ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸುಗೂರು : ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರನಾಯಕ ಹಾಗೂ ಮಾಜಿ ಉಪ ಪ್ರಧಾನಿಗಳಾದ ಡಾ; ಬಾಬು ಜಗಜೀವನ್ ರಾಮ್ ರವರ 114 ನೇ ಜಯಂತಿಯನ್ನು ಪಟ್ಟಣದ ಗುರುಭವನದಲ್ಲಿ ದಲಿತ ಮುಖಂಡರು ಡಾ; ಬಾಬು ಜಗಜೀವನ್ ರಾಮ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.ಈ ವೇಳೆ ಪತ್ರಕರ್ತ ಅಮರಯ್ಯ ಘಂಟಿ ಮಾತನಾಡಿ, ಬಾಬು ಜಗಜೀವನರಾಮ್ ಜಯಂತಿಯಂದು ಅವರನ್ನು ಸ್ಮರಿಸುತ್ತವೆ. ಶೋಷಿತರ ಹಕ್ಕಿಗಾಗಿ ಹೋರಾಟ ಮಾಡಿದ ಮತ್ತು ದೇಶಕ್ಕೆ ಮಾಡಿರುವ ಕೊಡುಗೆ ಅಪಾರವಾದದ್ದು ಎಂದರು.
ಈ ಸಂದರ್ಭದಲ್ಲಿ ಮಹಾಸಭದ ತಾಲೂಕ ಅಧ್ಯಕ್ಷ ರಮೇಶ ಗೋಸ್ಲೆ, ಪತ್ರಕರ್ತರ ಅಧ್ಯಕ್ಷ ಶಿವರಾಜ ಕೆಂಭಾವಿ, ಮೋಹನ್ ಗೋಸ್ಲೆ, ಕುಪ್ಪಣ್ಣಹೊಸಮನಿ, ಆಂಜನೇಯ ಭಂಡಾರಿ, ಶ್ರೀನಿವಾಸ್ ಕರಡಕಲ್, ಪತ್ರಕರ್ತ ಹನುಮಂತ ಕನ್ನಾಳ ಸೇರಿದಂತೆ ದಲಿತ ಮುಖಂಡರು ಇದ್ದರು.