ವಿಜಯನಗರವಾಣಿ
ಲಿಂಗಸೂಗೂರು ; ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜಶೇಖರ ಮುಲಾಲಿ ಸ್ಪರ್ಧೆ ಮಾಡಿದ್ದು ಅವರಿಗೆ ತಮ್ಮ ಅತ್ಯಮೂಲ್ಯವಾದ ಮತವನ್ನು ನೀಡಿ ಕನ್ನಡ ಸೇವೆ ಮಾಡಲು ಅವಕಾಶ ನೀಡಿ ಎಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಹನುಮೇಶ ಉಪ್ಪಾರ ಹೇಳಿದರು,
ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಯ ಅಂಗವಾಗಿ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ರಾಜಶೇಖರ ಮುಲಾಲಿ ಪರ ಮತಯಾಚನೆ ಮಾಡಿ ಮಾತನಾಡಿದರು, ಭ್ರಷ್ಟಾಚಾರ ಮುಕ್ತ ಹಾಗೂ ಪಾರದರ್ಶಕ ಕನ್ನಡ ಜಾರಿಯಾಗುವ ಉದ್ದೇಶವನ್ನು ಸಾಹಿತ್ಯ ಪರಿಷತ್ತು ಹೊಂದಿದೆ ಕನ್ನಡ ಸಾಹಿತ್ಯ ಪರಿಷತ್ತನಲ್ಲಿ ಮಹಿಳೆಯರಿಗೆ ಆದ್ಯತೆ ನೀಡಿಲಾಗುವದು, ಗುರುತಿನ ಚೀಟಿ ನೀಡಿ ಸಮ್ಮೇಳನಗಳಿಗೆ ಹಾಜರಾಗುವ ವಾಹನಗಳಿಗೆ ಉಚಿತ ಟೋಲ್ ವ್ಯವಸ್ಥೆ ಮಾಡಲಾಗುವದು, ಕನ್ನಡ ನಾಡುನುಡಿ ಸಾಹಿತ್ಯ ಭಾಷೆ ನೆಲ ಜಲದ ಪರ ಹೋರಾಟಗಾರರು ಕನ್ನಡದ ಚಿಂತಕರು ಸಾಧಕರು ಹಾಗೂ ಹಿರಿಯ ಪತ್ರಕರ್ತರನ್ನು ಗುರುತಿಸಿ ಪುರಸ್ಕರಿಸಲಾಗುವದು ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತು ಅಭಿವೃದ್ಧಿಗೆ ಶ್ರಮಿಸಲಾಗುವದು ಎಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಹನುಮೇಶ ಉಪ್ಪಾರ ಹೇಳಿದರು,
ಇದೆ ಸಂದರ್ಭದಲ್ಲಿ ರಘುವೀರ ಚಲುವಾದಿ, ರಾಮಣ್ಣ ಉಪ್ಪಾರ, ತರುಣಕುಮಾರ ಮುಲಾಲಿ, ಪತ್ರಕರ್ತರಾದ ಶಶಿಧರ ಕಂಚಿಮಠ, ವಾಹೀದ್ ಖುರೇಶಿ, ಸುರೇಶ ವಿಶ್ವಕರ್ಮ ಸೇರಿದಂತೆ ಮುಂತಾದವರು ಇದ್ದರು.