ಜ್ಯೂನಿಯರ್ ಜೇಸಿಯಿಂದ ಕುಡಿಯುವ ನೀರಿನ ಅರವಟ್ಟಿಗೆ ಆರಂಭ.

Share and Enjoy !

Shares
Listen to this article
ವಿಜಯನಗರವಾಣಿ ಸುದ್ದಿ,
ಹಗರಿಬೊಮ್ಮನಹಳ್ಳಿ: ಹೆಚ್ಚುತ್ತಿರುವ ಬಿಸಿಲಿನ ತಾಪಮಾನಕ್ಕೆ ಹಳ್ಳಿಗಳಿಂದ ಪಟ್ಟಣಕ್ಕೆ ಬರುವ ಜನರಿಗೆ ಅನುಕೂಲವಾಗುವಂತೆ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆಯನ್ನು ಪಟ್ಟಣದ  ಬಸವೇಶ್ವರ ಬಜಾರ್ ದಲ್ಲಿ ಜೇಸಿಐ ಹಬೊಹಳ್ಳಿ ಸನ್ ಪ್ಲವರ್ ಘಟಕದ ಮಕ್ಕಳ ವಿಭಾಗದಿಂದ ಗುರುವಾರ  ಆರಂಭಿಸಲಾಯಿತು.
ಜೇಸಿಐ ಸಂಸ್ಥೆಯ ಪೂರ್ವ ವಲಯ ಉಪಾಧ್ಯಕ್ಷರಾದ ಜೆಸಿ ಯೋಗೀಶ್ವರ ದಿನ್ನೆ ಉದ್ಘಾಟಿಸಿ ಮಾತನಾಡಿ, ಜ್ಯೂನಿಯರ್ ಜೆಸಿ ವಿಭಾಗದ ಅಧ್ಯಕ್ಷೆ ಜೆಜೆಸಿ ಹಿರಾಲ್ ಜೈನ್ ಅಧ್ಯಕ್ಷತೆಯಲ್ಲಿ ಒನ್ ನೇಚರ್, ಒನ್ ಪ್ಯೂಚರ್ ಕಾರ್ಯಕ್ರಮದಡಿಯಲ್ಲಿ ಪಕ್ಷಿ ಸಂಕುಲ ರಕ್ಷಣೆಗೆ ಸಾವಿರಾರು ಪಕ್ಷಿ ಪ್ರಾಣಿಗಳಿಗೆ ಬಿಸಿಲ ಬೇಗೆಯನ್ನು ತಣಿಸುವ ಜತೆಗ ಸಾರ್ವಜನಿಕರಿಗೆ ನೀರಿನ ಅರವಟ್ಟಿಗೆ ಆರಂಭಿಸಿರುವುದು ಶ್ಲಾಘನೀಯ ಎಂದರು. 
ಇದೇ ವೇಳೆ  ಯುವಜೇಸಿ ವಿಭಾಗದಿಂದ ಫ್ಯಾನ್ಸಿ ಡ್ರೆಸ್ ಸ್ಪರ್ಧೆ, ಬೆಸ್ಟ್ ಕಪಲ್ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. 
ಕಾರ್ಯಕ್ರಮದಲ್ಲಿ ಸಮಾಜ ಸೇವಕ ನಾಗಭೂಷಣ್, ಶಿಕ್ಷಕಿ ಸುಮಾ, ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತ ಜೇಸಿ ಯೋಗೀಶ್ವರ ದಿನ್ನೆ, ಅನನ್ಯ ದಿನ್ನೆ ಗೌರವಿಸಿ ಸನ್ಮಾನಿಸಲಾಯಿತು.
ಜೇಸಿಐ ಕೊಟ್ಟೂರು ಕಾಟನ್ ಘಟಕದ ಜೆಜೆಸಿ ವಿಭಾಗದ ಪೂರ್ವಾಧ್ಯಕ್ಷೆ ಅನನ್ಯ ದಿನ್ನೆ, ಸನ್ ಫ್ಲವರ್  ಘಟಕಾಧ್ಯಕ್ಷರಾದ ಪಿ.ಶಿವಪುತ್ರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಕೋರಗಲ್, ಪೂರ್ವ ವಲಯಾಧ್ಯಕ್ಷರಾದ ಕರಿಬಸವರಾಜ್ ಬಾದಾಮಿ, ಪೂರ್ವ ವಲಯ ಉಪಾಧ್ಯಕ್ಷರಾದ ಬ್ರಹ್ಮಾನಂದ್ ಗುತ್ತಲ್, ವಲಯ ತರಬೇತುದಾರ ಕೊಟ್ರೇಶ್ ಸಕ್ರಿಹಳ್ಳಿ, ಸಂಸ್ಥೆಯ ಆನಂದ ಎತ್ತಿನಮನೆ, ಎಸ್.ಬಿ.ವಿರೂಪಾಕ್ಷ, ನವೀನ್ ಎಲಿಗಾರ್, ಕೆ.ರುದ್ರೇಶ್, ಧರ್ಮೇಂದ್ರ ಜೈನ್, ಮಹಿಳಾ ವಿಭಾಗದ ಉಮಾದೇವಿ ಕೊರಗಲ್,  ಪಿಂಕಿ ಧರ್ಮೇಂದ್ರ ಜೈನ್, ಸಾನ್ವಿ ಸಕ್ರಿಹಳ್ಳಿ ಕಾರ್ಯದರ್ಶಿ ಶಿವಪ್ರಕಾಶ್ ಝಳಕಿ ಇತರರಿದ್ದರು.

Share and Enjoy !

Shares