ವಿಜಯನಗರ ವಾಣಿ ಸುದ್ದಿ
ಕೊಟ್ಟೂರು : ರಾಜ್ಯಾಧ್ಯ0ತ ವಾರಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಕೊಟ್ಟೂರು ಮತ್ತು ತಾಲೂಕಿನ ಎಲ್ಲಾ ಕಡೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.ಶುಕ್ರವಾರ ರಾತ್ರಿಯಿಂದ ಸೇರಿದಂತೆ ಶನಿವಾರ ಮತ್ತು ರವಿವಾರ ಪಟ್ಟಣ ಬಿಕೋ ಎನ್ನುತ್ತಿದೆ.ಅನಗತ್ಯವಾಗಿ ರಸ್ತೆಗೆ ಇಳಿದ ಬೈಕ್ ಸವಾರರಿಗೆ ಸ್ವತಃ ತಹಶೀಲ್ದಾರ್ ರಸ್ತೆಗಿಳಿದು ಲಾಟಿ ರುಚಿ ತೋರಿಸಿ ಮನೆಯಲ್ಲಿರಿ ಎಂದು ಕರೋನ ಜಾಗೃತಿ ಮೂಡಿಸುತ್ತಿದ್ದಾರೆ.ಹಾಗು ಹೋಮ್ ಐಸೋಲೇಷನ್ ಸೋಂಕಿತ ಮನೆಗಳಿಗೆ ಭೇಟಿ ಕೊಟ್ಟು ಮಾಹಿತಿ ಪಡೆದರು.ಪಟ್ಟಣದ ಪ್ರಮುಖ ರಸ್ತೆಗಳಾದ ಬಸ್ ನಿಲ್ದಾಣ ವೃತ್ತ,ಉಜ್ಜಿನಿ ವೃತ್ತ ಹಾಗು ಇನ್ನಿತರ ಕಡೆ ರಸ್ತೆಗಳು ಖಾಲಿ ಹೊಡೆಯುತ್ತಿದ್ದವು.ಮಾರ್ಗ ಸೂಚಿ ಅನ್ವಯ ಬೆಳಗಿನ ಅವಧಿಯಲ್ಲಿ ಮಾತ್ರ ಜನರು ಅಗತ್ಯ ವಸ್ತುಗಳಿಗೆ ಮುಗಿಬಿದ್ದು ಖರೀದಿ ಮಾಡಿದರು.ಇನ್ನು ಕಲ್ಯಾಣ ಮಂಟಪಗಳಲ್ಲಿ ಸರ್ಕಾರದ ಆದೇಶ ಪ್ರಕಾರ ವಿವಾಹಗಳು ನಡೆದವು.ಆಸ್ಪತ್ರೆ ಮತ್ತು ಮೆಡಿಕಲ್ ಶಾಪ್ ಗಳನ್ನು ಹೊರತು ಪಡಿಸಿ ಬಹುತೇಕ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಸಿದ ಸಿಪಿಐ ದೊಡ್ಡಪ್ಪ, ಪಿಎಸ್ಐ ನಾಗಪ್ಪ ಮತ್ತು ಸಿಬ್ಬಂದಿಗಳು ಬಿಗಿ ಭದ್ರತೆ ಕಲ್ಪಿಸಿತ್ತು.