ರಾಯಚೂರು ಜಿಲ್ಲೆಗೆ 2 ನೇ ಸ್ಥಾನ ವಿದ್ಯಾರ್ಥಿನಿ

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ

ರಾಯಚೂರು ಜಿಲ್ಲೆ

ಲಿಂಗಸೂಗೂರು : ನಗರದ ಎಕ್ಸ್ಪರ್ಟ್ ಕೋಚಿಂಗ್ ಮತ್ತು ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿನಿ ಸೃಷ್ಟಿ ತಂದೆ ಬಸವರಾಜು ಜಯವಾಡಗಿ ರಾಯಚೂರು ಜಿಲ್ಲೆಗೆ ಎರಡನೇ ಸ್ಥಾನ ಬರುವ ಮೂಲಕ ಶಾಲೆಗೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾಳೆ . ಮೊರಾಜಿ ದೇಸಾಯಿ ವಸತಿ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ೨ ನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾಳೆ . ವಿದ್ಯಾರ್ಥಿನಿಯ ಈ ಸಾಧನೆಗೆ ಸ್ಕೂಲ್‌ನ ಅಧ್ಯಕ್ಷ ಅಯ್ಯಪ್ಪ ಮಾಳೂರ್ , ಮುಖ್ಯಗುರು ಜಗು ಪಾಕರೆಡ್ಡಿ , ಶಿಕ್ಷಕಿಯರಾದ ಪ್ರೇಮಲತಾ , ಮಮತಾ , ಸುಷ್ಮಾ , ಅಕ್ಷತಾ , ಸಿದ್ದಲಿಂಗಮ್ಮ , ಶುಭಾನಾ ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ

Share and Enjoy !

Shares