ಹೋಟೆಲ್ ಸಿರಿ ದರ್ಶಿನಿಯಿಂದ ಮಜ್ಜಿಗೆ, ನೀರಿನ ಅರವಟಿಗೆ ದಾಹ ತಣಿಸುತ್ತಿವೆ ಅರವಟಿಗೆಗಳು- ಎನ್ ಎಸ್ ಬೋಸರಾಜು

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ಬೇಸಿಗೆ ಮುನ್ನವೆ ದಿನೆ ದಿನೆ ಬಿಸಿಲಿನ ತಾಪ ಹೆಚ್ಚುತ್ತಿದೆ, 400- 500 ಕೀ ಮೀ ನಿಂದ ನಡೆದು ಬರುತ್ತಿರುವ ಶ್ರೀ ಶೈಲ ಪಾದಯಾತ್ರಿಗಳಿಗೆ ಮಜ್ಜಿಗೆ, ನೀರಿನ ಅರವಟಿಗೆಗಳು ದಾಹ ತಣಿಸುತ್ತಿವೆ ಎಂದು ಎನ್ ಎಸ್ ಬೋಸರಾಜು ತಿಳಿಸಿದರು.
ಲಿಂಗಸ್ಗೂರು ರಸ್ತೆಯಲ್ಲಿರುವ ಹೋಟೆಲ್ ಸಿರಿ ದರ್ಶಿನಿಯಿಂದ ಮಾಡಿದ ಮಜ್ಜಿಗೆ, ನೀರಿನ ಅರವಟಿಗೆಯನ್ನು ಉದ್ಘಾಟಿಸಿ ಮಾತನಾಡಿದರು.
ನಗರದ ಜನತೆ ಹಾಗೂ ಸಂಘ ಸಂಸ್ಥೆಗಳು ಶ್ರೀ ಶೈಲ ಪಾದಯಾತ್ರೆ ಭಕ್ತಾದಿಗಳಿಗೆ ಊಟ, ಉಪಹಾರ, ಮಜ್ಜಿಗೆ, ನೀರಿನ ಅರವಟಿಗೆ ಸೇರಿದಂತೆ ಹಣ್ಣು ಹಂಪಲು ನೀಡುತ್ತಿರುವದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಜಯಣ್ಣ, ತಿಮ್ಮಪ್ಪ ನಾಯಕ ಅಸ್ಕಿಹಾಳ, ರಂಗಸ್ವಾಮಿ, ಶರಣಪ್ಪ ಕಂದಗಲ್, ಬಸವರಾಜ ಸ್ವಾಮಿ ಪಾತಾಪುರ, ನಾಗರಾಜ, ನರಸಿಂಹ, ಸಿರಿ ದರ್ಶಿನಿ ಹೋಟೆಲ್ ನ ಶಂಕರಯ್ಯ ಸ್ವಾಮಿ, ಪ್ರಶಾಂತ ಸ್ವಾಮಿ ಕಕ್ಕೇರಾ ಸೇರಿದಂತೆ ಇತರರಿದ್ದರು.

Share and Enjoy !

Shares