ಸಿಡಿ ಮಹಿಳೆಗೂ ನನಗೂ ಯಾವ ಸಂಬಂಧವಿಲ್ಲ: ಡಿ.ಕೆ.ಶಿವಕುಮಾರ

ವಿಜಯನಗರವಾಣಿ
ರಾಯಚೂರು ಜಿಲ್ಲೆ
ಲಿಂಗಸೂಗೂರು ; ತಾಲ್ಲೂಕಿನ ಮುದಗಲ್ ಸಿಡಿ ಮಹಿಳೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.
ಮಸ್ಕಿ ಉಪಚುನಾವಣೆ ಅಂಗವಾಗಿ ಆರ್.ಬಸನಗೌಡರ ನಾಮಪತ್ರಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ರಾಜ್ಯ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಟ್ಟಣದ ಶಾಸಕ ಡಿ.ಎಸ್.ಹೂಲಗೇರಿ ನಿವಾಸದ ಆವರಣದಲ್ಲಿ ನಿರ್ಮಿಸಿದ ಹೆಲಿಪ್ಯಾಡ್ ಸ್ಥಳಕ್ಕೆ ಹೆಲಿಕ್ಯಾಪ್ಟರ್‌ನಿಂದ ಬಂದಿಳಿದ ಬಳಿಕ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೆನೆ ಸಿಡಿ ಮಹಿಳೆಗೂ ನಾನಗೂ ಯಾವುದೆ ಸಂಬAದವಿಲ್ಲ. ಬೆಳಗಾವಿ ಘಟನೆ ರಾಜಕಾರಣಿಗಳಿಗೆ ಹೊಸತಲ್ಲ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದೇ ನನ್ನ ಗುರಿಯಾಗಿದೆ. ಮಸ್ಕಿ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿದೆ. ರಾಜ್ಯದ ಜನರು ಎಲ್ಲಾವನ್ನು ಗಮನಿಸುತ್ತಿದ್ದಾರೆಎಂದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು. ಹೂಲಗೇರಿ ನಿವಾಸದಲ್ಲಿ ಭೂಜನಸವಿದ ನಾಯಕರ ದಂಡು ನಂತರ ಮಸ್ಕಿಯಲ್ಲಿ ಆರ್.ಬಸನಗೌಡ ತುರ್ವಿಹಾಳ ನಾಮಪತ್ರಸಲ್ಲಿಕೆ ಕಾರ್ಯಕ್ರಮಕ್ಕೆ ತೆರಳಿದರು. ಕೆಪಿಸಿಸಿ ಕಾರ್ಯಧ್ಯಕ್ಷರಾದ ದೃವನಾರಾಯಣ, ಸಲಿಂ ಅಹ್ಮದ್, ಶಾಸಕರಾದ ಜಮ್ಮೀರ ಅಹ್ಮದ್, ಕಂಪ್ಲಿ ಶಾಸಕ ಗಣೇಶ, ಡಿ.ಎಸ್.ಹೂಲಗೇರಿ, ಯೂತ್ ಕಾಂಗ್ರೆಸ್‌ನ ರಾಜ್ಯಧ್ಯಕ್ಷ ಬಸನಗೌಡ, ಮಾಜಿ ಶಾಸಕರಾದ ಹಂಪನಗೌಡ ಬಾದರಲಿ, ಹಸನಸಾಬ ದೋಟಿಹಾಳ, ಜಿಲ್ಲಾಧ್ಯಕ್ಷ ಬಿ.ವಿ.ನಾಯಕ, ಲಿಂಗಸುಗೂರ ತಾಲೂಕಾ ಅಧ್ಯಕ್ಷ ಭೂಪನಗೌಡ, ಮುದಗಲ್ಲ ಅಧ್ಯಕ್ಷ ದಾವೂದಸಾಬ ಸೇರಿದಂತೆ ಕಾಂಗ್ರೆಸ್‌ನ ಹಿರಿಯ ಮುಖಂಡರು ಇದ್ದರು.

Share and Enjoy !

Shares