ನಾರಾಯಣಪುರ ಬಲದಂಡೆ ಕಾಲುವೆ ಹಾಗೂ ರಾಂಪುರ ಏತ ನೀರಾವರಿ ಕಾಲುವೆಗಳಿಗೆ ಏಪ್ರಿಲ್ 20 ರ ವರೆಗೆ ನೀರು ಹರಿಸಲು ಶಾಸಕ ಡಿ ಎಸ್ ಹುಲಿಗೇರಿ ಉಪಮುಖ್ಯಮಂತ್ರಿಗೆ ಆಗ್ರಹ

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ

ರಾಯಚೂರು ಜಿಲ್ಲೆ

ಇಂದು ದಿನಾಂಕ:30.3.2021 ರಂದು ಡಿ.ಎಸ್. ಹೂಲಗೇರಿ ಮಾನ್ಯ ಶಾಸಕರು ಲಿಂಗಸುಗೂರು ವಿಧಾನಸಭಾ ಕ್ಷೇತ್ರ ಇವರು. ನಾರಾಯಣಪುರ ಬಲದಂಡೆ ಕಾಲುವೆ ಹಾಗೂ ರಾಂಪುರ ಏತ ನೀರಾವರಿ ಕಾಲುವೆಗಳಿಗೆ ಏಪ್ರಿಲ್ 20 ರ ವರೆಗೆ ನೀರು ಹರಿಸಲು ರೈತರ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಾನ್ಯ ಶಾಸಕರು ಕೂಡಲೇ ಗೋವಿಂದ.ಎಂ. ಕಾರಜೋಳ ರವರು ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಅಧ್ಯಕ್ಷರು ನೀರಾವರಿ ಸಲಹಾ ಸಮಿತಿ, ಕೃಷ್ಣಾ ಮೇಲ್ದಂಡೆ ಯೋಜನೆ ಇವರನ್ನು ಬೆಳಗಾವಿ ನಲ್ಲಿ ಭೇಟಿಯಾಗಿ ಬಲದಂಡೆ ಕಾಲುವೆ ಹಾಗೂ ರಾಂಪುರ ಏತ ನೀರಾವರಿ ಕಾಲುವೆಗಳಿಗೆ ಏಪ್ರಿಲ್ 20ರ ವರೆಗೆ ನೀರು ಹರಿಸಲು. ಮನವಿ ಮಾಡಿದರು ಶಾಸಕರ ಮನವಿಗೆ ಸ್ಪಂದಿಸಿದ ಉಪ ಮುಖ್ಯಮಂತ್ರಿಗಳು ಕೂಡಲೇ ಮುಖ್ಯ ಅಭಿಯಂತರರು ಆಲಮಟ್ಟಿ ಡ್ಯಾಮ್ ಇವರಿಗೆ ದೂರವಾಣಿ ಮುಖಾಂತರ ಮಾತನಾಡಿ ಶಾಸಕರ ಮನವಿಯಂತೆ ಏಪ್ರಿಲ್ 5 ರವರೆಗೂ ಕಾಲುವೆಗಳಿಗೆ ನೀರು ಹರಿಸಲು ಹಾಗೂ ಡ್ಯಾಮಿನಲ್ಲಿ ನೀರಿನ ಲಭ್ಯತೆ ಅನುಗುಣವಾಗಿ ಮತ್ತೆ ಮುಂದೆ ನೀರು ಹರಿಸಲು ಕ್ರಮ ವಹಿಸುವಂತೆ ಸೂಚಿಸಿದರು

Share and Enjoy !

Shares