ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ರಾಯಚೂರು : ಕರ್ನಾಟಕ ರಾಜ್ಯದ ಮುಖ್ಯಮಂವತ್ರಿಗಳು ಬಿ.ಎಸ್.ಯಡಿಯೂರಪ್ಪನವರು ರಾಜ್ಯದಲ್ಲಿ ಉಚಿತವಾಗಿ ಕರೋನಾ ಚಿಕಿತ್ಸೆ ನೀಡುವಂತೆ ಸಿದ್ದರಾಮಯ್ಯ ಯುವ ಬ್ರಿಗೇಡ್ ಜಿಲ್ಲಾಧ್ಯಕ್ಷರಾದ ಅಯ್ಯಪ್ಪ ಗಬ್ಬೂರ್ ಸರ್ಕಾರಕ್ಕೆ ಆಗ್ರಹಿಸಿದರು.
ನೆರೆ ರಾಜ್ಯದ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತನ್ನ ರಾಜ್ಯದ ಎಲ್ಲಾ ಜನರಿಗೆ ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಉಚಿತ ಕರೋನಾ ಚಿಕಿತ್ಸೆ ನೀಡುವುದಾಗಿ ಘೋಷಿಸಿದ್ದರೆ.
ನಮ್ಮ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಕರೊನಾ ಉಚಿತ ಚಿಕಿತ್ಸೆ ಕೊಡಲು ಸರ್ಕಾರ ಮುಂದಾಗಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಬಡವರು,ರೈತರು,ಕೂಲಿ ಕಾರ್ಮಿಕರಿಗೆ ಕೋವಿಡ್ 19 ಎರಡನೇ ಅಲೆ ಮಾಹಮಾರಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಡವರು ತುಂಬಾ ತೊಂದರೆಗೆ ಒಳಪಡುತ್ತಿದ್ದಾರೆ.
ರಾಜ್ಯದಲ್ಲಿ ಲಾಕ್ ಡೌನ್ ಆಗಿರುವುದರಿಂದ ಕೂಲಿ ಕೆಲಸವಿಲ್ಲದೆ ಬದುಕು ಮೂರ ಬಟ್ಟೆಯಾಗಿದೆ.ಹೊಟ್ಟೆಗೆ ಊಟವಿಲ್ಲದೇ ಕೈಯಲ್ಲಿ ದುಡ್ಡಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನ ಸಾಮಾನ್ಯರು ಆಸ್ಪತ್ರೆಗೆ ಹೋದರೆ ಚಿಕಿತ್ಸೆಗೆ ಹಣವಿಲ್ಲದೆ ಕಣ್ಣಿರು ಹಾಕುತ್ತಿದ್ದರೆ. ರಾಜ್ಯ ಸರ್ಕಾರ ಉಚಿತವಾಗಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಗಳಲ್ಲಿ ಉಚಿತ ಕರೋನಾ ಚಿಕಿತ್ಸೆ ಒದಗಿಸಲು ಸರ್ಕಾರ ಶೀಘ್ರದಲ್ಲಿ ಆದೇಶ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.