ಏಪ್ರೀಲ್ 3ರಂದು ಜನಪದ ಸಮ್ಮೇಳನ ಕೃತಿ ಲೋಕಾರ್ಪಣೆ , ಪ್ರಶಸ್ತಿ ಪ್ರಧಾನ ಸಮಾರಂಭ,

ವಿಜಯನಗರವಾಣಿ ಸುದ್ದಿ

ರಾಯಚೂರು ಜಿಲ್ಲೆ

ಲಿಂಗಸೂಗೂರು ; ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು ಜಿಲ್ಲಾ ಘಟಕ ರಾಯಚೂರು, ತಾಲ್ಲೂಕು ಘಟಕ ಲಿಂಗಸುಗೂರು ಹಾಗೂ ಮಹಿಳಾ ಘಟಕಗಳಿಂದ ಲಿಂಗಸುಗೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ವೈದಾನದಲ್ಲಿ 03 ಏಪ್ರೀಲ್ 2021 ರಂದು ಜಾನಪದ ಸಮ್ಮೇಳನ, ಕೃತಿಗಳ ಲೋಕಾರ್ಪಣೆ, ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಮಹಿಳಾ ಘಟಕದ ಪದಗ್ರಹಣ ಕಾರ್ಯಕ್ರಮ ಜರಗುತ್ತದೆ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಿಂಗಸುಗೂರಿನ ಜನಪ್ರಿಯ ಶಾಸನಕ ಡಿ.ಎಸ್.ಹೂಲಗೇರಿ ಅವರು ವಹಿಸುವರು. ಸಜ್ಜಲಶ್ರೀ ವೇದಕೆಯಲ್ಲಿ ಜಾನಪದ ವಿಶ್ವವಿದ್ಯಾಲಯ ಕುಲಪತಿ ಡಿ.ಬಿ. ನಾಯಕ ಅವರಿಂದ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಕಲಾ ಪ್ರದರ್ಶನ ಕಾರ್ಯಕ್ರಮವನ್ನು ರಾಯಚೂರು ಲೋಕಸಭೆ ಸದಸ್ಯ ರಾಜಾ ಅಮರೇಶ ನಾಯಕ  ಅವರು ಉದ್ಘಾಟಿಸಲಿದ್ದಾರೆ.
ಜಿನ್ನದ ಜಾನಪದ ಎಂಬ ಸ್ಮರಣ ಸಂಚಿಕೆಯನ್ನು ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅವರು ಬಿಡುಗಡೆ ಮಾಡಲಿದ್ದಾರೆ. ಇವು ಅಲ್ಲದೆ ಡಾ. ಮಹಾಂತಗೌಡ ಪಾಟೀಲ ಅವರ ಮೊದಲ ಹೆಜ್ಜೆ ಹಾಗೂ ಸಾಹಿತ್ಯ ಮತ್ತು ಚಳುವಳಿ, ಡಾ. ಜಯದೇವಿ ಗಾಯಕವಾಡ ಅವರ ವೈಶಾಖ ಪೂರ್ಣಿಮೆ ಗಜಲಗಳು, ಡಾ. ಶರಣಪ್ಪ ಆನೆಹೊಸೂರು ಅವರ ಪತ್ರಿಕಾ ತಲೆ ಬರಹ, ಸೈಯದ್ ಹುಚ್ ಪೀರ ತಾತ ಅವರ ನವರಸ ಕಥೆಗಳ ಕೃತಿಗಳು ಲೋಕಾರ್ಪಣೆಗೊಳ್ಳುತ್ತಿವೆ.
ಜಿಲ್ಲೆಯ ಬಯಲಾಟ, ಕೋಲಾಟ, ಡೊಳ್ಳು ಕುಣಿತ, ಜೋಗತಿ ಕುಣಿತ, ಕಂಸಾಳೆ, ಸೋಬಾನಿ ಹಾಡು, ತತ್ವಪದ ಸೇರಿ ಇನ್ನಿತರ ಜಾನಪದ ಕಲಾ ತಂಡಗಳಿಂದ ಜಾನಪದ ಝಂಕಾರಗೊಳ್ಳಲಿದೆ. ವಿವಿಧ ಡ್ಯಾನ್ಸ್ ಅಕಾಡೆಮಿಯ ವಿದ್ಯಾರ್ಥಿಗಳಿಂದ ಜಾನಪದ ನೃತ್ಯ ಪ್ರದರ್ಶನಗೊಳ್ಳುತ್ತಿವೆ. ಜಿಲ್ಲೆಯ ಸಾಧಕರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಗುತ್ತಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜಾನಪದ ತಜ್ಞ ಡಾ.ಲಿಂಗಣ್ಣ ಗೋನಾಳ ಅವರು ಆಯ್ಕೆಗೊಂಡಿದ್ದಾರೆ.
ಸಂಜೆ 7 ಗಂಟೆಯಿಂದ ಚಿತ್ರನಟ ಹಾಗೂ ಜಾನಪದ ಕಲಾವಿದ ಗುರುರಾಜ ಹೊಸಕೋಟೆ ಅವರಿಂದ ಜಾನಪದ ಹಾಸ್ಯ ಹಾಗೂ ಜಾನಪದ ಹಾಡುಗಳ ಜಾನಪದ ಸಂಜೆ ಕಾರ್ಯಕ್ರಮ ಜರುತ್ತಿದೆ.
ಕಾರ್ಯಕ್ರಮಕ್ಕೆ ಕರ್ನಾಟಕ ಜಾನಪದ ಪರಿಷತ್ತು ರಾಜ್ಯಾಧ್ಯಕ್ಷ ಟಿ. ತಿಮ್ಮೇಗೌಡ, ಹಟ್ಟಿ ಕಂಪನಿ ಅಧ್ಯಕ್ಷ ಮಾನಪ್ಪ ವಜ್ಜಲ, ರಾಯಚೂರು ಶಾಸಕ ಡಾ. ಶಿವರಾಜ ಪಾಟೀಲ, ದೇವದುರ್ಗ ಶಾಸಕ ಕೆ. ಶಿವನಗೌಡ ನಾಯಕ, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ದೊರೆ, ಸಿಂಧನೂರು ಶಾಸಕ ವೆಂಕಟರಾವ ನಾಡಗೌಡ, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಲಕ್ಕಿಹಾಳ, ರಾಯಚೂರು ವಿಶ್ವವಿದ್ಯಾಲಯ ಕುಲಪತಿ ಹರೀಶ ರಾಮಸವಾಮಿ, ರಾಜ್ಯ ಗ್ರಂಥಾಲಯ ನಿರ್ದೇಶಕ ಡಾ. ಸತೀಶ ಹೊಸಮನಿ ಅವರು ಬರುಲಿದ್ದಾರೆ.

Share and Enjoy !

Shares