ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ
ಸಿಂಧನೂರು: ದಿನದಿಂದ ದಿನಕ್ಕೆ ಕೊರೋನಾ
ಆರ್ಭಟ ಹೆಚ್ಚಾಗುತ್ತಿದ್ದು.ನಿಯಂತ್ರಣಕ್ಕಾಗಿ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ರ ವರೆಗೆ ವ್ಯಾಪಾರ ವಹಿವಾಟು ಅವಕಾಶ.
ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್-19 ಪ್ರಕರಣಗಳ ಸಂಖ್ಯೆ ಜೊತೆಗೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ. ಕೋವಿಡ್ ನಿಯಂತ್ರಣಕ್ಕಾಗಿ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಜೊತೆಗೆ ರಾಜ್ಯದಾದ್ಯಂತ ನೈಟ್ ಕರ್ಫ್ಯೂ ಮಾತ್ರ ಜಾರಿಗೆ ಮಾಡಿದ್ದು.ಆದರೆ ನಗರ ಸಭೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿ ಸಭೆಯನ್ನು ನಡೆಸಿ ಸರ್ಕಾರದ ನಿಯಮಗಳು ಹೇಳುವ ಜೊತೆಗೆ ನಗರದಲ್ಲಿ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ರ ವರೆಗೆ ವ್ಯಾಪಾರ ವಹಿವಾಟು ಮಾಡಲು ಅವಕಾಶ ನೀಡಿದ್ದು ಗೊಂದಲಕ್ಕೆ ಎಡೆಮಾಡಿಕೊಡುತ್ತದೆ.
ಹೌದು ಕಳೆದ ಬಾರಿ ಲಾಕ್ ಡೌನ್ ನಿಂದ ಬಡವರು ಬಿದಿಬದಿ ಸಣ್ಣ ಪುಟ್ಟ ವ್ಯಾಪಾರಸ್ಥರು ದುಡಿಮೆಯಿಲ್ಲದೆ ಬೀದಿಪಾಲಾಗಿದ್ದಾರೆ .ಇದೀಗ ವ್ಯಾಪಾರಸ್ಥರು ಚೇತರಿಸಿಕೊಳ್ಳುತ್ತಿರುವಾಗ ರಾಜ್ಯದಲ್ಲಿ ಎಲ್ಲಿಯೂ ಇಲ್ಲದ ನಿಯಮಗಳನ್ನು ತಾಲ್ಲೂಕು ಮಟ್ಟದ ಅಧಿಕಾರಿಗಳಾದ ತಹಶಿಲ್ದಾರ ಕವಿತಾ ಆರ್. ನಗರ ಸಭೆ ಪೌರಾಯುಕ್ತ ಆರ್ ವಿರೂಪಾಕ್ಷ ಮೂರ್ತಿ ಹಾಗೂ ಸಿಪಿಐ ಶ್ರೀಕಾಂತ್ ಕೂಡಿಕೊಂಡು 6 ರಿಂದ 2 ಗಂಟೆ ಮಾತ್ರ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಕೊಟ್ಟಿರುವುದು ಎಷ್ಟರ ಮಟ್ಟಿಗೆ ಸರಿ ?
ಅಧಿಕಾರಿಗಳು ತಮ್ಮ ದರ್ಪವನ್ನು ತೋರಿಸುವುದರ ಮೂಲಕ ಸಾರ್ವಜನಿಕ ಹಾಗೂ ವ್ಯಾಪಾರಸ್ಥರ ಹೊಟ್ಟೆ ಮೇಲೆ ಹೊಡೆಯಲು ಮುಂದಾಗಿದ್ದಾರೆ ಸಾರ್ವಜನಿಕರು
ಮಾತನಾಡುತ್ತಿರುವುದು ಕಂಡು ಬರುತ್ತಿದೆ.
ಇನ್ನೂ ಈ ಕುರಿತು ತಹಶಿಲ್ದಾರರ ಕವಿತಾ ಆರ್ ಮಾತನಾಡಿ ಜಿಲ್ಲಾಧಿಕಾರಿ ಗಳು ವಿಡಿಯೋ ಕಾನ್ಫ್ರೆನ್ಸ್ ನಲ್ಲಿ ತಿಳಿಸಿದ್ದಾರೆ ಅದಕ್ಕಾಗಿ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ರ ವರೆಗೆ ವ್ಯಾಪಾರ ವಹಿವಾಟು ಮಾಡಲು ಅವಕಾಶ ನೀಡಿದ್ದುಯಾವುದೇ ಅಧಿಕೃತ ಆದೇಶ ಪ್ರತಿನೀಡಿರುವುದಿಲ್ಲ.
ಜಿಲ್ಲಾಧಿಕಾರಿ ಗಳ ಗಮನ ತಂದು ಪ್ರತಿಯನ್ನು ಹಾಕಲಾಗುತ್ತದೆ ಎಂದು ತಿಳಿಸಿದರು.
ನಗರ ಸಭೆ ಪೌರಾಯುಕ್ತ ಆರ್ ವಿರೂಪಾಕ್ಷ ಮೂರ್ತಿ ಮಾತನಾಡಿ ಆದೇಶ ಪ್ರತಿ ಬಂದಿಲ್ಲ ಬೆಳಗ್ಗೆ ಬರುತ್ತದೆ ಎಂದು ಹೇಳುವುದು ನೋಡಿದಾಗ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ರಾಜ್ಯದಲ್ಲಿ ಒಂದು ನಿಯಮ ಇದ್ದರೆ ಇವರು ಬೇರೆ ನಿಯಮಗಳು ಜಾರಿಗೆ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.