ವಿಜಯನಗರವಾಣಿ
ರಾಯಚೂರು ಜಿಲ್ಲೆ
ಲಿಂಗಸೂಗೂರು ; ನಾರಾಯಣಪುರ ನಾಲೆಗೆ ಏಪ್ರಿಲ್ 20 ರವರೆಗೆ ನೀರು ಬಿಡಬೇಕೆಂದು ಈ ಭಾಗದ ಸಾವಿರಾರು ರೈತರು ಹೋರಾಟ ಮಾಡುತ್ತಿದ್ದರೂ ಕೂಡಾ ಸಂಬಂಧಪಟ್ಟ ನೀರಾವರಿ ಸಲಹಾ ಸಮಿತಿಯಲ್ಲಿ ತುರ್ತು ಸಭೆ ಕರೆದು ಸರ್ಕಾರದ ಮಂತ್ರಿಗಳಾಗಲಿ , ಜನಪ್ರತಿನಿಧಿಗಳಾಗಲಿ , ಅಧಿಕಾರಿಗಳಾಗಲಿ ಇತ್ತ ಕಡೆ ಗಮನ ಹರಿಸದೇ ಬೇಜವಾಬ್ದಾರಿ ತೋರುತ್ತಿರುವುದರ ವಿರುದ್ದ ಕರುನಾಡ ವಿಜಯಸೇನೆ ಗಂಬಿರವಾಗಿ ಖಂಡಿಸುತ್ತದೆ . ವರ್ಷವಿಡೀ ರೈತರು ಲಕ್ಷಾಂತರ ರೂಪಾಯಿಗಳನ್ನು ಸಾಲ – ಶೂಲ ಮಾಡಿ ಹಗಲೆನ್ನದೇ , ರಾತ್ರಿಯನ್ನದೇ , ಮಕ್ಕಳು – ಮರಿಗಳನ್ನು ಬಿಟ್ಟು , ಬೆಳೆದಂತ ಬೆಳೆಗೆ ಸರಿಯಾದ ಸಮಯದಲ್ಲಿ ನೀರು ಸರಬರಾಜು ಮಾಡದೇ ನಿಲ್ಲಿಸಿರುವುದು ಯಾವ ನ್ಯಾಯ ? ಲಕ್ಷಾಂತರ ಎಕರೆಗಳಲ್ಲಿ ಬೆಳೆ ಬೆಳೆದ ರೈತರಿಗೆ ಸಿಡಿಲು ಬಡಿದಂತಾಗಿದೆ . ಈಗಾಗಲೇ ರೈತರು ಪ್ರತಿ ಎಕರೆ ಭತ್ತಕ್ಕೆ 35,000 ರಿಂದ 45,000 ರೂಪಾಯಿ ಖರ್ಚು ಮಾಡಿದ್ದಲ್ಲದೇ ಹಾಗೆಯೇ ಇನ್ನಿತರ ಬೆಳೆಗಳಾದ ಮೇಸಿನಕಾಯಿ , ಶೇಂಗಾ , ಸಜ್ಜೆ , ಕಡಲೆ ಬೆಳೆಗಳಿಗೆ ಕೂಡಾ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ . ಇಂತಹ ಸಂದಿಗ್ನ ಪರಿಸ್ಥಿತಿಯಲ್ಲಿ ಏಪ್ರೀಲ್ -20 ರವರೆಗೆ ನಿರಂತರವಾಗಿ ನೀರು ಹರಿಸದಿದ್ದರೆ ಬೆಳೆಗಳು ನಾಶವಾಗುತ್ತದೆ . ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗೆ ಆಗುತ್ತದೆ . ಇದರಿಂದ ರೈತರು ಬೆಳೆದ ಬೆಳೆ ಕೈಗೆ ಸಿಗದೇ , ಮಾಡಿದ ಸಾಲ ಕಟ್ಟಲು ಆಗದೆ , ಸಾಲದ ಭಾದೆಯ ಸುಳಿಗೆ ಸಿಕ್ಕಿ ವಿಷ ಕುಡಿದು ಸಾಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ . ಪ್ರಯುಕ್ತ ಜನಪ್ರತಿನಿಧಿಗಳು , ಅಧಿಕಾರಿಗಳು , ಸರ್ಕಾರದ ಸಂಬಂಧಪಟ್ಟ ಮಂತ್ರಿಗಳಿಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ನೀರಾವರಿ ಸಲಹಾ ಸಮಿತಿಯ ತುರ್ತು ಸಭೆ ಕರೆದು ಏಪ್ರಿಲ್ -20 ರವರೆಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಕರುನಾಡ ವಿಜಯಸೇನೆ ಒತ್ತಾಯಿಸುತ್ತದೆ . ಒಂದು ವೇಳೆ ತಾವು ರೈತರ ಸಮಸ್ಯೆಗೆ ಸ್ಪಂದಿಸದೇ ಹೋದರೆ ಕರುನಾಡ ವಿಜಯಸೇನ ವತಿಯಿಂದ ಜಿಲ್ಲಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಕರುನಾಡ ವಿಜಯಸೇನೆ ರಾಜ್ಯ ಕಾರ್ಯದರ್ಶಿ ಶಿವಪುತ್ರ ಗಾಣದಾಳ ಎಚ್ಚರಿಕೆ ನೀಡಿದ್ದಾರೆ