ಬಳ್ಳಾರಿ,ಏ.03: ಮಾಹಿತಿ ಹಕ್ಕು ಕಾಯ್ದೆ ಅಧಿನಿಯಮವನ್ನು ಆನ್‍ಲೈನ್ ಮೂಲಕ ಅನುಷ್ಠಾನಗೊಳಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳಿಗೆ ನಗರದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಇತ್ತೀಚೆಗೆ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಆರ್‍ಟಿಐ ನೋಡಲ್ ಅಧಿಕಾರಿಗಳು, ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.ಮಾಹಿತಿ ಹಕ್ಕು ಕಾಯ್ದೆ ಅಧಿನಿಯಮವನ್ನು ಆನ್‍ಲೈನ್ ಮೂಲಕ ಅನುಷ್ಠಾನಗೊಳಿಸುವುದು ಹೇಗೆ ಎಂಬುದರ ಕುರಿತು ಜಿಲ್ಲಾ ಆಧಾರ್ ಸಮಾಲೋಚಕರಾದ ಗಣೇಶ ಅವರು ತರಬೇತಿ ನೀಡಿದರು.ಈಗ ಆಫ್‍ಲೈನ್ ಸೇವೆಯಲ್ಲಿರುವ ಮಾಹಿತಿ ಹಕ್ಕು ಕಾಯ್ದೆಯನ್ನು ಸದ್ಯ 8 ಇಲಾಖೆಗಳಲ್ಲಿ ಆನ್‍ಲೈನ್ ಮೂಲಕವು ಸೇವೆ ಒದಗಿಸಲಾಗುತ್ತಿದೆ. ಶೀಘ್ರದಲ್ಲಿಯೇ ಉಳಿದ ಇಲಾಖೆಗಳಲ್ಲಿಯೂ ಆನ್‍ಲೈನ್ ಮೂಲಕ ಅನುಷ್ಠಾನಗೊಳಿಸಲು ಸರಕಾರ ಉದ್ದೇಶಿಸಿದೆ; ಸಾರ್ವಜನಿಕರಿಗೆ ಕ್ಷೀಪ್ರಗತಿಯಲ್ಲಿ ಸೇವೆ ಲಭ್ಯವಾಗಬೇಕು ಮತ್ತು ಯಾವುದೇ ರೀತಿಯ ವಿಳಂಬಕ್ಕೆ ಅಸ್ಪದವಾಗಬಾರದು ಎಂಬ ಉದ್ದೇಶ ಹೊಂದಿದೆ ಎಂದರು.ಮಾಹಿತಿ ಕೋರಿ ಅರ್ಜಿದಾರರು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೇ? ಮತ್ತು ಹಣ ಪಾವತಿ ಮಾಡುವುದು ಹೇಗೆ, ಅರ್ಜಿ ಸ್ಥಿತಿಗತಿ ತಿಳಿಯಲು ಇಮೇಲ್ ಐಡಿ,ಮೊಬೈಲ್ ನಂಬರ್ ಕಡ್ಡಾಯವಾಗಿ ನಮೂದು ಮಾಡುವಿಕೆ, ಅರ್ಜಿದಾರರಿಂದ ಅರ್ಜಿ ಬಂದ ನಂತರ ಆರ್‍ಟಿಐ ನೋಡಲ್ ಅಧಿಕಾರಿಗಳು, ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಅನುಸರಿಸಬೇಕಾದ ಕ್ರಮಗಳನ್ನು ಆನ್‍ಲೈನ್‍ನಲ್ಲಿಯೇ ವಿವಿಧ ರೀತಿಯ ಉದಾರಣೆಗಳನ್ನ ಪ್ರಚುರಪಡಿಸುವುದರ ಮೂಲಕ ತಿಳಿಸಿಕೊಟ್ಟರು.ಈ ಸಂದರ್ಭದಲ್ಲಿ ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಸುನೀತಾ, ಉಪಪ್ರಾಂಶುಪಾಲ ಸುರೇಶ ಸೇರಿದಂತೆ ತರಬೇತಿ ಕೇಂದ್ರದ ಬೋಧಕ ಸಿಬ್ಬಂದಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.