ಜನರ ಸಮಸ್ಯೆಗೆ ಸ್ವಂದಿಸದ ಜನಪ್ರತಿನಿಧಿಗಳು,

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸುಗೂರು ತಾಲೂಕಿನ ಹಟ್ಟಿಚಿನ್ನದಗಣಿ ಪಟ್ಟಣದ 4ನೇ ವಾರ್ಡಿನ ದಾಸಪ್ಪ ಗೌಡ ಹಿಂದುಗಡೆ ಬಸವ ನಗರದಲ್ಲಿ ಚರಂಡಿ ನೀರು ರಸ್ತೆ ಮೇಲೆ ನಿಂತ ಹಿನ್ನಲೆಯಲ್ಲಿ ರಸ್ತೆ ಯಾವುದೊ ಚರಂಡಿ ಯಾವುದೊ ಗೊತ್ತಾಗುತ್ತಿಲ್ಲ ಎಂದು ವಾರ್ಡಿನ ನಿವಾಸಿಗಳು ಆರೋಪ ಮಾಡಿದರು,.
ಚುನಾವಣೆ ಬಂದಾಗ ಚರಂಡಿ ನಿರ್ಮಾಣ ಮಾಡುತ್ತೇವೆ ಅಂತಾ ಹೇಳಿ ಗೆದ್ದ ನಂತರ ನಮ್ಮ ಪಟ್ಟಣ ಪಂಚಾಯತ ಸದಸ್ಯರು ವಾರ್ಡ ತಿರುಗಿ ನೋಡಿಲ್ಲ ಎಂದು ಅಕೋಶ ಹೊರಹಾಕಿದರು,
ಚರಂಡಿ ನೀರು ರಸ್ತೆ ಮೇಲೆ ನಿಂತು ಹಿನ್ನಲೆಯಲ್ಲಿ ಜನರಿಗೆ ಸಂಚಾರ ಮಾಡಲು ತೊಂದರೆಯಾಗಿದೆ ಮತ್ತು ಸೊಳ್ಳೆಗಳು ಹೆಚ್ಚಾಗಿ ಜನರು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಮುತ್ತಮ,ಅಂಬಮ್ಮ,ದುರ್ಗಮ್ಮ ಕುಮಾರ ಭಜಂತ್ರಿ, ಯಲ್ಲಪ್ಪ,ರಮೇಶ, ಆರೋಪ ಮಾಡಿದರು,
ಈ ಕೂಡಲೆ ಹಟ್ಟಿಚಿನ್ನದಗಣಿ ಪಟ್ಟಣ ಪಂಚಾಯತ ಸದಸ್ಯರು ಹಾಗೂ ಮುಖ್ಯಾಧಿಕಾರಿಗಳು ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಿ ರೋಗದಿಂದ ಮುಕ್ತವಾಗಿಸಬೇಕು ಎಂದು ಒತ್ತಾಯ ಮಾಡಿದರು,

Share and Enjoy !

Shares