ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ.
ಸಿಂಧನೂರು: ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ರ ವರೆಗೆ ವ್ಯಾಪಾರ ವಹಿವಾಟು ನಡೆಸುವ ಆದೇಶ ನೀಡಿ ಏಕಾಏಕಿ ಬೆಳಗ್ಗೆ 11 ಗಂಟೆಗೆ ಅಂಗಡಿ ಮುಂಗಟ್ಟು ಬಂದ್ ಮಾಡಿದ ಪೋಲಿಸರು ಅಧಿಕಾರಿಗಳು.ಸ್ಪಷ್ಟನೆ ಕೇಳಲು ತಹಶಿಲ್ದಾರರ ಕಚೇರಿ ಆಗಮಿಸಿದ ಶಾಸಕ ವೆಂಕಟರಾವ್ ನಾಡಗೌಡ.
ಹೌದು ದಿನದಿಂದ ದಿನಕ್ಕೆ ಕೊರೋನಾ
ಆರ್ಭಟ ಹೆಚ್ಚಾಗುತ್ತಿದ್ದು.ನಿಯಂತ್ರಣಕ್ಕಾಗಿ ತಾಲೂಕು ಮಟ್ಟದ ಅಧಿಕಾರಿಗಳು ಬುಧವಾರ ರಂದು ನಗರ ಪೋಲಿಸ್ ಹಾಗೂ ನಗರ ಸಭೆ ಕಾರ್ಯಾಲಯದಲ್ಲಿ ಸಭೆಯನ್ನು ನಡೆಸಿ ಜಿಲ್ಲಾಧಿಕಾರಿ ಆದೇಶ ಅನ್ವಯ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯಿಂದ ನೈಟ್ ಕರ್ಫ್ಯೂ ಜೊತೆಗೆ ಬೆಳಗ್ಗೆ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ರ ವರೆಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಇರುವುದು ಎಂದು ತಿಳಿಸಿದರು.
ಆದರೆ ಇಂದು ಬೆಳಗ್ಗೆ 11 ಗಂಟೆಗೆ ಏಕಾಏಕಿ ನಗರ ಪೋಲಿಸ್ ಅಧಿಕಾರಿಗಳು ಅಂಗಡಿ ಮುಂಗಟ್ಟು ಬಂದ್ ಮಾಡಿದರಿಂದ ಮಾಜಿ ಸಚಿವ.ಶಾಸಕ ವೆಂಕಟರಾವ್ ನಾಡಗೌಡ ರವರು ತಹಶಿಲ್ದಾರರ ಕಚೇರಿ ಆಗಮಿಸಿ ತಾಲೂಕು ದಂಡಧಿಕಾರಿ ಕವಿತಾ ಆರ್ ರನ್ನು ಭೆಟ್ಟಿ ಯಾಗಿ ಮಾಹಿತಿ ಪಡೆಯಲು ಮುಂದಾದರು ಆದರೆ ಜಿಲ್ಲಾಧಿಕಾರಿ ವಿಡಿಯೋ ಕಾನ್ಫರೆನ್ಸ್ ನಲ್ಲಿ ಸಭೆಯನ್ನು ನಡೆಸುತ್ತಿರುವ ಕಾರಣ ಸ್ಪಷ್ಟ ಮಾಹಿತಿ ಶಾಸಕ ವೆಂಕಟರಾವ್ ನಾಡಗೌಡ ರವರೆಗೆ ದೊರೆಯಲಿಲ್ಲ .
ಈ ಕುರಿತು ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿ ನಿನ್ನೆ ಜಿಲ್ಲಾಧಿಕಾರಿಗಳು ಸಭೆಯನ್ನು ನಡೆಸಿ ಬೆಳಿಗ್ಗೆ 6ಗಂಟೆಯಿಂದ ಮಧ್ಯಾಹ್ನ 2ಗಂಟೆವರೆಗೆ ವ್ಯಾಪಾರ ವಹಿವಾಟು ನಡೆಸಲು ಆದೇಶ ನೀಡಿ ಇಂದು ಬೆಳಿಗ್ಗೆ ಏಕಾಏಕಿ 11 ಗಂಟೆಗೆ ವ್ಯಾಪಾರ ವಹಿವಾಟು ಬಂದ್ ಮಾಡಲು ಮುಂದಾಗಿರುವುದರಿಂದ ಹಲವು ವ್ಯಾಪಾರಸ್ಥರು ಗೊಂದಲಕ್ಕೆ ಈಡಾಗಿ ಕರೆ ಮಾಡಲು ಮುಂದಾದ ಮುಂದಾದರು ಅದಕ್ಕಾಗಿ ಸ್ಪಷ್ಟನೆ ಕೇಳಲು ತಹಸಿಲ್ ಕಚೇರಿಗೆ ಬಂದಿವೆ ಆದರೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಜಿಲ್ಲಾಧಿಕಾರಿಗಳು ಸಭೆ ನಡೆಸಿರುವ ಕಾರಣ ಯಾವುದೇ ಮಾಹಿತಿ ದೊರಕಲಿಲ್ಲ .
ಈ ರೀತಿ ಜಿಲ್ಲಾಧಿಕಾರಿಗಳು ಗಂಟೆಗೊಂದು ಆದೇಶ ಹೊರಡಿಸುವುದರಿಂದ ಎಷ್ಟು ಸರಿ ? ಮದುವೆ ಕಾರ್ಯ ಹಾಗೂ ಇತರ ಕಾರ್ಯಗಳಿಗೆ ಜನರು ಸೇರಲು ಅವಕಾಶ ಮಾಡಿಕೊಟ್ಟು ಈಗ ಮದುವೆ ಸೀಜನ್ ಇರುವಾಗ ಬಂಗಾರದ ಅಂಗಡಿ ಗಳನ್ನು ಸೇರಿದಂತೆ ಬಟ್ಟೆ ಅಂಗಡಿ ಇತರೆ ಅಂಗಡಿಗಳನ್ನು ಬಂದ್ ಮಾಡುವುದು ಎಷ್ಟು ಸಮಂಜಸ. ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿ ಇರುವುದರಿಂದ ಜಿಲ್ಲಾ ಮಟ್ಟದ ಅಧಿಕಾರಿಗಳು ತಾವು ಆಡಿದ್ದೇ ಆಟ ಎನ್ನುವ ರೀತಿಯಲ್ಲಿ ಗಂಟೆಗೊಂದು ಆದೇಶ ಜಾರಿ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು
ಈ ಸಂಧರ್ಭದಲ್ಲಿ ಜೆಡಿಎಸ್ ಮುಖಂಡರಾದ ಬಿ ಶ್ರೀ ಹರ್ಷ,ರಂಗಾರೆಡ್ಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.