ಈಚನಾಳ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಅಮರೇಗೌಡ ಮೇಟಿ ಆಯ್ಕೆ.

Share and Enjoy !

Shares
Listen to this article

ವಿಜಯನಗರವಾಣಿ
ರಾಯಚೂರು ಜಿಲ್ಲೆ

ಲಿಂಗಸೂಗೂರು .ಹೊಸದಾಗಿ ನೊಂದಣಿ ಆಗಿರುವ ಹಾಲು ಉತ್ಪಾದಕರ ಸಹಕಾರ ಸಂಘ ಈಚನಾಳ ಇಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ನಡೆದಿದ್ದು ಸದರಿ ಅಧ್ಯಕ್ಷ ಸ್ಥಾನಕ್ಕೆ ಅಮರೇಗೌಡ ವಿರಭಧ್ರಪ್ಪ ಮೇಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಬಂದಿಗೇಸಾಬ ಚಂದುಸಾಬ ಮುಲ್ಲಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾದ ಹಿರೋಜಿ ಸಹಕಾರ ಇಲಾಖೆ ಸಿಂಧನೂರು ಇವರು ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರ ಸಂಘ ದ ಅಧ್ಯಕ್ಷರಾದ ಲಿಂಗರೆಡ್ಡೆಪ್ಪ ಮೇಟಿ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಬಸನಗೌಡ ಮೇಟಿ, ಪೀರಸಾಬ ಪಂಚಮ್, ದೊಡ್ಡಪ್ಪ ಚಿಗರಿ, ಅಮರೇಶ ಮೇಟಿ, ಅಮರಯ್ಯ ಸ್ವಾಮಿ, ರವಿಕುಮಾರ್ , ದೇವಪ್ಪ ಕುಂಬಾರ, ಬಸಪ್ಪ ವಾಲಿಕಾರ್ ಇನ್ನಿತರರಿದ್ದರು

Share and Enjoy !

Shares