ಬಸ್ ಒದಗಿಸುವಂತೆ ಒತ್ತಾಯಿಸಿ ವಿದ್ಯಾರ್ಥಿ ಗಳು ಬಸ್ ತಡೆದು ಪ್ರತಿಭಟನೆ

Share and Enjoy !

Shares
Listen to this article

‌ವಿಜಯನಗರವಾಣಿ
ಸಿರುಗುಪ್ಪ: ವ್ಯವಸ್ಥೆ ಒದಗಿಸುವಂತೆ ಒತ್ತಾಯಿಸಿ ಎಂ. ಸೂಗೂರು ವಿದ್ಯಾರ್ಥಿಗಳು ಮಣ್ಣೂರು ಗ್ರಾಮದಲ್ಲಿ ಗುರುವಾರ ಸಿರುಗುಪ್ಪ ದಿಂದ ಕಂಪ್ಲಿ ಗೆ ಹೋಗುವ ಮುಖ್ಯ ಹೆದ್ದಾರಿಯಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸಿದರು. ಇದೆ ವೇಳೆ ವಿದ್ಯಾರ್ಥಿಗಳು ಮಾತನಾಡಿ, ಎಂ. ಸೂಗೂರು ಗ್ರಾಮದಿಂದ ಕಂಪ್ಲಿ ಗೆ ಹಾಗೂ ಗಂಗಾವತಿಗೆ ಎಸ್. ಎಸ್. ಎಲ್. ಸಿ ಮತ್ತು ಪಿ. ಯು. ಸಿ ಹಾಗೂ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಪಡೆಯಲು ಹೋಗುತ್ತಿದ್ದು, ಸರಿಯಾದ ರೀತಿಯಲ್ಲಿ ಬಸ್ಸು ಗಳ ವ್ಯವಸ್ಥೆ ಇಲ್ಲದಾಗಿದೆ. ಬೆಳಿಗ್ಗೆ 7 ಗಂಟೆಗೆ ಮತ್ತು 9 ಗಂಟೆಗೆ ಇದ್ದು ಸರಿಯಾದ ಸಮಯಕ್ಕೆ ಬಾರದೆ ಇರುವುದರಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವುದಕ್ಕೆ ತೀವ್ರ ತೊಂದ್ರೆ ಆಗಿದೆ. ಅಲ್ಲದೆ ಕ್ಲಾಸ್ ಗಳು ತಪ್ಪುತ್ತಿದ್ದು ಶಿಕ್ಷಣದಿಂದ ವಂಚಿತ ರಾಗುವಂತಾಗಿದೆ. ಆದ್ದರಿಂದ ಈಗಾಗಲೇ ಬರುತ್ತಿರುವ ಬಸ್ಸುಗಳು ಬೆಳಿಗ್ಗೆ 9 ಗಂಟೆ ಸಮಯ ಬರುವುದನ್ನು 8.45 ಕ್ಕೆ ಬಿಡಬೇಕು ಹಾಗೂ ಬೆಳಿಗ್ಗೆ 7 ಗಂಟೆ ಸಮಯಕ್ಕೆ ಬರುವ ಬಸ್ ನ್ನು 7.30 ಕ್ಕೆ ಸಮಯ ಬದಲಾವಣೆ ಮಾಡಿ ಬಿಡಬೇಕು. ಇನ್ನೂ ಅದರ ಜೊತೆಗೆ 8 ಗಂಟೆಗೆ ಹೆಚ್ಚುವರಿ ಬಸ್ ನ್ನು ಒದಗಿಸಬೇಕು ಎಂದು ಒತ್ತಾಯಿಸಿದರು. ನಂತರ ಶಿಕ್ಷಣ ಪ್ರೇಮಿಗಳಾದ ಮುದಿಯಪ್ಪ ನಾಯಕ ಹಾಗೂ ಸೋಮಪ್ಪ ಛಲವಾದಿ ಮಾತನಾಡಿ, ಎಂ. ಸುಗುರಿಂದ ಕಂಪ್ಲಿ ಮಾರ್ಗಕ್ಕೆ ತೆರಳುವ ಬಸ್ ಗಳು ನಿಗದಿತ ಸಮಯಕ್ಕೆ ಸರಿಯಾಗಿ ಬಿಡಬೇಕು ಜೊತೆಗೆ ಹೆಚ್ಚುವರಿ ಬಸ್ ಕಲ್ಪಿಸಿ ವಿದ್ಯಾರ್ಥಿಗಳ ಶಿಕ್ಷಣ ಪಡೆಯುವುದಕ್ಕೆ ಅನುಕೂಲ ಮಾಡಿಕೊಡಬೇಕು. ಇದು ಬಹಳ ದಿನಗಳ ಸಮಸ್ಯೆ ಯಾಗಿದ್ದು, ವಿದ್ಯಾರ್ಥಿ ಗಳು ಬೇರೆ ಕೆಡೆ ಹೋಗಿ ಶಿಕ್ಷಣ ಪಡೆಯುವುದಕ್ಕೆ ತುಂಬ ತೊಂದ್ರೆ ಆಗಿದೆ ಆದ್ದರಿಂದ ಶೀಘ್ರ ವೇ ಈ ಮಾರ್ಗ ಕ್ಕೆ ಬಸ್ ವ್ಯವಸ್ಥೆ ನೀಡಬೇಕು ಇಲ್ಲ ವಾದಲ್ಲಿ ಮುಂದಿನ ದಿನಗಳಲ್ಲಿ ನೂರಾರು ವಿದ್ಯಾರ್ಥಿಗಳ ಜೊತೆಗೆ ವಿವಿಧ ಪ್ರಗತಿಪರ ಸಂಘಟನೆಗಳು ರಸ್ತೆಗಿಳಿದು ಸಂಪೂರ್ಣವಾಗಿ ಮುಖ್ಯ ಹೆದ್ದಾರಿ ಯನ್ನು ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು. ನಂತರ ಪ್ರತಿಭಟನೆ ಸ್ಥಳಕ್ಕೆ ಸಿರಿಗೇರಿ ಪೊಲೀಸ್ ಠಾಣೆ ಯ ಮುಖ್ಯ ಪೇದೆ ಅಲ್ಲಾ ಭಕ್ಷಿ, ಅಂಬರೇಶ್ ಹಾಗೂ ಸ್ಥಳೀಯ ಗ್ರಾಪಂ ಸಿಬ್ಬಂದಿ ಕಾರವಸೂಲಿ ಗಾರ ಪಂಪಾಪತಿ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಮೇಲಧಿಕಾರಿಗಳ ಅತ್ತಿರ ಮಾತನಾಡಿ ಶೀಘ್ರ ವೇ ಸಮಸ್ಯೆ ಅಳಿಸಲಾಗುವುದು ಎಂದು ತಿಳಿಸಿ ಮನವಿ ಸ್ವೀಕರಿಸಿದರು ವಿದ್ಯಾರ್ಥಿಗಳನ್ನು ಮನವೊಲಿಸಿದರು ತದ ನಂತರ ವಿದ್ಯಾರ್ಥಿ ಗಳು ಪ್ರತಿಭಟನೆ ಹಿಂಪಡೆದ್ರೂ. ಪ್ರತಿಭಟನೆ ಕೈಗೊಂಡು 2 ಗಂಟೆಯಾದರೂ ಅಧಿಕಾರಿಗಳು ಸ್ಥಳಕ್ಕೆ ಧಾವಿಸದೆ ಇರುವುದು ವಿದ್ಯಾರ್ಥಿಗಳು ಆಕ್ರೋಶ ಗೊಂಡ ಪ್ರಸಂಗ ಜರುಗಿತು. ಈ ಸಂದರ್ಭದಲ್ಲಿ ಮಣ್ಣೂರು, ಸೂಗೂರು ವಿದ್ಯಾರ್ಥಿಗಳು, ಗ್ರಾಪಂc ಸದಸ್ಯ ಗಾಧಿಲಿಂಗಪ್ಪ ನಾಯಕ, ಕೋಟೆಹಾಳ್ ವಿಜಯ್, ಖಾದರಲಿಂಗ, ಸುಧಾಕರ್ ಮಣ್ಣೂರು, ಉಮೇಶ್, ಶಿಕ್ಷಣ ಪ್ರೇಮಿ ಶಿವು ಸೇರಿದಂತೆ ಇತರರು ಇದ್ದರು.

Share and Enjoy !

Shares