬೊಹಳ್ಳಿಯ ಕಾಲೇಜಿನಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳವಿರುವುದರಿಂದ ಗ್ರಾಮೀಣ ಭಾಗದ ಬಹುತೇಕ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮೊಟಕುಗೊಳಿಸುತ್ತಿದ್ದಾರೆ. ತಂಬ್ರಹಳ್ಳಿಯಲ್ಲಿ ಡಿಗ್ರಿ ಕಾಲೇಜು ತೆರೆಯಲು ಸ್ಥಳಾವಕಾಶ ಲಭ್ಯವಿದೆ. ಭೌಗೋಳಿಕವಾಗಿ ಸುತ್ತಲಿನÀ ಹಂಪಸಾಗರ, ಬಾಚಿಗೊಂಡನಹಳ್ಳಿ, ಮೋರಿಗೇರಿ ಪಿಯುಸಿ ಕಾಲೇಜುಗಳ ಮದ್ಯ ಭಾಗದಲ್ಲಿ ಇರುವುದರಿಂದ ಶೀಘ್ರವೇ ಪದವಿ ಕಾಲೇಜು ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.ಈ ವೇಳೆ ಶಾಸಕ ಭೀಮಾನಾಯ್ಕರಿಗೆ ಹಾಗೂ ತಹಶೀಲ್ದಾರ್ ಶರಣಮ್ಮರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ತಾಪಂ ಸದಸ್ಯ ಪಿ.ಕೊಟ್ರೇಶ್, ಗ್ರಾಪಂ ಉಪಾಧ್ಯಕ್ಷರಾದ ಮೈಲಾರ ಶಿವಕುಮಾರ್, ಸದಸ್ಯರಾದ ದೊಡ್ಡಬಸಪ್ಪ ಅನೇಕಲ್, ಬಸವಲಿಂಗನಗೌಡ, ಹುಗ್ಗಿ ದೊಡ್ಡಬಸಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಮಡಿವಾಳರ ಕೊಟ್ರೇಶ್, ಬಣಕಾರ ಕೊಟ್ರೇಶ್, ಮಾಜಿ ಸದಸ್ಯರಾದ ಗೌರಜ್ಜನವರ ಗೀರೀಶ್, ಪಿ.ಸುರೇಶ್, ಮುಖಂಡರಾದ ಖಾಜಾಸಾಬ್, ಬ್ಯಾಟಿ ಮಲ್ಲಿಕಾರ್ಜುನ, ಬ್ಯಾಟಿ ನಿಂಗಪ್ಪ, ಜಿ.ಬಿ.ಸತೀಶ್, ಬಾಳೆಕಾಯಿ ಚಿದಾನಂದಪ್ಪ, ವೈ.ಜೆ.ಶ್ರೀನಿವಾಸ್, ದೇವಿಪ್ರಸಾದ್, ಕೊರವರ ಯಮನೂರಪ್ಪ, ಕೊಟ್ರೇಶ್ ಅನೇಕಲ್, ಷಣ್ಮುಖಪ್ಪ, ಸಣ್ಣಬಸಪ್ಪ, ಮಲ್ಲಿಕಾರ್ಜುನ, ಶಿಕ್ಷಕರಾದ ಕಲ್ಗುಡಿ, ಕೊಟ್ರಗೌಡ ಭಾಗವಹಿಸಿದ್ದರು.

Share and Enjoy !

Shares