ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ
ಸಿಂಧನೂರು: ಆನೆಕಲ್ಲ ಮಳೆಯಿಂದ ರೈತರು ಬೆಳೆದ ಬೆಳೆ ನಷ್ಟ ಹೊಂದಿದ್ದು ಕೂಡಲೇ ಎಕ್ಕರೆಗೆ 25 ಸಾವಿರ ರೂ.ಪರಿಹಾರ ಕೊಡಲು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಒತ್ತಾಯಿಸಿದರು.
ತಾಲ್ಲೂಕಿನ ತುವಿ೯ಹಾಳ ಪಟ್ಟಣ ದ ಶ್ರೀನಿವಾಸಕ್ಯಾಂಪನಲ್ಲಿ ಮಳೆಯಿಂದ ಭತ್ತದ ಬೆಳೆ ನೆಲಕ್ಕೆ ಬಿದ್ದಿರುವು ಬೆಳೆಯನ್ನು ಮಾಜಿ ಶಾಸನ ಹಂಪನಗೌಡ ಬಾದರ್ಲಿ ಹಾಗೂ ಆರ್.ಬಸನಗೌಡ ತುವಿ೯ಹಾಳ ರವರು ವಿಕ್ಷಣೆ ಮಾಡಿದರು.
ನಂತರ ಮಾತನಾಡಿದ ಅವರು ತುವಿ೯ಹಾಳ ಹೊಬಳಿ ಶ್ರೀನಿವಾಸ ಕ್ಯಾಂಪ್ ಸೇರಿದಂತೆ ಇತರೆ ಗ್ರಾಮಗಳಲ್ಲಿ ಆನೆಕಲ್ಲ ಮಳೆಯಿಂದ ರೈತರು ಸಾವಿರಾರು ಎಕರೆಯಲ್ಲಿ ಭತ್ತದ ಬೆಳೆ ನಷ್ಟ ಹೊಂದಿದ್ದು ಕೂಡಲೇ ಜಿಲ್ಲಾಡಾಳಿತ ಸಮೀಕ್ಷೆಯನ್ನು ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು.
ಈ ಹಿಂದೆ ತಾಲ್ಲೂಕಿನ ಆನೆಕಲ್ಲ ಮಳೆ ಬಂದಾಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ರೈತರ ನೆರವಿಗೆ ದಾವಿಸಿ ನಷ್ಟ ಹೊಂದಿದ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ರೂ.ಯಂತೆ ಪರಿಹಾರ ವನ್ನು ನೀಡಿದ್ದರು. ಅದೇ ಮಾದರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರ ಸರ್ಕಾರವು ಸಹ ಕೂಡಲೇ ಆನೆಕಲ್ಲ ಮಳೆಯಿಂದ ನಷ್ಟ ಹೊಂದಿದ ರೈತರಿಗೆ ಎಕರೆಗೆ 25 ಸಾವಿರ ರೂ.ಪರಿಹಾರ ನೀಡಲು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಸ್ಕಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ತುರ್ವಿಹಾಳ,ಸೇರಿದಂತೆ ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರು ಉಪಸ್ಥಿತರಿದ್ದರು.