ಕನ್ನಡ ಚಿತ್ರ ರಂಗದಲ್ಲಿ ಪ್ರಜ್ವಲಿಸುತ್ತಿರುವ ನವ ತಾರೆ ಸುಮಿತ್ರ ಗೌಡ.

ಸಿನಿಸುದ್ದು: ಚಿತ್ರಲೋಕ ಎಂಬ ಮಾಯಾನಗರಿ ಎಲ್ಲರನ್ನೂ ಕೈ ಬೀಸಿ ಕರೆಯುತ್ತೆ ಆದರೆ ಪ್ರತಿಭೆ ಇದ್ದವರರನ್ನು ಮಾತ್ರ ಅಪ್ಪಿಕೊಳುತ್ತೆ ಎನುದಕ್ಕೆ ಈ ಯುವ ಪ್ರತಿಭೆಯ ಸಾಧನೆಯೇ ಸಾಕ್ಷಿ.
ಆಯ್ಕೆಯಾದ ಜಿಷ್ಣು ಎಂಬ ಪಂಚಭಾಷಾ ಚಿತ್ರಕೆ ನಾಯಕನಟಿ ಯಾಗಿ ಜೊತೆ ಜೊತೆಗೆ ಸಹ ನಿರ್ದೇಶಕಿಯಾಗಿ ಚಿತ್ರ ರಂಗಕ್ಕೆ ಕಾಲಿಟ್ಟ ಈ ಬೆಡಗಿ ತನ್ನ ಎರಡನೇ ಚಿತ್ರ ಕಪೋ ಕಪೋಕಲ್ಪಿತಂ ಎಂಬ ದ್ವಿಭಾಷಾ ಚಿತ್ರಕ್ಕೆ ನಿರ್ದೇಶಕಿ ಯಾಗಿ ಹಾಗು ಅದರಲ್ಲೂ ನಾಯಕಿಯಾಗಿ ಮಿಂಚಿದ್ದಾರೆ… ಹಾಗು ಈ ದಾಖಲೆ ಮಾಡಿದ ಮೊದಲ ಕನ್ನಡತಿ ಎಂಬ ಹೆಗ್ಗಳಿಕೆ ಇವರದ್ದು… ಕನ್ನಡಕ್ಕೆ ಉತ್ತಮ ಅಭಿರುಚಿಯುಳ್ಳ ಮಹಿಳಾ ನಿರ್ದೇಶಕಿ ಬೇಕಿತ್ತು ಅನ್ನೋ ಕೊರಗು ನೀಗಿಸಿವ ನಿಟ್ಟಿನಲ್ಲಿ ಇವರ ಸಿನಿ ಪಯಣ ಮುನ್ನಡೆದಿದೆ.. ಸೌಂದರ್ಯ ಹಾಗೂ ಬುದ್ದಿ ವಂತಿಗೆ ಜೊತೆಗೆ ನಾಯಕತ್ವದ ಗುಣ ತನ್ನ ನಿರ್ಣಯಗಳ ಬಗ್ಗೆ ಪರಿಪಕ್ವ ನಿರ್ಧಾರಗಳ ಮೂಲಕ ತನ್ನ ತಂಡವನ್ನು ಮುನ್ನಡೆಸುವ ಇವರ ನಿರ್ದೇಶಕ ತತ್ವದ ಬಗ್ಗೆ ಹಾಗು ಕನ್ನಡಾಭಿಮಾನ ಚಿತ್ರರಂಗದ ಮೇಲಿನ ಒಲವು ಪ್ರೀತಿ ಹಾಗು ಗೌರವದ ಬಗ್ಗೆ ಇವರ ಚಿತ್ರ ತಂಡದಲ್ಲಿ ದುಡಿದವರು ಮುಕ್ತ ಕಂಠದಲ್ಲಿ ಹೊಗಳುತ್ತಾರೆ…
ಸುಮಿತ್ರಾ ಗೌಡ ಇಂದು ಕನ್ನಡ ಚಿತ್ರರಂಗದಲ್ಲಿ ಪ್ರಜ್ವಲಿಸುವ ಹೆಸರು… ತನ್ನ ಬಿಎಂಎಸ್ ವಿದ್ಯಾಬ್ಯಾಸ ಮುಗಿಸಿ ಚಿತ್ರರಂಗದಲ್ಲಿ ಏನಾದರು ಸಾಧಿಸಬೇಕೆಂದು ಬಾಲ್ಯದ ಕನಸಾದ ಚಿತ್ರರಂಗ ದಲ್ಲಿ ಏನಾದರು ಸಾಧಿಸಬೇಕೆಂದು ಹೊರಟ ಈ ಮಧ್ಯಮವರ್ಗದ ಮನೆತನದ ಹುಡುಗಿಯ ಕನಸು ನನಸಾದದ್ದು ಜಿಷ್ಣು ಎಂಬ ಪಂಚಭಾಷಾ ಚಿತ್ರದಲ್ಲಿ ನಾಯಕಿಯಾಗಿ ಆಯ್ಕೆ ಆಗುವ ಮೂಲಕ… ಹುಟ್ಟಿದ್ದು ಕರ್ನಾಟಕದ ಮಂಡ್ಯದಲ್ಲಿ ಆದರೆ ಬೆಳೆದದ್ದು ವಿದ್ಯಾಭ್ಯಾಸ ಮಾಡಿದ್ದು ಮುಂಬೈ ನಲ್ಲಿ.. ಮಧ್ಯಮವರ್ಗದ ಮನೆಯಲ್ಲಿ ಹುಟ್ಟಿದರೂ ಇವರ ಪ್ರತಿಭೆಯನ್ನು ಗುರುತಿಸಿದ್ದು ಪ್ರೇರೇಪಿಸಿದ್ದು ಇವರ ತಂದೆ ರಮೇಶ್ ಗೌಡ.. ಇಂದಿಗೂ ತಂದೆ ತಾಯಿಯ ಪ್ರೋತ್ಸಹ ಹಾಗು ತನ್ನ ಸಾಧನೆಗೆ ಯಾವತ್ತು ಬಡತನ ಅಡ್ಡಿ ಮಾಡದಂತೆ ನೋಡಿಕೊಂಡ ಹೆತ್ತವರ ತ್ಯಾಗಗಳನ್ನು ನೆನಪಿಸುವ ಸುಮಿತ್ರಾ ಗೌಡ ತನಗೆ ಮೊಟ್ಟ ಮೊದಲ ಬಾರಿ ಅವಕಾಶ ಕೊಟ್ಟ ಚಿತ್ರಸಂಸ್ಥೆ ಸವ್ಯಸಾಚಿ ಕ್ರಿಯೇಷನ್ ಅನ್ನು ಸ್ಮರಿಸುತ್ತಾರೆ.. ಇವಾಗ ಸ್ವಂತ ನಿರ್ದೇಶನದ ಕಪೋ ಕಲ್ಪಿತಂ ಚಿತ್ರದಲ್ಲಿ ನಾಯಕಿಯಾಗಿಯೂ ನಟಿಸಿವ ಮೂಲಕ ತನ್ನ ಪ್ರತಿಭೆ ಚಿತ್ರ ಜಗತ್ತಿಗೆ ತೋರಿಸಿದ್ದಾರೆ.. ಕಪೋ ಕಲ್ಪಿತಂ ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಪ್ರದಶನಗೊಳ್ಳಲಿದೆ.. ಮಾಡುವ ಕೆಲಸದಲ್ಲಿ ಶ್ರದ್ದೆ ನಂಬಿಕೆ ಹಾಗೂ ಭವಿಷ್ಯದ ಬಗ್ಗೆ ನಿಖರ ಗುರಿ ಹೊಂದಿದ್ದರೆ ಏನನ್ನೂ ಸಾದಿಸಬಹುದು ಎನ್ನುತ್ತಾರೆ ಸುಮಿತ್ರಾ ಗೌಡ.. ಮುಂದಿನ ದಿನಗಳಲ್ಲಿ ಇನೊಂದು ಚಿತ್ರ ಇವರ ನಿರ್ದೇಶನದಲ್ಲಿ ಮೂಡಿಬರಲಿದ್ದು ಕನ್ನಡ ಚಿತ್ರರಂಗ ಮಾತ್ರವಲ್ಲ ಪ್ಯಾನ್ ಇಂಡಿಯಾ ಫಿಲಂ ಮಾಡೋ ಉದ್ದೇಶ ಸುಮಿತ್ರಾ ಅವರಿಗಿದೆ.
ನಟಿಯಾಗಿ ಸೃಜನಶೀಲ ಮಹಿಳಾ ನಿರ್ದೇಶಕಿಯಾಗಿ ಎಲ್ಲದಕ್ಕೂ ಹೆಚ್ಚಾಗಿ ಕನ್ನಡ ನಾಡಿನ ಮಹಿಳೆಯರಿಗೆ ಸ್ಪೂರ್ತಿಯಾಗಲು ಹೊರಟಿರವ ಮಂಡ್ಯದ ಬೆಡಗಿ ಶೈನಿಂಗ್ ಸ್ಟಾರ್ ಸುಮಿತ್ರ ಗೌಡ ಅವರಿಗೆ ಶುಭವಾಗಲಿ ಎಂದು ಹಾರೈಸುವ.
ಗಣಿ ದೇವ್ ಕಾರ್ಕಳ ನಿರ್ದೇಶಕರು
ಕನ್ನಡ ಚಿತ್ರರಂಗ
ಸದಸ್ಯರು
ಕನ್ನಡ ಚಿತ್ರ ನಿರ್ದೇಶಕರ
ಸಂಘ ಬೆಂಗಳೂರು

Share and Enjoy !

Shares