ವಿಜಯನಗರ ವಾಣಿ ಸುದ್ದಿ..
ರಾಯಚೂರು ಜಿಲ್ಲೆ
ಸಿಂಧನೂರು : ಪೂರ್ವಭಾವಿ ಸಭೆಗೆ ಅಧಿಕಾರಿಗಳು ಗೈರು, ಪೂರ್ವಭಾವಿ ಸಭೆಗೆ 3 ಗಂಟೆಗೆ ಮುಂದೂಡಿಕೆ..
ನಗರದ ತಹಶಿಲ್ ಕಚೇರಿ ವಿವಿಧ ಜಯಂತಿಗಳ ಪ್ರಯುಕ್ತ ಪೂರ್ವಭಾವಿ ಸಭೆಯನ್ನು ತಾಲೂಕು ದಂಡಧಿಕಾರಿ ಕವಿತಾ ಆರ್ ರವರು
ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು. ಪೂರ್ವಭಾವಿ ಸಭೆಗೆ ಕೆಲವು ಇಲಾಖೆ ಅಧಿಕಾರಿಗಳು ಗೈರಾದರೆ.ಇನ್ನೂ ಕೆಲವು ಇಲಾಖೆ ಅಧಿಕಾರಿಗಳು ತಮ್ಮ ಬದಲಾಗಿ ಇಲಾಖೆ ಸಿಬ್ಬಂದಿಗಳನ್ನು ಪೂರ್ವಭಾವಿ ಸಭೆಗೆ ಕಳಿಸಿದ ಹಿನ್ನೆಲೆಯಲ್ಲಿ ವಿವಿಧ ಸಂಘ ಸಂಸ್ಥೆಗಳು ಮುಖಂಡರು ಮಾತನಾಡಿ ಜಯಂತಿ ಕಾರ್ಯಕ್ರಮಗಳನ್ನು ಕಾಟಾಚಾರ ಮಾಡುವುದು ಏತಕ್ಕೆ ಇದರಿಂದಾಗಿ ಮಹಾನ್ ವ್ಯಕ್ತಿಗಳಿಗೆ ಅಪಮಾನ ಮಾಡಿದಂತೆ ಯಾಗುತ್ತದೆ ದಯವಿಟ್ಟು ಸಭೆಯನ್ನು ಮುಂದೂಡಲು ಮನವಿ ಮಾಡಿದರು.
ಈ ಮನವಿಗೆ ಸ್ಪಂದಿಸಿದ ತಾಲ್ಲೂಕು ದಂಡಾಧಿಕಾರಿ ಕವಿತಾ ಆರ್ ಅವರು ಪೂರ್ವಭಾವಿ ಸಭೆಯನ್ನು 3ಗಂಟೆಗೆ ತಹಸಿಲ್ ಕಚೇರಿಯಿಂದ ತಾಲ್ಲೂಕು ಪಂಚಾಯಿತಿ ಸಭಾಂಗಣ ದಲ್ಲಿ ನಡೆಸಲಾಗುವುದು ಎಂದು ತಿಳಿಸಿದರು ಜೊತೆಗೆ ಕೊವಿಡ್ ನಿಯಮಗಳನ್ನು ಪಾಲನೆ ಮಾಡುವ ಸಲುವಾಗಿ ಸಂಘ ಸಂಸ್ಥೆಯಿಂದ ಕೇವಲ ಒಬ್ಬರು ಸದಸ್ಯರು ಮಾತ್ರ ಹಾಜರಿರುವಂತೆ ಸೂಚನೆ ನೀಡಿದರು