ಹಜರತ್ ಸೈಯದ್ ಮುಹಮ್ಮದ್ ನಮೀರಾ ಖಾದ್ರಿ ರಹ್ಮತುಲ್ಲಾ ಅಲೇ ಅವರ 274 ಉರುಸ್ ಆಚರಣೆ

Share and Enjoy !

Shares
Listen to this article

 

ರಾಯಚೂರು ಜಿಲ್ಲೆ

ಲಿಂಗಸಗೂರು: ತಾಲ್ಲೂಕಿನ ಮುದಗಲ್ ಪಟ್ಟಣದಲ್ಲಿ ದಿನಾಂಕ 23/02/2021 ಮಂಗಳ ವಾರ ರಾತ್ರಿ 7:00 ಘಂಟೆಗೆ ಇಬ್ರಾಹಿಂ ಪೂರಾ ಖಾದ್ರಿ ಯ ನಿವಾಸದಿಂದ ಖದ್ರಿಯಾ ಕಾಲೋನಿ ದರ್ಗಾ ವರಗೆ ಗಂಧ ದ ಮೆರವಣಿಗೆ ಮಾಡಲಾಯಿತು..ಹಜರತ್ ಸೈಯದ್ ಮುಹಮ್ಮದ್ ನಮೀರಾ ಖಾದ್ರಿ ರಹ್ಮತುಲ್ಲಾ ಅಲೇ ಮತ್ತು ವೊಬ್ ಸಾಬ್ ಖಾದ್ರಿರಹ್ಮತುಲ್ಲಾ ಅಲೇ ಅವರ 274 ನೇಯ ಉರುಸ್ ಸರಳವಾಗಿ ಆಚರಣೆ ಮಾಡಲಾಯಿತು.ಕೊರೊನಾ ಹಿನ್ನೆಲೆಯಲ್ಲಿ ಸರಕಾರದ ಆದೇಶದಂತೆ ಉರ್ಸ್ ಆಚರಣೆ ಕೋವಿಡ್-19 ನಿಯಮ ಪಾಲಿಸಿ ಸರಳ ರೀತಿಯಲ್ಲಿ ಆಚರಿಸಲಾಗಿದ್ದು, ದರ್ಗಾದ ಮುಖ್ಯಸ್ಥರು ಯಾಸೀನ್ ಖಾದ್ರಿ ಅವರು ಹೇಳಿದರು.ಹಜರತ್ ಸೈಯದ್ ಮುಹಮ್ಮದ್ ನಮೀರಾ ಖಾದ್ರಿ ರಹ್ಮತುಲ್ಲಾ ಅಲೇ ಮತ್ತು ವೊಬ್ ಸಾಬ್ ಖಾದ್ರಿರಹ್ಮತುಲ್ಲಾ ಅಲೇ ಅವರಗಂಧದ ಮೆರವಣಿಗೆ ದಿನಾಂಕ 23/02/2021 ಮತ್ತು ಉರುಸ್ ದಿನಾಂಕ 24/02/2021 , ಜಿಯರತ್ 25/02/2021 ಆಚರಣೆ ಮಾಡಲಾಯಿತು..ಹಜರತ್ ರವರ ಅನುಯಾಯಿಗಳು ವಿವಿಧ ರೀತಿಯ ಪಾವಡಗಳನ್ನ ಪ್ರದರ್ಶಿಸಿ ಜನರ ಗಮನ ಸೆಳೆದರು. ಇಲ್ಲಿಗೆ ಆಗಮಿಸಿದ್ದ ಭಕ್ತರಿಗೆ ಊಟ ಹಾಗೂ ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.ತಮ್ಮ ಇಷ್ಟಾರ್ಥ ಈಡೇರಿಸುವಂತೆ ಹರಕೆ ಹೊತ್ತ ಭಕ್ತರು, ದರ್ಗಾಕ್ಕೆ ಗಂಧ ಹಚ್ಚಿ ಛಾದರ್ ಸಮರ್ಪಿಸಿದರು.ಪಿಠಾಧಿಪತಿ ಹಾಗೂ ಖಾದ್ರಿ ಕುಟುಂಬಸ್ಥರು ಗಂಧ ಲೇಪನ್ ಕಾರ್ಯಕ್ರಮ ನೆರವೇರಿಸಿದರು.ಈ ಸಂದರ್ಭದಲ್ಲಿ ದರ್ಗಾದ ಕುಟುಂಬಸ್ಥರಾದ ಸೈಯದ್ ರಿಯಾಜ್ ಖಾದ್ರಿ,ಸೈಯದ್ ಯಾಸೀನ್ ಖಾದ್ರಿ,ಸೈಯದ್ ಹಾಶೀಮ್ ಖಾದ್ರಿ ಮುಂತಾದವರು ಉಪಸ್ಥಿತರಿದ್ದರು.

Share and Enjoy !

Shares