ಮಹಿಳೆಯರ ಪರವಾಗಿ ಒಂದು ಮಾತು

Share and Enjoy !

Shares
Listen to this article

ಎಲ್ಲೆಡೆ ಎಲ್ಲಾ ಕ್ಷೇತ್ರದಲ್ಲೂ ಮಹಿಳೆ ತನ್ನ ಹೆಜ್ಜೆಯನ್ನು ಮೂಡಿಸಿದ್ದಾಳೆ. ಆಕೆ ಕೆಲವೇ ಕ್ಷೇತ್ರದಲ್ಲಿ ಮೀಸಲಾತಿ ಪಡೆದರೂ ಬಹುತೇಕ ಕ್ಷೇತ್ರಗಳಲ್ಲಿ ನೇರ ಪೈಪೋಟಿಯ ಮೂಲಕ ಅವಕಾಶವನ್ನು ಪಡೆದುಕೊಳ್ಳುತ್ತಿದ್ದಾಳೆ. ಲಿಂಗ ತಾರತಮ್ಯ ನಿವಾರಣೆಯು ಬಸವ, ಅಂಬೇಡ್ಕರ್ ಅವರ ನಿಲುವೂ ಆಗಿತ್ತು. ಮಹಿಳೆಯರ ಬಗ್ಗೆ ಅಪನಂಬಿಕೆ ಇರಿಸಿಕೊಂಡ ಕೆಲವರು ಮಹಿಳೆಯರ ಸಾಮರ್ಥ್ಯವನ್ನು ಒರೆ ಹಚ್ಚಿ ನೋಡದೇ ಆಕೆ ಅಸಮರ್ಥಳು ಎಂದು ಮೊದಲೇ ತೀರ್ಮಾನಿಸಿಬಿಡುತ್ತಾರೆ. ಮಹಿಳೆಯರ ಸ್ಥಾನ ಮಾನದ ಬಗ್ಗೆ ಮಾತನಾಡುತ್ತಾ ಪುರುಷ ಪ್ರಾಧಾನ್ಯತೆ ಮೆರೆಯುವವರೂ ಇದ್ದಾರೆ. ಆದ್ದರಿಂದ ಯಾವುದೇ ಕ್ಷೇತ್ರದಲ್ಲೂ, ಆಸಕ್ತಿಯಿಂದ ಮುಂದೆ ಬಂದಿರುವ ಮಹಿಳೆಯರನ್ನು ಸಹೋದರರಾಗಿ ಬೆಂಬಲಿಸೋಣ. ಮಹಿಳೆಯರಿಗೆ ಆದ್ಯತೆ ನೀಡುವ ಮೂಲಕ ಮಹಿಳೆಯರನ್ನು ಗೌರವಿಸೋಣ ಎಂದು ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಎಲ್ಲರಲ್ಲೂ ವಿನಂತಿಸಿಕೊಳ್ಳುತ್ತಿದ್ದೇನೆ.

ವೈ. ಎಂ. ವೈದ್ಯನಾಥ. ಎ.ಇ.ಇ.
ಅಧ್ಯಕ್ಷರು
ಕೆ.ಪಿ.ಟಿ.ಸಿ.ಎಲ್.ಮತ್ತು ಜೆಸ್ಕಾಂ
ಬಳ್ಳಾರಿ ನಗರ ಮತ್ತು ಗ್ರಾಮೀಣ
ವೀರಶೈವ ಲಿಂಗಾಯತ ನೌಕರರ ಸಂಘ
ಬಳ್ಳಾರಿ.

Share and Enjoy !

Shares